Advertisement

ಗಡಿದಾಟಿದ 3 ವರ್ಷದ ಮಗು ಪಾಕ್‌ಗೆ ಹಸ್ತಾಂತರ: ಬಿಎಸ್‌ಎಫ್ ಯೋಧರ ಕೈಗೆ ಸಿಕ್ಕಿದ ಬಾಲಕ

08:26 AM Jul 03, 2022 | Team Udayavani |

ಚಂಡೀಗಢ: ಪಂಜಾಬ್‌ನ ಫಿರೋಜ್‌ಪುರ ವಲಯದಲ್ಲಿರುವ ಭಾರತ-ಪಾಕ್‌ ಗಡಿಭಾಗ­ದಲ್ಲಿ ಶನಿವಾರ ಪಾಕಿಸ್ಥಾನದ 3 ವರ್ಷದ ಬಾಲಕನೊಬ್ಬ ಗಡಿದಾಟಿ ಭಾರತ ಪ್ರವೇಶಿಸಿದ್ದಾನೆ.

Advertisement

ಅಚಾನಕ್ಕಾಗಿ ಹೀಗೆ ಬಂದ ಪುಟ್ಟ ಬಾಲಕನನ್ನು ಸುರಕ್ಷಿತವಾಗಿರಿಸಿ­ಕೊಂಡು, ಅನಂತರ ಪಾಕ್‌ ಸೈನಿಕರಿಗೆ ಹಸ್ತಾಂತರಿಸಿದ್ದಾರೆ. ಇದೊಂದು ಮಾನ­ವೀಯ ನೆಲೆಯಲ್ಲಿ ಗೌರವದಿಂದ ಮಾಡಿದ ಕೆಲಸ. ಬಿಎಸ್‌ಎಫ್ ಯಾವಾಗಲೂ ಗೊತ್ತಾಗದೇ ಅಚಾನಕ್ಕಾಗಿ ಗಡಿದಾಟಿದ­ವರನ್ನು ಮಾನವೀಯವಾಗಿಯೇ ನಡೆಸಿ­ಕೊಳ್ಳು­ತ್ತದೆ ಎಂದು ಬಿಎಸ್‌ಎಫ್ ಹೇಳಿಕೊಂಡಿದೆ.

ಕೇವಲ 3 ವರ್ಷದ ಮಗುವಾಗಿದ್ದರಿಂದ ಏನೂ ಮಾತನಾಡಲು ತಿಳಿಯದೇ, ಏನು ಮಾಡಬೇಕೆಂದು ಗೊತ್ತಾ­ಗದೇ ಬಾಲಕ ಚಡಪಡಿಸುತ್ತಿದ್ದ. ಇದನ್ನು ಮನಗಂಡ ಭಾರತೀಯ ಯೋಧರು ಮಗುವನ್ನು ಅಷ್ಟೇ ಪ್ರೀತಿಯಿಂದ ನಡೆಸಿ­ಕೊಂಡಿದ್ದಾರೆ.

ಪಾಕ್‌ ಪತ್ರಕರ್ತನ ಮೇಲೆ ಹಲ್ಲೆ: ಪಾಕಿಸ್ಥಾನದ ಪ್ರಭಾವೀ ಸೇನಾ ಮುಖ್ಯಸ್ಥರನ್ನು “ಪ್ರಾಪರ್ಟಿ ಡೀಲರ್ಸ್‌’ ಎಂದು ವ್ಯಂಗ್ಯವಾಡಿದ್ದ ಪಾಕ್‌ ಪತ್ರಕರ್ತನ ಮೇಲೆ ಶುಕ್ರವಾರ ರಾತ್ರಿ ಹಲ್ಲೆಯಾಗಿದೆ.

ದುನ್ಯಾ ನ್ಯೂಸ್‌ ವಾಹಿನಿಯ ರಾಜಕೀಯ ವಿಶ್ಲೇಷಕ ಅಯಾಝ್ ಅಮೀರ್‌ (73) ತಮ್ಮ ಕಾರ್ಯಕ್ರಮ ಮುಗಿಸಿ ಮನೆಗೆ ಮರಳುತ್ತಿ­ದ್ದಾಗ, ಮಾಸ್ಕ್ ಧರಿಸಿದ್ದ ಅಪರಿಚಿತರು ಹಲ್ಲೆ ಮಾಡಿ, ಬಟ್ಟೆ ಹರಿದುಹಾಕಿದ್ದಾರೆ.

Advertisement

9 ಭಯೋತ್ಪಾದಕರ ಬಂಧನ: ಪಂಜಾಬ್‌ ಪ್ರಾಂತದಲ್ಲಿ ಐಸಿಸ್‌ಗೆ ಸೇರಿದ 9 ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ. ಉಗ್ರ ನಿಗ್ರಹ ದಳದ ಸುಳಿವಿನ ಮೇರೆಗೆ ಪೊಲೀಸರು ಈ ದಾಳಿ ಮಾಡಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next