ಬೆಳಗಾವಿ: ಜಿಲ್ಲೆಯ ಎಲ್ಲ ನಾಯಕರು ಒಂದೇ ತಾಯಿಯ ಮಕ್ಕಳಂತೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಲಿದ್ದು, ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ನಗರದ ಹೊಟೇಲ್ ನಲ್ಲಿ ಶನಿವಾರ ರಾತ್ರಿವರೆಗೂ ನಡೆದ ಅಮಿತ್ ಶಾ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬಿಜೆಪಿ ಪರ ಅಲೆ ಇದೆ. ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯನೋ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ ಎಂದರು.
ಅಮಿತ್ ಶಾ ಅವರು ಸಭೆ ತುಂಬ ತೃಪ್ತಿಯಾಗಿದೆ ಅಂತಾ ಹೇಳಿದ್ದಾರೆ. ಬೆಳಗಾವಿಯಲ್ಲಿ 18 ಕ್ಷೇತ್ರ ಗೆಲ್ಲುತ್ತೇವೆ. ಅಷ್ಟೇ ಅಲ್ಲದೆ ರಾಜ್ಯದಲ್ಲಿ 140ಕ್ಕೂ ಹೆಚ್ಚು ಸೀಟ್ ಗೆದ್ದು ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತೇವೆ. ಪ್ರಧಾನಿ ಮೋದಿ -ಅಮಿತ್ ಶಾ ನಾಯಕತ್ವ ನಮಗಿದೆ. ಕಾಂಗ್ರೆಸ್ ನವರಿಗೆ ಏನಿದೆ ಎಂದರು.
ಅಮಿತ್ ಶಾ ಅವರು ಇನ್ನೊಮ್ಮೆ ರಾಜ್ಯಕ್ಕೆ ಬರುವುದಾಗಿ ಹೇಳಿದ್ದಾರೆ. ಇನ್ನೊಮ್ಮೆ ಅಧಿಕಾರ ಹಿಡಿಯಲು ಬಿಜೆಪಿಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡುವಂತೆ ಹೇಳಿದ್ದಾರೆ. ರಾಜ್ಯದ ಎಲ್ಲಾ ಕಡೆ ಅಮಿತ ಶಾ ಪ್ರವಾಸ ಮಾಡುತ್ತಾರೆ.
Related Articles
ನನಗೆ ಇನ್ನೊಂದು ತಿಂಗಳಲ್ಲಿ 80 ವರ್ಷ ಪೂರ್ಣ ಆಗುತ್ತದೆ. ರಾಜ್ಯದಾದ್ಯಂತ ಪ್ರವಾಸ ಮಾಡಿ ನಿಶ್ಚಿತವಾಗಿಯೂ ರಾಜ್ಯದಲ್ಲಿ ಅಧಿಕಾರ ತರುತ್ತೇವೆ.
ಚುನಾವಣಾ ಮುಗಿಯುವವರೆಗೂ ನಾನು ಮನೆಗೆ ಹೊಗುವುದಿಲ್ಲ. ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ. ಕಾಂಗ್ರೆಸ್ ನ ತಿರುಕನ ಕನಸು ನನಸಾಗುವುದಿಲ್ಲ. ಬಿಜೆಪಿ ಅಧಿಕಾರಕ್ಕೆ ಬರಲಿದೆ. ಅಮಿತ್ ಶಾ ಸಲಹೆ ನೀಡಿದ್ದನ್ನು ತಲೆಬಾಗಿ ಒಪ್ಪಿದ್ದೇವೆ ಎಂದರು.
ಇದನ್ನೂ ಓದಿ: ಕ್ಷೇತ್ರದ ಜನತೆಯ ಎದುರು ಜನ್ಮದಿನ ಆಚರಿಸಿಕೊಳ್ಳುತ್ತಿರುವುದು ಚಿರಸ್ಮರಣೀಯ : ಸಿಎಂ ಬೊಮ್ಮಾಯಿ