Advertisement

ಭಾರತದ ಪ್ರದೇಶದೊಳಗೆ ನುಸುಳಿಬಂದ ಪಾಕ್‌ ಡ್ರೋನನ್ನು ಹೊಡೆದುರುಳಿಸಿದ ಬಿಎಸ್‌ಎಫ್‌

04:40 PM Feb 08, 2023 | Team Udayavani |

ನವದೆಹಲಿ: ಭಾರತದ ಪ್ರದೇಶದ ಒಳಗೆ ನುಸುಳಿಬಂದ ಪಾಕ್‌ ಡ್ರೋನ್‌ ಒಂದನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಪಂಜಾಬ್‌ನಲ್ಲಿ ಹೊಡೆದುರುಳಿಸಿದೆ.

Advertisement

ಪಂಜಾಬ್‌ನ ಅಮೃತಸರ ಸೆಕ್ಟರ್‌ನ ಬಾಬಾಪೀರ್‌ ಗಡಿ ಪೋಸ್ಟ್‌ ಬಳಿ ಮಂಗಳವಾರ ಮಧ್ಯರಾತ್ರಿ ಪಾಕ್‌ ಡ್ರೋನ್‌ ಭಾರತದ ಗಡಿಯೊಳಗೆ ಪ್ರದೇಶದೊಳಗೆ ನುಸುಳಿಬಂದಿದೆ.

ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಭೂಪ್ರದೇಶದಲ್ಲಿ ಡ್ರೋನ್‌ ಪತನಗೊಂಡಿದೆ ಎಂದು ಸೇನೆಯ ವಕ್ತಾರ  ಮಾಹಿತಿ ನೀಡಿದ್ದಾರೆ.

ಡ್ರೋನ್‌ ದಾಳಿ ತಡೆಗಟ್ಟಲು ಬಿಎಸ್‌ಎಫ್‌ ಸನ್ನದ್ಧವಾಗಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ದೇಶದ ಗಢಿಯೊಳಗೆ ಬಂದ ಡ್ರೋನ್‌ ಮೇಲೆ ಗುಂಡು ಹಾರಿಸಲಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next