Advertisement

45 ರೂ. ಗೆ ಅನಿಯಮಿತ ಕರೆ, 10 ಜಿಬಿ ಡೇಟಾ ನೀಡುತ್ತಿದೆ ಬಿ ಎಸ್ ಎನ್ ಎಲ್

07:34 PM Jul 13, 2021 | Team Udayavani |

ನವ ದೆಹಲಿ : ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿ ಎಸ್ ಎನ್ ಎಲ್) ಹೊಸ ಫಸ್ಟ್ ರೀಚಾರ್ಜ್ ಕೂಪನ್ (ಎಫ್ ಆರ್ ಸಿ) ಯೊಂದಿಗೆ ಬಂದಿದ್ದು, 45 ರೂ. ನ ರೀಚಾರ್ಜ್ ಆಫರ್ ಬಂದಿದ್ದು, ಎಫ್‌ ಆರ್‌ ಸಿಯನ್ನು ಪ್ರಚಾರ ಯೋಜನೆಯಡಿ ಪ್ರಾರಂಭಿಸಲಾಗಿದೆ ಮತ್ತು ಅದರ ವ್ಯಾಲಿಡಿಟಿ ಸೀಮಿತ ಅವಧಿಯವರೆಗೆ ಮಾತ್ರ ನೀಡಲಾಗಿದೆ.

Advertisement

45 ರೂ.ಗಳ ಎಫ್‌ಆರ್‌ಸಿ 10 ಜಿಬಿ ಡೇಟಾ, ಅನಿಯಮಿತ ಕರೆಗಳು ಮತ್ತು 100 ಎಸ್‌ ಎಂ ಎಸ್ ಲಭ್ಯವಿದೆ.

ಇದನ್ನೂ ಓದಿ : ಸಂಸ್ಥೆಗಳಿಗೆ ಸಂಭಾವನೆ ಬಾಕಿ ಹಿನ್ನೆಲೆ : ಗೂಗಲ್‌ಗೆ ಫ್ರಾನ್ಸ್‌ನಲ್ಲಿ 4,417 ಕೋಟಿ ದಂಡ

45 ದಿನಗಳ ವ್ಯಾಲಿಡಿಟಿಯೊಂದಿಗೆ ಜಾರಿಯಲ್ಲಿರುತ್ತದೆ.  45 ದಿನಗಳು ಪೂರ್ಣಗೊಂಡ ನಂತರ, ಬಿ ಎಸ್ ಎನ್ ಎಲ್ ಬಳಕೆದಾರರು ತಮ್ಮ ಆಯ್ಕೆಯ ಯಾವುದೇ ಯೋಜನೆಗೆ ತ್ವರಿತವಾಗಿ ಬದಲಾಯಿಸಬಹುದು. ಈ ಎಫ್‌ಆರ್‌ಸಿಯನ್ನು ಆಗಸ್ಟ್ 6 ರವರೆಗೆ ಪ್ರಚಾರದ ಆಧಾರದ ಮೇಲೆ ಪರಿಚಯಿಸಲಾಗಿದೆ. ಇದಲ್ಲದೆ ಕಂಪನಿಯು ಉಚಿತ ಸಿಮ್ ಯೋಜನೆಯನ್ನು ಸಹ ಹೊಂದಿದೆ, ಇದು ಜುಲೈ 31 ರವರೆಗೆ ಸಕ್ರಿಯವಾಗಿರುತ್ತದೆ.

ಹೊಸ ಎಫ್‌ ಆರ್‌ ಸಿ ಹೊರತಾಗಿ, ಬಿ ಎಸ್‌ ಎನ್‌ ಎಲ್ 249 ರೂ.ಗಳ ಪ್ರಿಪೇಯ್ಡ್ ಯೋಜನೆಯನ್ನು ಕೂಡ ನೀಡುತ್ತಿದ್ದು, ಇದು 60 ದಿನಗಳ ಮಾನ್ಯತೆಯೊಂದಿಗೆ ಜಾರಿ ಇರುತ್ತದೆ. ದಿನಕ್ಕೆ 2 ಜಿಬಿ ಡೇಟಾ, ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 ಉಚಿತ ಎಸ್‌ ಎಂ ಎಸ್ ಗಳು ಇರಲಿವೆ.

Advertisement

ಇದನ್ನೂ ಓದಿ : ಕೋವಿಡ್ : ರಾಜ್ಯದಲ್ಲಿಂದು 2489 ಸೋಂಕಿತರು ಗುಣಮುಖ; 1913 ಹೊಸ ಪ್ರಕರಣ ಪತ್ತೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next