Advertisement
ಚರ್ಚೆಗೆ ಪಂಥಾಹ್ವಾನ: ಜೆಡಿಎಸ್ ಅಭ್ಯರ್ಥಿ ಎ.ರಾಧಾಕೃಷ್ಣ ಪರ ತಾಲೂಕಿನ ನಂದಿ ಗ್ರಾಮದಲ್ಲಿ ಭರ್ಜರಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿ ಮಾತನಾಡಿದ ಅವರು, ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಯಾರ್ಯಾರ ಕೊಡುಗೆ ಏನು ಎಂಬುದರ ಬಗ್ಗೆ ಸಾರ್ವಜನಿಕವಾಗಿ ನಾನು ಬಹಿರಂಗ ಚರ್ಚೆ ಸಿದ್ಧನಾಗಿದ್ದು, ಬೇಕಾದರೆ ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಯಡಿಯೂರಪ್ಪ, ಅನರ್ಹ ಶಾಸಕ ಸುಧಾಕರ್ ಬರಲಿ ಎಂದು ಬಹಿರಂಗವಾಗಿ ಪಂಥಾಹ್ವಾನ ನೀಡಿದರು.
Related Articles
Advertisement
ಕತ್ತು ಹಿಸುಕುವ ಕೆಲಸ: ಎತ್ತಿನಹೊಳೆ ಯೋಜನೆ ನೀರು ಈ ಭಾಗಕ್ಕೆ ಹರಿಯಲ್ಲ ಎಂದು ನಾನು ಮೊದಲೇ ಹೇಳಿದ್ದೆ. ಯಾರು ನನ್ನ ಮಾತು ನಂಬಲಿಲ್ಲ ಎಂದರು. ಒಂದು ಕಡೆ ಅನಿತಕ್ಕ ನಮಗೆ ನೆಂಟರು ಎಂದು ಹೇಳಿಕೊಂಡು ತಿರುಗುತ್ತಾನೆ. ನನಗೆ ರಾಜಕೀಯವಾಗಿ ಕತ್ತು ಹಿಸುಕುವ ಕೆಲಸ ಮಾಡಿದ್ದಾನೆ ಎಂದರು.
ಹುಣಸೂರು ಬಿಜೆಪಿ ಅಭ್ಯರ್ಥಿ ವಿಶ್ವನಾಥ ವಿರುದ್ಧ ಕಿಡಿಕಾರಿದ ಕುಮಾರಸ್ವಾಮಿ, ವಿಶ್ವನಾಥ ಇದು ರಾಜಕೀಯ ಧ್ರುವೀಕರಣ ಅಂತ ಹೇಳಿದ್ದಾರೆ. ಖಂಡಿತ ಅಲ್ಲ. ಇದು ರಾಜಕೀಯ ಶುದ್ಧೀಕರಣ ಎಂದರು. ಪ್ರಜಾಪ್ರಭುತ್ವ ವ್ಯವಸ್ಥೆಯೊಂದಿಗೆ ಚೆಲ್ಲಾಟವಾಡುತ್ತಿರುವ ಬಿಜೆಪಿಗೆ ಉಪ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದಾರೆ ಎಂದರು. ಸುಧಾಕರ್ ಅಂತಹ ನಾಯಲಾಕ್ ಜನಪ್ರತಿನಿಧಿಯನ್ನು ಮನೆಗೆ ಕಳಿಸಬೇಕು. ಅನರ್ಹ ಶಾಸಕ ಮತ್ತೆ ಗೆದ್ದು ಬಂದರೆ ಕ್ಷೇತ್ರದ ಜನರಿಗೆ ಭವಿಷ್ಯ ಇರುವುದಿಲ್ಲ ಎಂದರು.
ಜೆಡಿಎಸ್ ಅಭ್ಯರ್ಥಿ ಎ.ರಾಧಾಕೃಷ್ಣ, ಜೆಡಿಎಸ್ ಎಚ್.ಕೆ.ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಶಾಸಕರಾದ ಜೆ.ಕೆ.ಕೃಷ್ಣಾರೆಡ್ಡಿ, ನಿಸರ್ಗ ನಾರಾಯಣಸ್ವಾಮಿ, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಜಿಪಂ ಸದಸ್ಯರಾದ ಕೆ.ಸಿ.ರಾಜಾಕಾಂತ್, ಕೆ.ಎಂ.ಮುನೇಗೌಡ, ಮುಖಂಡರಾದ ಬಾಲಕುಂಟಹಳ್ಳಿ ಮುನಿಯಪ್ಪ, ಅವುಲುಕೊಂಡರಾಯಪ್ಪ, ಕೆ.ಆರ್.ರೆಡ್ಡಿ, ಆರ್.ಮಟಮಪ್ಪ, ನಂದಿ ಮೂರ್ತಿ, ರವಿಕುಮಾರ್ ಉಪಸ್ಥಿತರಿದ್ದರು.
ಮಧ್ಯಂತರ ಚನಾವಣೆಗೆ ಸಿದ್ಧ-ಎಚ್‌ಡಿಕೆ: ಉಪ ಚುನಾವಣೆಯ ಬಳಿಕ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾದರೆ ಎದುರಿಸಲು ಜೆಡಿಎಸ್ ಸಿದ್ಧವಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಜೆಡಿಎಸ್ ಅಭ್ಯರ್ಥಿ ಎ.ರಾಧಾಕೃಷ್ಣ ಪರ ಮತಯಾಚನೆ ನಡೆಸಲು ಆಗಮಿಸಿದ್ದ ವೇಳೆ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ,
ಪದೇ ಪದೆ ಸಿದ್ದರಾಮಯ್ಯ ಮಧ್ಯಂತರ ಚುನಾವಣೆಗೆ ಕಾಂಗ್ರೆಸ್ ಸಿದ್ಧವಾಗಿದೆ ಎಂಬ ಹೇಳಿಕೆ ನೀಡುತ್ತಿರುವ ಕುರಿತು ಪ್ರತಿಕ್ರಿಯಿಸಿ, ಉಪ ಚುನಾವಣೆ ಫಲಿತಾಂಶ ಬರುವವರೆಗೂ ಏನು ಹೇಳಕ್ಕೆ ಆಗುವುದಿಲ್ಲ ಎಂದರು. ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಅನುಕೂಲ ಮಾಡಲು ಜೆಡಿಎಸ್ ಅಭ್ಯರ್ಥಿಯನ್ನು ಕೊನೆ ಕ್ಷಣದಲ್ಲಿ ಬದಲಾವಣೆ ಮಾಡಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸಲಿದೆ ಎಂದರು.