ಮುಂಬಯಿ: ಬಾಂಬೇ ಸೌತ್ ಕೆನರಾ ಬ್ರಾಹ್ಮೀಣ್ಸ್ ಅಸೋಸಿಯೇಶನ್ (ಬಿಎಸ್‌ಕೆಬಿಎ) ಸಂಸ್ಥೆಯ 2017-2018 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಅ. 1ರಂದು ನಡೆದ ವಾರ್ಷಿಕ ಸಭೆಯಲ್ಲಿ ನಡೆಯಿತು. ಸಭೆಯಲ್ಲಿ ನೂತನ ಅಧ್ಯಕ್ಷರನ್ನಾಗಿ ಡಾ| ಸುರೇಶ್ ರಾವ್ ಕಟೀಲು ಅವರನ್ನು ಸರ್ವಾನುಮತದಿಂದ ಮರು ನೇಮಕಗೊಳಿಸಲಾಯಿತು.
ಉಪಾಧ್ಯಕ್ಷರಾಗಿ ಮತ್ತು ಆಶ್ರಯ ಸಮಿತಿಯ ಕಾರ್ಯಾಧ್ಯಕ್ಷರಾಗಿ ವಾಮನ ಹೊಳ್ಳ, ವೈವಾಹಿಕ ಸಮಿತಿಯ ಕಾರ್ಯಾಧ್ಯಕ್ಷೆಯಾಗಿ ಶೈಲಿನಿ ಎ. ರಾವ್, ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಅನಂತ ಪದ್ಮನಾಭನ್ ಕೆ. ಪೋತಿ, ಗೌರವ ಕೋಶಾಧಿಕಾರಿಯಾಗಿ ಮತ್ತು ಯುವ ವಿಭಾಗದ ಕಾರ್ಯಾಧ್ಯಕ್ಷರಾಗಿ ಹರಿದಾಸ್ ಭಟ್, ಆಶ್ರಯ ಸಮಿತಿಯ ಸಂಚಾಲಕರಾಗಿ ಪಿ. ಸಿ. ಎನ್. ರಾವ್, ಜತೆ ಕಾರ್ಯದರ್ಶಿಯಾಗಿ ಚಿತ್ರಾ ಮೇಲ್ಮನೆ, ಜತೆ ಕೋಶಾಧಿಕಾರಿಯಾಗಿ ಮತ್ತು ಹುಂಡಿ ಸಮಿತಿಯ ಕಾರ್ಯಾಧ್ಯಕ್ಷೆಯಾಗಿ ಪಿ. ಬಿ. ಕುಸುಮಾ ಶ್ರೀನಿವಾಸ್ ಅವರನ್ನು ನೇಮಿಸಲಾಯಿತು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮತ್ತು ಮಾಧ್ಯಮ ಸಮಿತಿಯ ಕಾರ್ಯಧ್ಯಕ್ಷೆಯಾಗಿ ಐ. ಕೆ. ಪ್ರೇಮಾ ಎಸ್. ರಾವ್, ವಿದ್ಯಾರ್ಥಿ ವೇತನ ಮತ್ತು ದತ್ತು ಸ್ವೀಕಾರ ಸಮಿತಿಯ ಕಾರ್ಯಧ್ಯಕ್ಷರಾಗಿ ರಾಮಕೃಷ್ಣ ಎಸ್. ರಾವ್, ಸಂಚಾಲಕ ಶಿವರಾಯ ರಾವ್, ಗೋಕುಲ ಕಲಾವೃಂದ ಸಮಿತಿಯ ಕಾರ್ಯಧ್ಯಕ್ಷೆಯಾಗಿ ಚಂದ್ರಾವತಿ ರಾವ್, ಸದಸ್ಯತ್ವ ಸಮಿತಿ ಮತ್ತು ಶ್ರವಣದಳ ಸಮಿತಿಯ ಕಾರ್ಯಧ್ಯಕ್ಷರಾಗಿ ಪಿ. ಉಮೇಶ್ ರಾವ್, ಪ್ರಾದೇಶಿಕ ಚಟುವಟಿಕಾ ಸಮಿತಿಯ ಕಾರ್ಯಧ್ಯಕ್ಷನಾಗಿ ಚಂದ್ರಶೇಖರ ಭಟ್, ವಿದ್ಯಾನಿಧಿ ಸಮಿತಿಯ ಕಾರ್ಯಧ್ಯಕ್ಷರಾಗಿ ಬಿ. ನಾರಾಯಣ್, ಆಹಾರ ಸಮಿತಿಯ ಕಾರ್ಯಧ್ಯಕ್ಷ ಮತ್ತು ವಿದ್ಯಾನಿಧಿ ಸಂಚಾಲಕರಾಗಿ ವೈ. ಗುರುರಾಜ್ ಭಟ್, ಗೋಕುಲ ಭಜನಾ ಮಂಡಳಿ ಸಮಿತಿಯ ಕಾರ್ಯಧ್ಯಕ್ಷೆ ಡಾ| ಸಹನಾ ಎ. ಪೋತಿ, “ಗೋಕುಲವಾಣಿ’ ಮಾಸಿಕದ ಗೌರವ ಸಂಪಾದಕರಾಗಿ ಡಾ| ವ್ಯಾಸರಾಯ ನಿಂಜೂರು, ದೇಣಿಗೆ ಸಮಿತಿಯ ಕಾರ್ಯಧ್ಯಕ್ಷೆಯಾಗಿ ಪಿ. ವಿನೋದಿನಿ ರಾಜೇಶ್ ರಾವ್, ಸಂಚಾಲಕಿಯಾಗಿ ಕು| ರುಚಿತ ರಾವ್, ಹುಂಡಿ ಸಮಿತಿಯ ಸಂಚಾಲಕರಾಗಿ ಎಂ. ಸೀತರಾಮ್ ರಾವ್, ಮಾಹಿತಿ ತಂತ್ರಜ್ಞಾನ ಸಮಿತಿಯ ಕಾರ್ಯಧ್ಯಕ್ಷರಾಗಿ ಜಗದೀಶ ಜಿ. ಆಚಾರ್ಯ, ವೈವಾಹಿಕ ಸಮಿತಿಯ ಸಂಚಾಲಕಿಯಾಗಿ ಶಾಂತಿಲಕ್ಷಿ¾à ಎಸ್.ಉಡುಪ, ಶ್ರವಣದಳ ಸಮಿತಿಯ ಕಾರ್ಯಧ್ಯಕ್ಷರಾಗಿ ಪಿ. ಉಮೇಶ್ ರಾವ್ ಅವರು ನೇಮಕಗೊಂಡರು. ವಿಶೇಷ ಆಮಂತ್ರಿತ ಸದಸ್ಯರುಗಳಾಗಿ ಎ. ಶ್ರೀನಿವಾಸ ರಾವ್, ಅವಿನಾಶ್ ಶಂಕರ್ ಶಾಸ್ತ್ರಿ, ಗೋಪಾಲಕೃಷ್ಣ ಎಚ್. ಭಟ್, ಕೆ. ಸುಬ್ಬಣ್ಣ ರಾವ್, ಕು| ಅರ್ಪಿತಾ ಬಂಟ್ವಾಳ, ದಾಮೋದರ್ ಭಟ್, ಕರುಣಾಕರ ಗೋರೆ, ಸ್ಮಿàತಾ ಭಟ್ ಅವರು ಆಯ್ಕೆಯಾದರು.