Advertisement
ಬೆಂಗಳೂರು ಪ್ರಸ್‌ಕ್ಲಬ್ ಭಾನುವಾರ ಹಮ್ಮಿಕೊಂಡಿದ್ದ ಮಾತು-ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರಸ್ಪರ ಅಪನಂಬಿಕೆ ಮತ್ತು ಸತತ ವೈಫಲ್ಯಗಳಲ್ಲೇ ಸಮ್ಮಿಶ್ರ ಸರ್ಕಾರ ಸಾಗಿದೆೆ. ಕಾಂಗ್ರೆಸ್-ಜೆಡಿಎಸ್ ಒಳಜಗಳದಿಂದಲೇ ಮೈತ್ರಿ ಸರ್ಕಾರ ಪತನವಾಗಲಿದೆ.
Related Articles
Advertisement
ದೇಶದಲ್ಲಿ ಮೋದಿ ಅಲೆಯಿದೆ. ಕರ್ನಾಟಕದಲ್ಲಿ ಮೈತ್ರಿ ಸರ್ಕಾರದ ಆಡಳಿತ ವಿರೋಧಿ ಅಲೆಯಿದೆ. ಪಕ್ಷದ ಸಂಘಟನೆಯಿಂದ ಬಿಜೆಪಿ 22ಕ್ಕೂ ಅಧಿಕ ಸ್ಥಾನ ಗೆಲ್ಲಲಿದೆ. ಸೀಟು ಹಂಚಿಕೆಯಿಂದ ಪ್ರಚಾರದವರೆಗೂ ದೋಸ್ತಿಗಳಲ್ಲಿ ಗೊಂದಲ ಇದೆ.
ಅವರಲ್ಲಿ ಯಾವುದೂ ಹೊಂದಾಣಿಕೆಯಿಂದ ನಡೆಯುತ್ತಿಲ್ಲ. ಜೆಡಿಎಸ್ ಅಭ್ಯರ್ಥಿ ಇರುವ ಕಡೆ ಕಾಂಗ್ರೆಸ್ ಕಾರ್ಯಕರ್ತರು ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿಲ್ಲ. ನಾಯಕರು ಮೈತ್ರಿಯಾಗಿದ್ದು, ಕಾರ್ಯಕರ್ತರು ಬೇರೆ ಬೇರೆಯಾಗಿದ್ದಾರೆ. ಇವರಿಬ್ಬರ ನಡುವಿನ ಗೊಂದಲದಿಂದ ನಮಗೆ ಅನುಕೂಲಗಲಿದೆ ಎಂದರು.
ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತದ ಸಾಧನೆಗಳನ್ನು ಈ ಹಿಂದೆ ನಾವು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಿಲ್ಲ. ಈ ಬಾರಿ ಆ ತಪ್ಪನ್ನು ಸರಿಪಡಿಸಿಕೊಂಡು ಕೆಲಸ ಮಾಡುತ್ತಿದ್ದೇವೆ. ರಾಜ್ಯ ಮೈತ್ರಿ ಸರ್ಕಾರದ ಆಡಳಿತ ವೈಫಲ್ಯ, ದೋಸ್ತಿಗಳ ನಡುವಿನ ಗೊಂದಲವನ್ನು ಜನರಿಗೆ ತಿಳಿಸಲಾಗುವುದು. ಪಕ್ಷ ಸಂಘಟನೆಗೆ ಇನ್ನಷ್ಟು ಒತ್ತು ನೀಡಲಾಗುವುದು ಎಂದು ಚುನಾವಣಾ ಕಾರ್ಯತಂತ್ರವನ್ನು ವಿವರಿಸಿದರು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸೀಟು ಹಂಚಿಕೆ ಮತ್ತು ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಬೆಂಬಲ ಸೂಚಿಸಿರುವುದನ್ನು ಒಂದೇ ದೃಷ್ಟಿಯಲ್ಲಿ ವಿಶ್ಲೇಷಿಸುವುದು ಸರಿಯಲ್ಲ. ಮಂಡ್ಯದ ಪರಿಸ್ಥಿತಿಗೆ ತಕ್ಕಂತೆ ಕೇಂದ್ರ ನಾಯಕರಿಗೆ ವರದಿ ನೀಡಿದ್ದೆವು. ಅವರ ಸೂಚನೆಯಂತೆ ಬೆಂಬಲ ನೀಡಲಾಗಿದೆ.-ಅರವಿಂದ ಲಿಂಬಾವಳಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ