Advertisement

ಬೆಳ್ತಂಗಡಿ ಪ್ರವಾಹ ಹಾನಿ ಕಂಡು ಮುಖ್ಯಮಂತ್ರಿ ದಿಗ್ಭ್ರಮೆ: ಹೊಸಮನೆ ನಿರ್ಮಾಣ ಭರವಸೆ

10:17 AM Aug 13, 2019 | keerthan |

ಬೆಳ್ತಂಗಡಿ: ನೆರೆಪೀಡಿತ ಪ್ರದೇಶಗಳಲ್ಲಿ ಉಂಟಾಗಿರುವ ಹಾನಿ ವೀಕ್ಷಣೆಗೆ ಬೆಳ್ತಂಗಡಿಗೆ ಆಗಮಿಸಿರುವ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಕುಕ್ಕಾವು ಪ್ರದೇಶಕ್ಕೆ ಭೇಟಿ ನೀಡಿದರು.

Advertisement

ಪ್ರವಾಹದಿಂದ ಉಂಟಾದ ಸಮಸ್ಯೆಯ ಕೇಳಿ ಗಂಭೀರತೆ ಕೇಳಿ ಮುಖ್ಯಮಂತ್ರಿ ಯಡಿಯೂರಪ್ಪ ಆತಂಕ ವ್ಯಕ್ತಪಡಿಸಿದರು.

ಶಾಸಕ ಹರೀಶ್ ಪೂಂಜ, ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳೀನ್ ಕುಮಾರ್, ಪ್ರಭಾಕರ್ ಭಟ್ ಮತ್ತಿರರು ಮುಖ್ಯಮಂತ್ರಿಯವರಿಗೆ ನೆರೆ ಹಾನಿಯ ಬಗ್ಗೆ ಮಾಹಿತಿ ನೀಡಿದರು.

ಹೊಸಮನೆ ನಿರ್ಮಾಣ ಭರವಸೆ
ಭಾರಿ ಮಳೆ, ಪ್ರವಾಹದಿಂದಾಗಿ ಈ ಭಾಗದಲ್ಲಿ 321 ಭಾಗಶಃ ಹಾನಿಯಾದ ಮನೆಗಳಿದ್ದು, 275 ಮನೆಗಳಿಗೆ ಸಂಪೂರ್ಣ ಹಾನಿಯಾಗಿದೆ. ತಾತ್ಕಾಲಿಕ ಪ್ರತಿ ಕುಟುಂಬಕ್ಕೆ 10 ಸಾವಿರ ಪರಿಹಾರ ಘೋಷಣೆ ಮಾಡಿದ ಸಿಎಂ, ಸಂಪೂರ್ಣ ಹಾನಿಯಾದ ಮನೆಗೆ ಹೊಸಮನೆ ನಿರ್ಮಾಣ ಭರವಸೆ ನೀಡಿದರು.

Advertisement

ಹೊಸ ಮನೆ ನಿರ್ಮಾಣ ಆಗುವವರೆಗೆ ತಾತ್ಕಾಲಿವಾಗಿ 5 ಸಾವಿರ ಬಾಡಿಗೆ, ಪ್ರತಿ ಮನೆ ರಿಪೇರಿಗೆ 1 ಲಕ್ಷ ತಕ್ಷಣ ಪರಿಹಾರ, ಹೊಸ ಮನೆ ನಿರ್ಮಾಣಕ್ಕೆ 5 ಲಕ್ಷ ಕೊಡುವ ಘೋಷಣೆ ಮಾಡಿದರು. ಸೈಟ್ ಇಲ್ಲದವರಿಗೆ ಹೊಸ ಸೈಟ್ ನೀಡುವ ಭರವಸೆ ನೀಡಿದ ಅವರು, 15 ದಿವಸದಲ್ಲಿ ಕೆಲಸ ಶುರು ಮಾಡಲು ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next