Advertisement

Budget 1,120 ಹೊಸ ವಿಮಾನಗಳು ಶೀಘ್ರ ಕಾರ್ಯಾಚರಣೆ

12:11 AM Feb 02, 2024 | Team Udayavani |

ಭಾರತದಲ್ಲಿ ವಿಮಾನ ಪ್ರಯಣಿಕರ ಸಂಖ್ಯೆ ದಿನೇದಿನೆ ಏರಿಕೆಯಾಗುತ್ತಿದೆ. ದೇಶದಲ್ಲಿ ಹೊಸದಾಗಿ ಶೀಘ್ರ 1,120 ವಿಮಾನಗಳು ಹಾರಾಟ ಆರಂಭಿಸಲಿವೆ.

Advertisement

ಭಾರತವು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ನಾಗರಿಕ ವಿಮಾನಯಾನ ಮಾರುಕಟ್ಟೆಗಳಲ್ಲಿ ಒಂದಾಗಿದೆ. ದೇಶೀಯ ವಿಮಾನ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ. ಕಳೆದ 10 ವರ್ಷಗಳಲ್ಲಿ ದೇಶದಲ್ಲಿರುವ ವಿಮಾನ ನಿಲ್ದಾಣಗಳ ಸಂಖ್ಯೆ 149ಕ್ಕೆ ಏರಿಕೆಯಾಗಿದೆ. ಭಾರತದ ಏರ್‌ಲೈನ್‌ ಕಂಪೆನಿಗಳು ಹೊಸದಾಗಿ 1,000ಕ್ಕೂ ಹೆಚ್ಚು ವಿಮಾನಗಳ ಆರ್ಡರ್‌ ಮಾಡಿವೆ. ಉಡಾನ್‌(ಉಡೇ ದೇಶ್‌ ಕೀ ಆಮ್‌ ನಾಗರಿಕ್‌) ಯೋಜನೆಯಡಿಯಲ್ಲಿ 2ನೇ ಮತ್ತು 3ನೇ ಹಂತದ ನಗರ ಗಳಿಗೆ ವಾಯು ಯಾನ ಸಂಪರ್ಕವು ವ್ಯಾಪ ಕವಾಗಿ ಬೆಳವಣಿ ಗೆಯಾಗಿದೆ. 517 ಹೊಸ ಮಾರ್ಗಗಳಲ್ಲಿ 1.3 ಕೋಟಿ ಮಂದಿ ಪ್ರಯಾಣಿಸುತ್ತಿದ್ದಾರೆ. ಕೈಗೆಟುವ ದರದಲ್ಲಿ ಸಾಮಾನ್ಯ ಜನರು ವಿಮಾನ ಯಾನ ಕೈಗೊಳ್ಳುವಂತೆ ಮಾಡು ವುದು ಉಡಾನ್‌ ಯೋಜ ನೆಯ ಗುರಿ. ಒಂದು ವರ್ಷಕ್ಕೂ ಕಡಿಮೆ ಅವಧಿಯಲ್ಲಿ ಏರ್‌ ಇಂಡಿಯಾ, ಅಕಾಶ ಏರ್‌ ಮತ್ತು ಇಂಡಿಗೋ ಏರ್‌ಲೈನ್ಸ್‌ ಒಟ್ಟು 1,120 ವಿಮಾ  ನ ಗಳಿಗೆ ಆರ್ಡರ್‌ ಮಾಡಿವೆ. ಕಳೆದ ತಿಂಗಳು ಆಕಾಶ ಏರ್‌ 150 ಬೋಯಿಂಗ್‌ 737 ಮ್ಯಾಕ್ಸ್‌ ವಿಮಾನಗಳಿಗೆ ಆರ್ಡರ್‌ ಮಾಡಿದೆ. 2023ರಲ್ಲಿ ಏರ್‌ ಇಂಡಿಯಾ ಮತ್ತು ಇಂಡಿಗೊ ಏರ್‌ಲೈನ್ಸ್‌ ಬೋಯಿಂಗ್‌ ಮತ್ತು ಏರ್‌ಬಸ್‌ ಕಂಪೆನಿಗಳಿಗೆ 970 ವಿಮಾನಗಳಿಗೆ ಆರ್ಡರ್‌ ಮಾಡಿವೆ. ದೇಶದಲ್ಲಿ ಈಗಿರುವ ವಿಮಾನ ನಿಲ್ದಾಣಗಳ ವಿಸ್ತರಣೆ ಮತ್ತು ಹೊಸ ವಿಮಾನ ನಿಲ್ದಾಣಗಳ ಅಭಿ ವೃದ್ಧಿ ತೀವ್ರಗತಿಯಲ್ಲಿ ಮುಂದುವರಿಯಲಿದೆ ಎಂದು ನಿರ್ಮಲಾ ಹೇಳಿದರು.

ವಿದ್ಯುಚ್ಛಾಲಿತ ವಾಹನಗಳ ಉತ್ಪಾದನೆ, ಬಳಕೆಗೆ ಒತ್ತು
ಸಕಾಲದಲ್ಲಿ ಸರಿಯಾದ ಕ್ರಮ ಎಂಬಂತೆ ನಿರ್ಮಲಾ ಅವರ ಮಧ್ಯಾಂತರ ಬಜೆಟ್‌ನಲ್ಲಿ ವಿದ್ಯುಚ್ಛಾಲಿತ ವಾಹನಗಳ ಚಾರ್ಜಿಂಗ್‌ ಮತ್ತು ಉತಾ ³ದನೆಯ ಮೂಲ ಸೌಕರ್ಯ ಸಹಿತ ಒಟ್ಟಾ ರೆಯಾಗಿ ದೇಶದಲ್ಲಿ ಎಲೆಕ್ಟ್ರಿಕ್‌ ವಾಹನಗಳ
ಕ್ಷೇತ್ರಕ್ಕೆ ದೊಡ್ಡ ಮಟ್ಟದ ಬೆಂಬಲವನ್ನು ಕೇಂದ್ರ ಸರಕಾರ ನೀಡುವ ಘೋಷಣೆ ಯಾಗಿದೆ. ಸಾರ್ವ ಜನಿಕ ಸಾರಿಗೆ ಗಾಗಿ ಎಲೆಕ್ಟ್ರಿಕ್‌ ಬಸ್‌ಗಳ ಬಳಕೆಗೆ ಉತ್ತೇಜನ ನೀಡುವ ಸುಳಿವನ್ನು ನಿರ್ಮಲಾ ನೀಡಿದ್ದಾರೆ. ಇದಕ್ಕಾಗಿ ಪಾವತಿ ಭದ್ರತೆ ವ್ಯವಸ್ಥೆಗಳನ್ನು ಬಳಸಿಕೊ ಳ್ಳ  ಲಾಗುತ್ತದೆ ಎಂದು ವಿತ್ತ ಸಚಿವೆ ಹೇಳಿದ್ದಾರೆ.

ಸಾರಿಗೆ ಉದ್ದೇಶದ ಬಳಕೆಗೆ ಮತ್ತು ಕೊಳವೆಗಳ ಮೂಲಕ ಮನೆ ಮತ್ತು ಇತರೆ ಉಪಯೋಗಕ್ಕೆ ಕಂಪ್ರಸ್ಡ್ ಬಯೋ ಗ್ಯಾಸ್‌ ಮತ್ತು ಕಂಪ್ರಸ್ಡ್ ನ್ಯಾಚುರಲ್‌ ಗ್ಯಾಸ್‌ಗಳನ್ನು ಮಿಶ್ರ ಮಾಡಿ ಬಳಸುವುದು ಕಡ್ಡಾಯ ಎಂದಿದ್ದಾರೆ. ಅಲ್ಲದೆ ಬಯೋಡಿ ಗ್ರೇಡೇಬಲ್‌ಗ‌ಳ ಉತ್ಪಾದನೆಗೆ ಪರಿಸರಸಹ್ಯ ಪರ್ಯಾಯವಾಗಿ ಬಯೋ ಮ್ಯಾನ್ಯು ಫ್ಯಾಕ್ಚರಿಂಗ್‌ ಮತ್ತು ಬಯೋ ಫೌಂಡ್ರಿ ಯೋಜನೆಗಳನ್ನೂ ಪ್ರಕಟಿಸಲಾಗಿದೆ.

ಬಯೋ ಮ್ಯಾನ್ಯುಫ್ಯಾಕ್ಚರಿಂಗ್‌ ಎಂದರೇನು?

Advertisement

ಸಾವಯವ ವಸ್ತುಗಳು ಸಹಜವಾಗಿ ಕೊಳೆತು ಕರಗುವ ಪ್ರಕ್ರಿಯೆಯನ್ನೇ ನಡೆಸಿಕೊಡುವ ಮಾನವಕೃತ ಯಾಂತ್ರಿಕ ವ್ಯವಸ್ಥೆ. ಇದರಿಂದ ಲಭ್ಯವಾಗುವ ಅನಿಲ, ಕಾಂಪೋಸ್ಟ್‌
ನಂತಹ ಉತ್ಪನ್ನಗಳನ್ನು ಬೇರೆ ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತದೆ. ನಗರ-ಪಟ್ಟಣಗಳ ಜೈವಿಕ ತ್ಯಾಜ್ಯದ ಸಹ್ಯ ವಿಲೇವಾರಿಗೆ ಸೂಕ್ತವಾಗಬಲ್ಲ ವ್ಯವಸ್ಥೆ ಇದು.

ಶೂನ್ಯ ಇಂಗಾಲ ಗುರಿಗಾಗಿ ಹಸುರು ಶಕ್ತಿಗೆ ಉತ್ತೇಜನ
2070ನೇ ಇಸವಿ ಹೊತ್ತಿಗೆ “ಶೂನ್ಯ ಇಂಗಾಲ ಅನಿಲ’ ಗುರಿ ಸಾಧನೆಯ ನಿಟ್ಟಿನಲ್ಲಿ ಪೂರಕ ಕ್ರಮಗಳನ್ನು ನಿರ್ಮಲಾ ಪ್ರಕಟಿಸಿದ್ದಾರೆ. ಶಕ್ತಿಯ ಉತ್ಪಾದನೆಗೆ ಈಗ ಬಳಕೆ ಯಾಗುತ್ತಿರುವ ಪಳೆಯುಳಿಕೆ ಮೂಲದ ಕಲ್ಲಿದ್ದಲು, ಪೆಟ್ರೋಲ್‌, ಡೀಸೆಲ್‌ ಮತ್ತಿತರ ಇಂಧನಗಳಿಗೆ ಪರ್ಯಾಯವಾಗಿ ಪರಿಸರಸಹ್ಯ ವಾದ ಮತ್ತು ಪರಿಸರ ಸಹಜವಾದ ಸೌರ, ಪವನ ಮತ್ತಿತರ ಹಸಿರು ಇಂಧನ ಬಳಕೆ “ಹಸುರು ಶಕ್ತಿ’ಯ ತಿರುಳು.

ಸಮುದ್ರ-ಸಾಗರದಲ್ಲಿ ಆರಂಭಿಕವಾಗಿ 1 ಗಿಗಾ ವ್ಯಾಟ್‌ ಪವನ ವಿದ್ಯುತ್‌ ಉತ್ಪಾ ದನೆಯ ಅವಕಾಶ ಗಳನ್ನು ಬಳಸಿಕೊಳ್ಳು ವುದಕ್ಕೆ ಅಗತ್ಯ ಬಂಡವಾಳ ಹೂಡಿಕೆ.

2030ರ ಒಳಗಾಗಿ 100 ಮೆಗಾ ಟನ್‌ ಸಾಮ ರ್ಥ್ಯದ ಕಲ್ಲಿದ್ದಲನ್ನು ಅನಿಲ ಮತ್ತು ದ್ರವರೂಪಕ್ಕೆ ಪರಿವರ್ತಿಸುವ ಘಟಕ ಸ್ಥಾಪನೆ. ಇದರಿಂದ ನೈಸರ್ಗಿಕ ಅನಿಲ, ಮೆಥನಾಲ್‌, ಅಮೋನಿಯಾ ಆಮದಿನ ಮೇಲೆ ಅವಲಂಬನೆಯೂ ಇಳಿಕೆ.

ಸಿಎನ್‌ಜಿ, ಸಿಬಿಜಿ ಜತೆಗೆ ಮಿಶ್ರಣ ಮಾಡಿಯೇ ಸಾರಿಗೆ ಮತ್ತು ಗೃಹ ಬಳಕೆ ಕಡ್ಡಾಯ ನಿಯಮ ಹಂತ ಹಂತವಾಗಿ ಜಾರಿ.

ಹಸುರು ಶಕ್ತಿ ಎಂದರೇನು?

ಭೂವಾತಾವರಣ ಕೆಡಲು ಕಲ್ಲಿದ್ದಲು, ಪೆಟ್ರೋಲ್‌, ಡೀಸೆಲ್‌ನಂತಹ ಇಂಧನಗಳು ಕಾರಣ. ಇವುಗಳ ಮೇಲಿನ ಅವಲಂಬನೆ ಯನ್ನು ಕಡಿಮೆ ಮಾಡುತ್ತ ಇಂಗಾಲದ ಅನಿಲ ವಾತಾವರಣಕ್ಕೆ ಬಿಡುಗಡೆಗೊಳ್ಳು ವುದನ್ನು ಶೂನ್ಯಕ್ಕಿಳಿಸಬೇಕಾಗಿದೆ. ಇದಕ್ಕೆ ನವೀಕರಿಸಬಹುದಾದ ಮೂಲಗಳು, ಇಂಗಾಲ ಅನಿಲ ಉತ್ಪಾದಿಸದ ಪರಿಸರಸಹ್ಯ ಮೂಲಗಳನ್ನು ಇಂಧನವಾಗಿ ಬಳಸಿ ಶಕ್ತಿಯನ್ನು ಉತ್ಪಾದಿಸಬೇಕು. ಇದುವೇ “ಹಸುರು ಶಕ್ತಿ’.

Advertisement

Udayavani is now on Telegram. Click here to join our channel and stay updated with the latest news.

Next