Advertisement

ಕಪ್ಪ ಕೊಟ್ಟಿಲ್ಲ ಎಂದಾದರೆ ಬಿಎಸ್‌ವೈ ನೇಣು ಹಾಕೊಳ್ತಾರ: ಕಾಗೋಡು

03:45 AM Feb 17, 2017 | Team Udayavani |

ತುಮಕೂರು: ಪಕ್ಷದ ಹೈಕಮಾಂಡ್‌ಗೆ ಸಿದ್ದರಾಮಯ್ಯ ಸಾವಿರ ಕೋಟಿ ರೂ. ಕಪ್ಪ ಕೊಟ್ಟಿಲ್ಲ ಎಂಬುದು ಸಾಬೀತಾದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇಣು ಹಾಕಿಕೊಳ್ತಾರ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಪ್ರಶ್ನಿಸಿದರು. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಪಕ್ಷದ ಹೈಕಮಾಂಡ್‌ಗೆ ಸಾವಿರ ಕೋಟಿ ರೂ. ಕಪ್ಪ ನೀಡಿದ್ದಾರೆಂದು ಡೈರಿಯಲ್ಲಿದೆ ಎಂದು ಯಡಿಯೂರಪ್ಪ ಹೇಳಿರುವುದು ಮೂರ್ಖತನದ ಪರಮಾವಧಿ. ಯಡಿಯೂರಪ್ಪ ದಾಖಲೆ ಇಟ್ಟುಕೊಂಡು ಮಾತನಾಡಲಿ ಎಂದರು. ಅವರು ಸಹ ಆಡಳಿತ ನಡೆಸಿದ್ದಾರೆ. ಅಲ್ಲದೆ ಅವರ ಕಾಲದಲ್ಲಿ ಯಾರ್ಯಾರು ಜೈಲಿಗೆ ಹೋಗಿ ಬಂದವರು ಎನ್ನುವುದು ತಿಳಿದಿದೆ. ಈ ಪ್ರಕರಣದಲ್ಲಿ ಒಂದು ವೇಳೆ ಕಪ್ಪ ಕೊಟ್ಟಿಲ್ಲ ಎಂದು ಋಜುವಾದರೆ ಯಡಿಯೂರಪ್ಪ ನೇಣು ಹಾಕಿ ಕೊಳ್ಳುತ್ತಾರಾ ಎಂದು ಮರು ಪ್ರಶ್ನಿಸಿದರು.
**
ಎಸ್‌ಎಂಕೆ, ಪ್ರಸಾದ್‌ ಸ್ವಾರ್ಥಕ್ಕಾಗಿ ಕಾಂಗ್ರೆಸ್‌ ತೊರೆದಿದ್ದಾರೆ
ವಿಜಯಪುರ: ಕಾಂಗ್ರೆಸ್‌ನಲ್ಲಿ 40-50 ವರ್ಷಗಳಿಂದ ನಿಷ್ಠೆಯಿಂದ ದುಡಿದರೂ ಯಾವುದೇ ಅಧಿಕಾರ ಪಡೆಯದ ಸಾವಿರಾರು ಹಿರಿಯ ಕಾರ್ಯಕರ್ತರಿದ್ದಾರೆ. ಪಕ್ಷದಲ್ಲಿ ಸಾಧ್ಯವಿರುವ ಎಲ್ಲ ಅಧಿಕಾರ ಅನುಭವಿಸಿದ ಎಸ್‌.ಎಂ.ಕೃಷ್ಣ, ಶ್ರೀನಿವಾಸ ಪ್ರಸಾದ್‌ ಅವರಂಥವರು ಸ್ವಾರ್ಥಕ್ಕಾಗಿ ಕಾಂಗ್ರೆಸ್‌ ತೊರೆದಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ ಗುಂಡೂರಾವ್‌ ಟೀಕಿಸಿದರು. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳೇ ಜಯ ಸಾಧಿಸಲಿದ್ದಾರೆ. ಆದರೆ ಉಪ ಚುನಾವಣೆ ಫಲಿತಾಂಶ ರಾಜ್ಯ ಸರ್ಕಾರದ ಜನಮತ ಗಣನೆ ಅಲ್ಲ ಎಂದು ಸ್ಪಷ್ಟಪಡಿಸಿದರು.

Advertisement

ರಾಜೀನಾಮೆ ನೀಡಲಿ: ಸಿಎಂ ವಿರುದ್ಧ ಯಡಿಯೂರಪ್ಪ ಆಧಾರ ರಹಿತವಾಗಿ ಲಂಚ, ಭ್ರಷ್ಟಾಚಾರದ ಆರೋಪ ಹೊರಿಸಿದ್ದರು. ಇದೀಗ ಯಡಿಯೂರಪ್ಪ ಅವರೊಂದಿಗೆ ಕೇಂದ್ರ ಸಚಿವ ಅನಂತಕುಮಾರ ಬಿಜೆಪಿ ಹೈಕಮಾಂಡ್‌ಗೆ ಭ್ರಷ್ಟಾಚಾರದಿಂದ ಹಣ ಕಳಿಸಿದ್ದಾಗಿ ಖುದ್ದು ಒಪ್ಪಿಕೊಂಡ ವಿಡಿಯೋ ಸಾûಾಧಾರ ಬಹಿರಂಗವಾಗಿದೆ. ಹೀಗಾಗಿ ನೈತಿಕ ಹೊಣೆ ಹೊತ್ತು ಅನಂತಕುಮಾರ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next