Advertisement

ಬಿಎಸ್‌ಕೆಬಿ ಅಸೋಸಿಯೇಶನ್‌ ಗೋಕುಲ ವತಿಯಿಂದ ಚಿಣ್ಣರ ಬೇಸಿಗೆ ಶಿಬಿರ

04:25 PM Jun 09, 2017 | |

ಮುಂಬಯಿ: ಸಯಾನ್‌ನ ಬಿಎಸ್‌ಕೆಬಿ ಅಸೋಸಿಯೇಶನ್‌ ಗೋಕುಲದ ಯುವ ವಿಭಾಗದ ವತಿಯಿಂದ 7 ರಿಂದ 15 ವರ್ಷದೊಳಗಿನ  ಮಕ್ಕಳಿಗಾಗಿ ಮೂರು  ದಿನಗಳ ಬೇಸಿಗೆ ಶಿಬಿರವನ್ನು ನೆರೂಲ್‌ನ ಹಿರಿಯ ನಾಗರಿಕರ ಆಶ್ರಯಧಾಮ “ಆಶ್ರಯ’ದಲ್ಲಿ ಆಯೋಜಿಸಲಾಗಿತ್ತು.

Advertisement

ಜೂ. 2 ರಂದು ಸಂಜೆ ಬಿಎಸ್‌ಕೆಬಿಎ ಉಪಾಧ್ಯಕ್ಷ ವಾಮನ್‌ ಹೊಳ್ಳ, ಕಾರ್ಯದರ್ಶಿ ಅನಂತಪದ್ಮನಾಭ ಪೋತಿ, ಕೋಶಾಧಿಕಾರಿ ಹರಿದಾಸ್‌ ಭಟ್‌, ಸಹ ಕೋಶಾಧಿಕಾರಿ ಕುಸುಮ್‌ ಶ್ರೀನಿವಾಸ್‌, ಯುವ ವಿಭಾಗದ ಸಂಚಾಲಕಿ ವಿನೋದಿನಿ ರಾವ್‌  ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ದೀಪ ಪ್ರಜ್ವಲಿಸಿ ಶಿಬಿರಕ್ಕೆ ಚಾಲನೆ ನೀಡಿದರು. ಬಾಲಕಲಾವೃಂದದವರು ಪ್ರಾರ್ಥನೆಗೈದರು. ಮಹಾಪೆಯಲ್ಲಿರುವ ವಾಮನ್‌ ಹೊಳ್ಳ ಅವರ “ಕಾಂಟೆಕ್‌ ಇನ್‌ಸ್ಟುÅಮೆಂಟ್‌’ ಕಾರ್ಖಾನೆಯ (ತೂಕ ಮಾಡುವ ಯಂತ್ರಗಳ ತಯಾರಿಕಾ ಕಾರ್ಖಾನೆ)  ವೀಕ್ಷಣ ಕಾರ್ಯಕ್ರಮ ನಡೆಸಲಾಯಿತು.

ಬೆಳೆದು ಬದುಕು ರೂಪಿಸುತ್ತಾ ರಾಷ್ಟ್ರವನ್ನು ಕಟ್ಟಲು ಸನ್ನದ್ಧರಾಗುವ ಮಕ್ಕಳಲ್ಲಿ ಬರೇ ಶಿಕ್ಷಣಕ್ಕಿಂತ ಸಂಸ್ಕಾರ ತುಂಬುವ ಅಗತ್ಯವಿದೆ. ಅವರಲ್ಲಿ ಆಧುನಿಕ ಜೀವನವನ್ನು ಶಿಸ್ತು ಹಾಗೂ ಸ್ವಯಂಬದ್ಧವಾಗಿ ನಡೆಸುವ ಶಕ್ತಿ ತುಂಬುವ ಅಗತ್ಯವಿದೆ. ಎಲ್ಲಕ್ಕೂ ಮಿಗಿಲಾಗಿ ಪರಿಸರ ರಕ್ಷಣೆ, ಸಾಮರಸ್ಯದ ಸಮಬಾಳ್ವೆ, ಹಾಗೂ ಜೀವನೋಪಾಯದ ಅರಿವು ಮೂಡಿಸುವ ಅವಶ್ಯಕತೆ ಆಯಾ ಸಮಾಜಕ್ಕಿದೆ ಎಂದು ವಾಮನ್‌ ಹೊಳ್ಳ ಉಪಸ್ಥಿತ ಮಕ್ಕಳ ಪಾಲಕರಿಗೆ ಕಿವಿ ಮಾತುಗಳನ್ನಾಡಿದರು.

ಶಿಬಿರದಲ್ಲಿ ಶ್ರೀಮತಿ ಕುಲಕರ್ಣಿ ಅವರು ಸುಲಭ ಯೋಗ, ಸುನೀತಾ ರಾಮಕುಮಾರ್‌ ಅವರು ಜೀವನ ಮೌಲ್ಯಗಳು, ಎ. ಪಿ. ಕೆ ಪೋತಿ ಅವರು ವೇದಿಕ್‌ ಗಣಿತ, ಸಹನಾ ಭರದ್ವಾಜ್‌ ಅವರು ಕನ್ನಡ ಕಲಿಕೆ, ಸಹನಾ ಪೋತಿ ಅವರು ಭಜನೆ, ಶಾಲಿನಿ ಉಡುಪ, ಸರೋಜಾ ಸತ್ಯನಾರಾಯಣ ಮತ್ತು ಪಿ. ಸಿ. ಎನ್‌. ರಾವ್‌ ಅವರು ಕರಕುಶಲ ವಸ್ತುಗಳ ತಯಾರಿ ಮುಂತಾದುವುಗಳ ವಿಚಾರವಾಗಿ ಮಕ್ಕಳನ್ನು ತರಬೇತುಗೊಳಿಸಿದರು.

ಜೂ. 4 ರಂದು  ಸಂಜೆ ಬಿಎಸ್‌ಕೆಬಿಎ ಅಧ್ಯಕ್ಷ ಡಾ| ಸುರೇಶ್‌ ಎಸ್‌. ರಾವ್‌ ಕಟೀಲು ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಜರಗಿದ್ದು, ಈ ಸಂದರ್ಭದಲ್ಲಿ ಮಾತನಾಡಿದ ಅವರು,  ಇಂದಿನ ಮಕ್ಕಳೇ ಮುಂದಿನ ಜನಾಂಗ ಎಂಬಂತೆ ಇಂತಹ ಮುದ್ದು ಮಕ್ಕಳಲ್ಲಿ ಅಹಂ ಎನ್ನುವುದನ್ನು ಮರೆಮಾಡಿಸಿ ಸ್ವಯಂ ನಿಲುವು ರೂಢಿಸಬೇಕಾಗಿದೆ. ಅವಾಗಲೇ ಅನ್ಯರನ್ನು ಅವಲಂಬಿಸದೆ ಸ್ವಂತಿಕೆಯಿಂದ ಬಾಳುವುದನ್ನು ತನ್ನಿಂದ ತಾನಾಗೇ  ರೂಢಿಸಿಕೊಳ್ಳುತ್ತಾರೆ ಎಂದರು.

Advertisement

ಯುವ ವಿಭಾಗದ ಅಧ್ಯಕ್ಷ  ಹರಿದಾಸ್‌ ಭಟ್‌ ಅವರು ಶಿಬಿರದಲ್ಲಿ  ಭಾಗವಹಿಸಿದ ಮಕ್ಕಳಿಗೆ ಶುಭ ಹಾರೈಸುತ್ತಾ ಮುಂದಿನ ಶಿಬಿರಗಳಲ್ಲಿ  ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು   ಭಾಗವಹಿಸುವಂತಾಗಲಿ ಎಂದು ಆಶಯ ವ್ಯಕ್ತ ಪಡಿಸಿ ಶಿಬಿರವನ್ನು ಅಚ್ಚುಕಟ್ಟಾಗಿ ಆಯೋಜಿಸಿದ ಯುವ ವಿಭಾಗದ ಕಾರ್ಯಕರ್ತರನ್ನು ಅಭಿನಂದಿಸಿದರು. ಅಸೋಸಿಯೇಶನ್‌ನ ಉಪಸ್ಥಿತ ಪದಾಧಿಕಾರಿಗಳು ಶಿಬಿರದ ಯಶಸ್ಸಿಗೆ ಸಹಕರಿಸಿದ ಶಿಕ್ಷಕ ಶಿಕ್ಷಕಿಯರನ್ನು, ಕಾರಕರ್ತರನ್ನು ಅಭಿವಂದಿಸಿ ಗೌರವಿಸಿ ವಂದಿಸಿದರು. ಪ್ರೇಮಾ ಎಸ್‌. ರಾವ್‌ ಕಾರ್ಯಕ್ರಮ ನಿರೂಪಿಸಿದರು.  ವಿನೋದಿನಿ  ರಾವ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next