Advertisement

BSF; ಬಾಂಗ್ಲಾ ಗಡಿಯಲ್ಲಿ 3.12 ಕೋಟಿ ರೂ.ಮೌಲ್ಯದ ಚಿನ್ನದ ಬಿಸ್ಕೆಟ್‌ಗಳ ವಶ

04:46 PM Aug 27, 2023 | Team Udayavani |

ಕೋಲ್ಕತಾ: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಬಾಂಗ್ಲಾದೇಶದ ಗಡಿಯಲ್ಲಿ ಟ್ರಕ್‌ನಿಂದ 3.12 ಕೋಟಿ ರೂ. ಮೌಲ್ಯದ ಚಿನ್ನದ ಬಿಸ್ಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಿಎಸ್ ಎಫ್ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

Advertisement

ಶನಿವಾರ ಪೆಟ್ರಾಪೋಲ್ ಚೆಕ್‌ಪಾಯಿಂಟ್‌ನಲ್ಲಿ ಹುಡುಕಾಟದ ಸಮಯದಲ್ಲಿ, ಬಿಎಸ್‌ಎಫ್‌ನ 145 ಬೆಟಾಲಿಯನ್  ಸಿಬಂದಿಗಳು ಎರಡು ಪ್ಯಾಕೆಟ್ ಚಿನ್ನದ ಬಿಸ್ಕತ್ತುಗಳನ್ನು ಬಚ್ಚಿಟ್ಟಿರುವುದನ್ನು ಪತ್ತೆ ಮಾಡಿದ್ದಾರೆ.

ಬಾಂಗ್ಲಾದೇಶದಿಂದ ಭಾರತಕ್ಕೆ ಪ್ರವೇಶಿಸಿದ ಟ್ರಕ್ ಖಾಲಿಯಾಗಿ ಇತ್ತು. ಟ್ರಕ್‌ನಿಂದ ಒಟ್ಟು 5.24 ಕೆಜಿ ತೂಕದ 45 ಚಿನ್ನದ ಬಿಸ್ಕೆಟ್‌ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಟ್ರಕ್ ಚಾಲಕನನ್ನು ಬಂಧಿಸಲಾಗಿದೆ ಎಂದು  ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next