Advertisement

ಬುಡಾರ್‌ ಖುರ್ದ್ ಜಗತ್ತಿಗೇ ತಂಗುಮನೆ

07:30 AM Apr 15, 2018 | |

ಇಲ್ಲಿ ನೀವು ಯಾರ ಮನೆಯಲ್ಲಿ ಬೇಕಾದರೂ ಅತಿಥಿಯಾಗಬಹುದು. ಊರಿನ ಸುಮಾರು ನೂರು ಮನೆಗಳಲ್ಲಿ ಯಾವ ಹೊತ್ತಿಗೂ ಯಾರ ಮನೆಗೂ ಅಪ್ಪಣೆ ಇಲ್ಲದೆ ನುಗ್ಗಬಹುದು. ನಿಮಗೆ ಇಷ್ಟವಾದ ಮನೆಯ ವ್ಯವಸ್ಥೆ ನೋಡಿಕೊಂಡು ಅಲ್ಲಿ ಉಳಿದು ಕೊಳ್ಳಬಹುದು. 

Advertisement

ಹೋದವರ ಮನೆಯಲ್ಲಿ ಜಾಗವಿಲ್ಲದಿದ್ದರೆ ಅವರು ಯಾವ ಮುಲಾಜೂ ಇಲ್ಲದೆ ನಿಮ್ಮ ಲಗೇಜು ಎತ್ತಿಕೊಂಡು ಪಕ್ಕದ ಮನೆಗೆ ನುಗ್ಗುತ್ತಾರೆ. ಅಲ್ಲಿರುವ ಮಧ್ಯದ ಮಂಚದ ಮೇಲೆ ನಿಮ್ಮ ಬ್ಯಾಗು ಇಳಿಸಿ ನಿಮಗೆ ಉಳಿವ‌ ಅನುಕೂಲ ಮಾಡಿ ಹೊರಡುತ್ತಾರೆ. ಹೊರಗೆಲ್ಲಾ ಚಳಿಚಳಿ ಕೊರೆಯುವ ಗಾಳಿ ಬೀಸುತ್ತಿದ್ದರೆ ಒಳಗೆ ಒಮ್ಮೆ ಬಂದು ನಾಲ್ಕಿಂಚು ದಪ್ಪದ ಗೋಣಿ ನೆಲದ ಮೇಲೆ ಕಾಲೂರುತ್ತಿದ್ದಂತೆ ಹಿತವಾದ ಅನುಭವಕ್ಕೆ ಈಡಾಗಿ ಮೈ ಚೆಲ್ಲುತ್ತೀರಿ. ಇದು ಯಾವದೇ ಅತಿಥಿಗೂ ಆಶ್ರಯ ನೀಡುವ ಊರು. ಅದಕ್ಕೆ ಇದು ಜಗತ್ತಿನ ಯಾವುದೇ ಭಾಷೆಯ ಯಾವುದೇ ಜನಾಂಗದವರು ಬಂದರೂ ಇಲ್ಲಿ ಎಲ್ಲರೂ ಸಮಾನರೇ ಎಲ್ಲರೂ ಅತಿಥಿಗಳೇ. ವರ್ಷದ ಆರು ತಿಂಗಳು ರಸ್ತೆ ಸಂಪರ್ಕ ಇದ್ದಾಗ ಬದುಕು ಕಟ್ಟಿಕೊಳ್ಳಲು ಇಲ್ಲಿನ ಖುರ್ದಿಗಳು ಕಂಡುಕೊಂಡಿರುವ ಉಪಾಯ. 


ಶ್ರೀನಗರದಿಂದ ಲೇಹ್‌ಕ್ಕೆ ಹೊರಡುವ ಹೆಚ್ಚಿನ ಪ್ರವಾಸಿಗರು ಯೋಜಿತ ಪ್ರವಾಸ ಮಾಡುವುದರಿಂದ ಒಂದೋ ಕಾಶ್ಮೀರದ ಆಸುಪಾಸಿನಲ್ಲಿ ತಂಗುತ್ತಾರೆ ಅಥವಾ ಅದಕ್ಕೂ ಮುಂದೆ ಮುಲೆಕ್‌. ಅದಕ್ಕೂ ಹೆಚ್ಚು ಕ್ರಮಿಸುವುದೇ ಇಲ್ಲ. ಉಳಿದದ್ದೇನಿದ್ದರೂ ಅತ್ತಲಿನ ಲೇಹ್‌ ಗಡಿಗೆ ಸೇರಿಕೊಳ್ಳುವುದರಿಂದ ಇತ್ತಲಿನ ವ್ಯವಸ್ಥಾಪಕರು ಇದೇ ಪದ್ಧತಿ ಅನುಸರಿಸುತ್ತಾರೆ. ಆದರೆ, ಬೈಕ್‌ ಮೇಲೆ ತೆರಳುವವರು, ಸ್ವಂತದ ಕಾರು ಇನ್ನಿತರ ವಾಹನ ಸವಾರರು ಹೀಗೆ ಯೋಜಿತವಲ್ಲದೇ ಹೊರಡುವವರಿಗೆ ಅಲ್ಲಲ್ಲಿ ವಸತಿ ಸೌಕರ್ಯವಿದೆಯಾದರೂ, ಹೆಚ್ಚಿನವರು ಹೋಟೆಲ್‌ಗ‌ಳಲ್ಲಿಯೇ ತಂಗುತ್ತಾರೆ. ದುಬಾರಿಯಾದರೂ ಬೆಳಿಗ್ಗೆ ಬಿಸಿನೀರು ಇತ್ಯಾದಿಗಳಿಗಾಗಿ ಮೊದಲೇ ಇದನ್ನು ಆಯ್ದುಕೊಂಡಿರುತ್ತಾರೆ. ಅದರೆ ಪ್ರಕೃತಿಪ್ರಿಯರಿಗೆ ಹೀಗೆಯೇ ಎಂದಿರುವುದೇ ಇಲ್ಲ. ಎಲ್ಲೆಲ್ಲಿ ಸರಿ ಕಾಣುತ್ತೋ ಅಲ್ಲಿ ನಿಂತು ಮುಂದಕ್ಕೆ ಹೊರಡುತ್ತಿರುತ್ತಾರೆ. 

ಹಾಗೆ ಹೊರಡುವ ಸವಾರರು ಪ್ರವಾಸಿಗರಿಗೆ ಬುಡಾರ್‌ ಖುರ್ದ್ ಹೇಳಿ ಮಾಡಿಸಿದ ಪ್ರದೇಶ. ಸುತ್ತ ಹಿಮದ ಹೊಡೆತಕ್ಕೆ ಸಿಕ್ಕು ಬರಡೆದ್ದು ಹೋಗಿರುವ ಪರ್ವತ ಪ್ರದೇಶದ ಇಳುಕಲಿನಲ್ಲಿ ಸಮೃದ್ಧವಾಗಿ ಹರಿಯುವ ವಾಘಾ ನದಿ ಇದಿಷ್ಠನ್ನೆ ಹಸಿರಾಗಿಟ್ಟು ಅಚ್ಚರಿ ಹುಟ್ಟಿಸುತ್ತದೆ. ಎಲ್ಲಾ ಮನೆಗಳಲ್ಲಿ ಒಂದು ಅಥವಾ ಎರಡು ಹಾಲ್‌ಗ‌ಳಿರುತ್ತವೆ. ಮನೆಯವರೂ ಅದರ ಪಕ್ಕದ ಕೋಣೆಯಲ್ಲೇ ವಾಸವಿರುತ್ತಾರೆ. ಈ ಹಾಲ್‌ನಲ್ಲಿ ನಾಲ್ಕರಿಂದ ಆರು ಮಂಚದವರೆಗೂ ಹಾಕಲಾಗಿದ್ದು ಬೆಚ್ಚನೆಯ ಹಾಸಿಗೆ ಹೊದಿಕೆ ಸಿದ್ಧವಿರುತ್ತದೆ. ಆರಂಭದಲ್ಲೇ ಇರುವ ಕೋಣೆ ಡೈನಿಂಗ್‌ಹಾಲ್‌ ತರಹ ಉಪಯೋಗ ಕೆಲವೊಮ್ಮೆ ಊಟೋಪಚಾರವೆಲ್ಲ ಮಂಚದ ಮೇಲೆಯೇ ನಡೆಯುತ್ತದೆ. ಬಿಸ್ಕೇಟು, ಮ್ಯಾಗಿ ಸೇರಿದಂತೆ ಟೀ, ಕಾಫಿ ಜೊತೆಗೆ ಊಟಕ್ಕೆ ರೋಟಿ ಮತ್ತು ದಾಲ್‌ ಇಲ್ಲಿನ ಕಾಮನ್‌ ಮೆನು. ನಿಮ್ಮ ಆಯ್ಕೆಗನು ಗುಣವಾಗಿ ಸರ್ವೀಸು. ಮನೆಯವರು ಅಲ್ಲಲ್ಲೆ ತಯಾರಿಸಿ ಕೊಡುವುದರಿಂದ ರುಚಿಯಾಗೂ ಶುಚಿಯಾಗೂ ಇರುತ್ತದೆ. ಸಂಜೆಯ ಹೊತ್ತಿಗೆ ಬಂದು ಬೆಳಗ್ಗೆ ಹೊರಡುವ ಪ್ರವಾಸಿಗರಿಗೆ ಇದು ಹೇಳಿ ಮಾಡಿಸಿದ ತಾಣ. ಹಾಗಾಗಿ, ಪ್ರತಿ ಮನೆಯೂ ಅವರವರ ಅಳತೆಗನುಗುಣವಾಗಿ ನಾಲ್ಕು ಐದು ಕೆಲವು ಕಡೆಯಲ್ಲಿ ಹತ್ತು ಜನರವರೆಗೂ ಪ್ರವಾಸಿಗರಿಗೆ ಜಾಗ ಪೂರೈಸುತ್ತಾರೆ. ಕೋರಿಕೆಯ ಮೇರೆಗೆ ಬಿಸಿನೀರು ಲಭ್ಯ. ಹೆಚ್ಚಿನವರು ಲೇಹ್‌ ತಲುಪುವ ನಿರೀಕ್ಷೆಯಲ್ಲಿ ಬೆಳಿಗ್ಗೆ ಹಾಗೇ ಬೇಗ ಹೊರಡುತ್ತಾರೆ. 

ನಿರ್ಮಾನುಷ ತಾಣ
ಸಾಮಾನ್ಯವಾಗಿ ಮುಲೆºàಕ್‌ ನಂತರ ಸಿಕ್ಕುವ ನಮ್ಕೀಲಾ ಪಾಸ್‌ ಮತ್ತು ಆಚೆಗಿನ ಲಮಾಯುರು ಮೊದಲು ಸಿಕ್ಕುವ ವಿಲಾಸಿ ಹೋಟೆಲುಗಳ ಆಲಿc ಇವೆಲವನ್ನು ತಲುಪುವ ಮೊದಲು, ತೀರ ನಿರ್ಮಾನುಷ್ಯವಾದ ಅತಿದೊಡ್ಡ ಪ್ರದೇಶ ಹಾಯ್ದು ಹೋಗಬೇಕಾಗುತ್ತದೆ. ಎರಡೂ ಕಡೆ ಉಸಿರಿಗೆ ಬೇಕೆಂದರೂ ಮನುಷ್ಯರೇ ಸುಳಿವೇ ಇಲ್ಲದ ಅಗಾಧ ಪ್ರಪಾತ ಅಥವಾ ಅದರ ಎರಡರಷ್ಟು ಎತ್ತರದ ಅನಾಹುತಕಾರಿ ಅಳತೆಯ ಪರ್ವತ ಪ್ರದೇಶಗಳ ಬಣ್ಣ ಬಣ್ಣದ ನೆರಳು ಬೆಳಕಿನಾಟ ದಂಗು ಬಡಿಸುತ್ತದೆ. ಇದು ಹೆಚ್ಚಿನ ಪ್ರವಾಸಿಗರಿಗೆ ಫೋಟೊಗ್ರಫಿಗೆ ಹೇಳಿ ಮಾಡಿಸಿದ ತಾಣ. ಇಲ್ಲಿ ಸಮಯ ಕಳೆಯದ ಪ್ರವಾಸಿಗರೇ ಇಲ್ಲ. 

ನಿರಂತರ ದಾರಿಯುದ್ದಕ್ಕೂ ಎಲ್ಲಿ ನಿಂತರೂ ಚಿತ್ರ ಜಗತ್ತಿನ ಸಂತೆಯಂತೆ ಇರುವ ನಮ್ಕೀಲಾ ಪಾಸ್‌ ಪಾದಕ್ಕಿಳಿಯುವ ಮುನ್ನ ಅದರ ಜತೆಗೆ ಸಾಗುವ ವಾಘಾ ನದಿಯ ಹರಿವನ್ನು ವೀಕ್ಷಿಸದಿರುವವರೇ ಇಲ್ಲ. ಇದು ಒಮ್ಮೆ ಎಡಕ್ಕೂ ಒಮ್ಮೆ ಬಲಕ್ಕೂ ಚಲಿಸುತ್ತಾ ಹಿಮ್ಮೇಳ ಕೊಡುತ್ತಿದ್ದರೆ ಶಾರ್ಗೋಲ್‌ ವ್ಯಾಲಿಯ ಸಂದಿನಲ್ಲಿ ಸಾಲಾಗಿ ಸಿನೇಮಾ ಸೆಟ್ಟಿನಂತೆ ಪೇರಿಸಿಟ್ಟ ಮನೆಗಳ ಸಂತೆಯೇ ಬುಡಾರ್‌ ಖುದ್‌ì. ಅದಾದ ಮರುಘಳಿಗೆಯಲ್ಲೇ ಪ್ರತ್ಯಕ್ಷವಾಗುತ್ತದೆ ಫಾಟುಲಾ ಪಾಸ್‌. ಅದರಾಚೆಗೆ ಸಂಝಾಕ್‌, ಅದಕ್ಕೂ ಮೊದಲೇ ಕಂಗ್ರಾಲ್‌ ವ್ಯಾಲಿ. ಹೀಗೆ ಇಲ್ಲಿ ನಿಲ್ಲದಿದ್ದರೆ ಲೇಹ್‌ದ ಪ್ರವಾಸಿ ಕನಸು ಅಪೂರ್ಣವಾಗುತ್ತದೆ. ಹಾಗಂತ ಇಲ್ಲಿ ತಡ ಮಾಡಿದರೆ ಲೇಹ್‌ ತಲುಪುವಾಗ ತೀರ ತಡವಾಗುತ್ತದೆ. ಹೀಗೆ ಅನಿವಾರ್ಯಕ್ಕೂ ಆವಶ್ಯಕತೆಗೂ ಒದಗಿ ಬಂದಿದ್ದು ಬುಡಾರ್‌ ಖುರ್ದ್. 

Advertisement

ಅಕ್ಷರಶಃ ಪ್ರವಾಸಿಗರಿಗಾಗಿಯೇ ಮೀಸಲಿಟ್ಟಂತೆ ವ್ಯವಸ್ಥೆ ಮಾಡಿಕೊಂಡಿರುವ ಸ್ಥಳೀಯರ ಈ ಆದರಾತಿಥ್ಯ, ನಮಗೆ ಬೇಕಿದೆಯೋ ಬೇಡಿದೆಯೋ ಅಲ್ಲಿ ತಂಗುವಂತೆ ಮಾಡುತ್ತದೆ. ಅದರಲ್ಲೂ ಕೇವಲ ಮೂನ್ನೂರರಿಂದ ನಾಲ್ಕೂನೂರವರೆಗೆ ದರವಿರುವ ಈ ಮನೆಗಳಲ್ಲಿ ಊಟೋಪಚಾರ ಮತ್ತು ಅದರಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಹಾಗಾಗಿ ಪ್ರವಾಸಿಗ ಇಲ್ಲಿ ಚೌಕಾಶಿಗಿಳಿದ ಉದಾಹರಣೆಗಳಿಲ್ಲ. ಕೆಲವೊಮ್ಮೆ ಕೊಟ್ಟಷ್ಟು ಪಡೆದು ಅದೇ ನಗುಮೊಗದಿಂದ ಪುನಃ ಬನ್ನಿ ಎಂದು ವಿದಾಯ ಹೇಳುವ ನಗೆ ಮೊಗದ ಸ್ಥಳೀಯರೂ ವ್ಯವಹಾರಕ್ಕಿಳಿದು ದುಡ್ಡು ಕೀಳಲು ನಿಂತದ್ದಿಲ್ಲ. ಕಾರಣ, ಇದರ ಹಿಂದಿರುವ ನುನ್‌-ಕುನ್‌ ವ್ಯಾಲಿ ಅಥವಾ ಮುಂದಕ್ಕೆ ಹೋದರೆ ಆಲಚಿ. ಇವೆರಡರಿಂದ ಪ್ರವಾಸಿಗರನ್ನು ಸೆಳೆಯಬೇಕೆಂದರೆ ಆದರ ಮತ್ತು ಕಡಿಮೆ ಬೆಲೆ ಎರಡೂ ಇದರ ರಹಸ್ಯವೂ ಹೌದು. ಜೊತೆಗೆ ಸುಮಾರು ಮೂರ್ನಾಲ್ಕು ಕೀ.ಮೀ. ವರೆಗೂ ಅಲ್ಲಲ್ಲಿ ಬಿಸಾಕಿದಂತೆ ಬೆಳೆದಿರುವ ಗ¨ªೆಯ ಬದಿಯ, ಬದುವಿನ ಮೇಲಿರುವ ಗುಂಪು ಮನೆಗಳಲ್ಲಿ ತಂಗುವ, ಚಳಿಗೆ ಬಿಸಿ ಚಹ ಹೀರುತ್ತಾ ಬಿಸಿಲಿಗೆ ಪ್ರತಿಫ‌ಲಿಸುವ ಬೋಳುಗುಡ್ಡಗಳ ನೋಡುತ್ತಾ ಕೂರುವ ಆಮೋದವೇ ಬೇರೆ. ಇದೆಲ್ಲದರ ಜೊತೆಗೆ ನೇರವಾಗಿ ಶ್ರೀನಗರದಿಂದ ಎತ್ತರದ ಪ್ರದೇಶವಾದ ಲೇಹ್‌ ಪ್ರವೇಶಿಸಲು ಯತ್ನಿಸಿದರೆ ದೇಹ ಸಮತೋಲನ ಕಳೆದುಕೊಳ್ಳುವ ಮತ್ತು ಅದರಿಂದಾಗಿ ಪ್ರವಾಸ ಮೊಟಕುಗೊಳಿಸಿ ತತಕ್ಷಣ ಕೆಳಗಿಳಿಯಬೇಕಾದ ಅನಿವಾರ್ಯತೆ ತಲೆದೋರುತ್ತದೆ. ಅದಕ್ಕಾಗಿ ಇಂತಹ ಮಧ್ಯಂತರ ವಸತಿ ಬೇಕೆ ಅಗುತ್ತದೆ. ಅದರಲ್ಲೂ ದರದಲ್ಲೂ, ವ್ಯವಸ್ಥೆಯಲ್ಲೂ ತುಂಬ ಅನುಕೂಲವಾಗುವುದಾದರೆ ಯಾಕಾಗಬಾರದು? 

ಸಂತೋಷ್‌ಕುಮಾರ್‌ ಮೆಹಂದಳೆ

Advertisement

Udayavani is now on Telegram. Click here to join our channel and stay updated with the latest news.

Next