Advertisement

ಬಿಎಸ್‌ವೈ ಮತ್ತೆ ಸಿಎಂ ಆಗಲ್ಲ

06:25 AM Dec 24, 2017 | |

ಹಾವೇರಿ: “ಯಡಿಯೂರಪ್ಪ ಅವರು ಅವರಪ್ಪನ ಆಣೆಗೂ ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ನಗರದಲ್ಲಿ ಶನಿವಾರ ಮಾತನಾಡಿದ ಅವರು, “ಮುಖ್ಯಮಂತ್ರಿಯಾಗಿದ್ದಾಗ ಚೆಕ್‌ ಮೂಲಕ ಲಂಚ ತೆಗೆದುಕೊಂಡು ಸಿಕ್ಕಿ ಬಿದ್ದು, ಜೈಲಿಗೆ ಹೋಗಿ ಬಂದವರನ್ನು ಜನ ಮುಖ್ಯಮಂತ್ರಿ ಮಾಡುತ್ತಾರೆಯೇ? ಜನ ಏನಿದ್ದರೂ ನಮ್ಮನ್ನು ಆಶೀರ್ವದಿಸುತ್ತಾರೆ’ ಎಂದರು.

ಬಿಎಸ್‌ವೈ ಚರ್ಚೆಗೆ ಬರಲಿ: “ನಮ್ಮ ಸರ್ಕಾರದ ಬಗ್ಗೆ ಮಾತನಾಡಲು ಬಿಜೆಪಿಗೆ ನೈತಿಕತೆ ಇಲ್ಲ.  ಕೊಟ್ಟಿರುವ 165 ಭರವಸೆಗಳನ್ನು ಈಡೇರಿಸಿದೆ. ಯಡಿಯೂರಪ್ಪ ಹೊರಗಡೆ ಸುಳ್ಳು ಹೇಳುತ್ತ ಓಡಾಡುತ್ತಿದ್ದಾರೆ. ಅವರು ಮಾಡಿರುವ ಸಾಧನೆಯ ದಾಖಲೆ ತೆಗೆದುಕೊಂಡು ಒಂದೇ ವೇದಿಕೆಗೆ ಬರಲಿ, ನಾವೂ ಬರುತ್ತೇವೆ. ನಾನು ಹೇಳಿರುವುದರಲ್ಲಿ ಏನಾದರೂ ಸುಳ್ಳಿದ್ದರೆ ಜನ ಹೇಳಿದಂತೆ ಕೇಳುತ್ತೇನೆ’ ಎಂದು ಮರು ಸವಾಲು ಹಾಕಿದರು.

ನೀರಾವರಿಗಾಗಿ ನಮ್ಮ ಸರ್ಕಾರ ಪ್ರತಿವರ್ಷ 10 ಸಾವಿರ ಕೋಟಿ ರೂ. ಖರ್ಚು ಮಾಡುವುದಾಗಿ ಹೇಳಿತ್ತು. ಈಗಾಗಲೇ 45 ಸಾವಿರ ಕೋಟಿ ರೂ. ಖರ್ಚು ಮಾಡಿದೆ. ಬಿಜೆಪಿ ಸರ್ಕಾರ ಐದು ವರ್ಷದಲ್ಲಿ ಕೇವಲ 18 ಸಾವಿರ ಕೋಟಿ ರೂ. ಖರ್ಚು ಮಾಡಿದೆ. ಉತ್ತರ ಕರ್ನಾಟಕಕ್ಕೆ ಅವರು 12 ಸಾವಿರ ಕೋಟಿ ರೂ. ಖರ್ಚು ಮಾಡಿದ್ದರು. ನಾವು ಮಾರ್ಚ್‌ ಒಳಗೆ 30 ಸಾವಿರ ಕೋಟಿ ರೂ. ಖರ್ಚು ಮಾಡುತ್ತೇವೆ. ಮಾರ್ಚ್‌ ಒಳಗಡೆ ಇಡೀ ರಾಜ್ಯವನ್ನು ಬಯಲು ಬಹಿರ್ದೆಸೆ ಮುಕ್ತವನ್ನಾಗಿ ಮಾಡುತ್ತೇವೆ ಎಂದರು.

ಕಾಂಗ್ರೆಸ್‌ಗೆ ಮಾಜಿ ಎಂಎಲ್‌ಸಿ ಶ್ರೀನಾಥ ರಾಜೀನಾಮೆ
ಗಂಗಾವತಿ:
ಕಾಂಗ್ರೆಸ್‌ ಪಕ್ಷವನ್ನು ಹೈಜಾಕ್‌ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೂಲ ಕಾಂಗ್ರೆಸ್ಸಿಗರನ್ನು ಸಂಪೂರ್ಣವಾಗಿ ನಿರ್ಲಕ್ಷé ಮಾಡಿದ್ದಾರೆ. ಅವರ ಹಿಟ್ಲರ್‌ ನೀತಿ ಖಂಡಿಸಿ 12 ಮಂದಿ ನಗರಸಭೆ ಸದಸ್ಯರು ಸೇರಿ ತಾವು ಪಕ್ಷಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ವಿಧಾನ ಪರಿಷತ್‌ ಮಾಜಿ ಸದಸ್ಯ ಎಚ್‌.ಆರ್‌.ಶ್ರೀನಾಥ ಘೋಷಿಸಿದ್ದಾರೆ.

Advertisement

ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಕಾಂಗ್ರೆಸ್‌ ನೆಲಕಚ್ಚಿದೆ. ನಾಮ ನಿರ್ದೇಶನಗೊಂಡ ಕಾಂಗ್ರೆಸ್‌ ಕಾರ್ಯಕರ್ತರ ಹೆಸರನ್ನು ಜೆಡಿಎಸ್‌ ಶಾಸಕ ಇಕ್ಬಾಲ್‌ ಅನ್ಸಾರಿ ಕಿತ್ತೂಗೆಸಿ ಜೆಡಿಎಸ್‌ ಮುಖಂಡರು, ಕಾರ್ಯಕರ್ತರಿಗೆ ಪ್ರಾ ಧಿಕಾರದ ಅಧ್ಯಕ್ಷ ಸ್ಥಾನ ಸೇರಿ ವಿವಿಧೆಡೆ ನಾಮ ನಿರ್ದೇಶನ ಮಾಡಿಸಿದ್ದಾರೆ. ಸಿಎಂ ಪ್ರತಿ ವಿಷಯದಲ್ಲಿ ಶಾಸಕ ಅನ್ಸಾರಿ ಮಾತು ಕೇಳುತ್ತಿದ್ದಾರೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ಇಂದಿರಾ ಕಾಂಗ್ರೆಸ್‌ ಅಲ್ಲ, ಸಿದ್ದರಾಮಯ್ಯನವರ ಕಾಂಗ್ರೆಸ್‌. ಸಿದ್ದರಾಮಯ್ಯನವರಿಂದ ಕರ್ನಾಟಕದಲ್ಲಿ ಕಾಂಗ್ರೆಸ್‌ ಅಸ್ತಿತ್ವ ಕಳೆದುಕೊಳ್ಳಲಿದೆ. ಜಾಫರ್‌ ಶರೀಫ್‌, ಜನಾರ್ದನ ಪೂಜಾರಿ, ಮಲ್ಲಿಕಾರ್ಜುನ ಖರ್ಗೆ ಸೇರಿ ಅನೇಕ ಹಿರಿಯ ಮುಖಂಡರನ್ನು ಅವರು ನಿರ್ಲಕ್ಷé ಮಾಡಿದ್ದಾರೆ. ಏಕಾಂಗಿಯಾಗಿ ಬೆಳೆಯಲು ಸರಕಾರದ ಹಣ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್‌ನ ಉದ್ದೇಶ ಪುನಃ ಅಧಿಕಾರಕ್ಕೆ ಬರುವುದು. ಆದ್ದರಿಂದ ಗೆಲ್ಲುವವರಿಗೆ ಪಕ್ಷದ ಟಿಕೆಟ್‌ ನೀಡಲು ನಿರ್ಧರಿಸಲಾಗಿದೆ. ಅಸಮಾಧಾನಗೊಂಡಿರುವ ಮಾಜಿ ಎಂಎಲ್ಸಿ ಎಚ್‌.ಆರ್‌. ಶ್ರೀನಾಥ ಅವರಿಗೆ ಪಕ್ಷದಿಂದ ಅನ್ಯಾಯವಾಗಿಲ್ಲ. ಈಗಾಗಲೇ ಎಲ್ಲಾ ಅ ಧಿಕಾರ ನೀಡಲಾಗಿದೆ. ಅವರ ಮನವೊಲಿಸಲಾಗುತ್ತದೆ.
– ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಕಾರ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next