Advertisement

ಭ್ರಷ್ಟಾಚಾರಿಗಳಿಗೆ ಕಡಿವಾಣ ಹಾಕೋದಕ್ಕೆ ಈ ಬಜೆಟ್ ಉತ್ತರ:ಪ್ರಧಾನಿ ಮೋದಿ

02:40 PM Feb 01, 2017 | Team Udayavani |

ಹೊಸದಿಲ್ಲಿ : ಸಂಸತ್ತಿನಲ್ಲಿ ಇಂದು ಬುಧವಾರ ವಿತ್ತ ಸಚಿವ ಅರುಣ್‌ ಜೇತ್ಲಿ ಮಂಡಿಸಿರುವ ಬಜೆಟ್‌ ದೇಶದ ಹಳ್ಳಿಗರು, ರೈತರು ಮತ್ತು ಬಡಜನರ ಕಲ್ಯಾಣಕ್ಕೆ ಮೀಸಲಾಗಿರುವ ಬಜೆಟ್‌ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

“ಈ ಬಜೆಟ್‌ ನಮ್ಮ ದೇಶದ ಜನಜೀವನದ ಹಲವು ಸ್ತರಗಳಲ್ಲಿ  ಮಹತ್ತರ ಬದಲಾವಣೆಗಳನ್ನು ತರಲಿದೆ; ಸಣ್ಣ ಉದ್ದಿಮೆದಾರರಿಗೆ ಜಾಗತಿಕ ಮಾರುಕಟ್ಟೆಗೆ ತಕ್ಕಂತೆ ಸ್ಪರ್ಧಾತ್ಮಕವಾಗಿರುವುದಕ್ಕೆ ನೆರವಾಗುತ್ತದೆ’ ಎಂದು ಮೋದಿ ಬಜೆಟ್‌ ಅಧಿವೇಶನದ ಬಳಿಕ ದೇಶವನ್ನು ಉದ್ದೇಶಿಸಿ ಮಾಡಿದ ವಿಶೇಷ ಭಾಷಣದಲ್ಲಿ ಹೇಳಿದರು. 

“ಭ್ರಷ್ಟಾಚಾರ ಮತ್ತು ಕಪ್ಪು ಹಣವನ್ನು ತೊಡೆದು ಹಾಕುವ ಸರಕಾರದ ಬದ್ಧತೆಯನ್ನು ಈ ಬಜೆಟ್‌ ಪ್ರತಿಫ‌ಲಿಸುತ್ತದೆ. ಅತ್ಯಂತ ಮಹತ್ತರ ಘೋಷಣೆಯಾಗಿ  ವಿತ್ತ ಸಚಿವ ಜೇತ್ಲಿ ಅವರು ರಾಜಕೀಯ ಪಕ್ಷಗಳು ಪಡೆಯುವ ನಗದು ದೇಣಿಗೆಯನ್ನು 2,000 ರೂ.ಗಳಿಗೆ ಸೀಮಿತಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿ ರಾಜಕೀಯ ಪಕ್ಷಗಳಿಗೆ ನೀಡಲಾಗುವ ದೇಣಿಗೆಯಲ್ಲಿ ಪಾರದರ್ಶಕತೆ ಕಂಡುಬರುವುದಲ್ಲದೆ ಭವಿಷ್ಯದಲ್ಲಿ ಕಾಳ ಧನ ಸೃಷ್ಟಿಯಾಗುವುದನ್ನು ಈ ಕ್ರಮವು ಪರಿಣಾಮಕಾರಿಯಾಗಿ ತಡೆಯಲಿದೆ’ ಎಂದು ಮೋದಿ ಹೇಳಿದರು. 

“ಈ ಬಜೆಟ್‌ ದೇಶದ ಆರ್ಥಿಕತೆಯನ್ನು ಇನ್ನಷ್ಟು ಬಲಿಷ್ಠಗೊಳಿಸಿ ಅದಕ್ಕೆ ಹೊಸ ಅರ್ಥವನ್ನು ನೀಡಲಿದೆ’ ಎಂದು ಮೋದಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next