ನವದೆಹಲಿ: ಕೇಂದ್ರ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಆಗಸ್ಟ್ನಲ್ಲಿ ಅಲ್ಪ ಪ್ರಮಾಣದಲ್ಲಿ 4ಜಿ ಸೇವೆಗಳನ್ನು ಜಾರಿಗೊಳಿಸಲಿದೆ. ವರ್ಷಾಂತ್ಯಕ್ಕೆ ಪೂರ್ಣ ಪ್ರಮಾಣದಲ್ಲಿ ಲಭ್ಯವಾಗಲಿದೆ ಎಂದು ಸಂಸ್ಥೆಯ ಸಿಎಂಡಿ ಆರ್.ಕೆ.ಪುರ್ವಾರ್ ಪ್ರಕಟಿಸಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು ದೇಶದಲ್ಲಿ 5ಜಿ ಸ್ಪೆಕ್ಟ್ರಂ ವ್ಯವಸ್ಥೆ ಜಾರಿಯಾಗುತ್ತಿದ್ದಂತೆಯೇ ಅದಕ್ಕೆ ಮೇಲ್ದರ್ಜೆಗೆ ಏರುವಂಥ ಬದಲಾವಣೆಯನ್ನೂ ಹೊಂದಲಿದ್ದೇವೆ ಎಂದೂ ಬಿಎಸ್ಎನ್ಎಲ್ ಅಧ್ಯಕ್ಷರು ತಿಳಿಸಿದ್ದಾರೆ.
ಬಿಎಸ್ಎನ್ಎಲ್ನ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿ ಇರಲಿಲ್ಲ. ಹೀಗಾಗಿ, ಇತರ ದೂರಸಂಪರ್ಕ ಕಂಪನಿಗಳು 4ಜಿ ಸೇವೆ ಒದಗಿಸುತ್ತಿದ್ದರೆ, ನಾವು 2ಜಿ, 3ಜಿ ಸೇವೆ ನೀಡುವಂಥ ಸ್ಥಿತಿಯಲ್ಲಿದ್ದೇವೆ ಎಂದರು.