Advertisement

ಗಡಿಯಲ್ಲಿ ನೀರಿಗೆ ತತ್ವಾರ

07:30 AM Mar 06, 2018 | Team Udayavani |

ಬಾರ್ಮರ್‌: ರಾಜಸ್ಥಾನಕ್ಕೆ ಹೊಂದಿಕೊಂಡಿರುವ 270 ಕಿ.ಮೀ. ಭಾರತ ಮತ್ತು ಪಾಕಿಸ್ಥಾನ ಅಂತಾರಾಷ್ಟ್ರೀಯ ಗಡಿ ಪ್ರದೇಶವನ್ನು ಕಾಯುವ ಗಡಿ ಭದ್ರತಾ ಪಡೆ (ಬಿಎಸ್‌ಎಫ್)ಗೆ ನೀರಿನ ತೀವ್ರ ಸಮಸ್ಯೆ ಉಂಟಾಗಿದೆ. ರಾಜಸ್ಥಾನದ ಬಾರ್ಮರ್‌ ವ್ಯಾಪ್ತಿಯಲ್ಲಿರುವ 66 ಹೊರಠಾಣೆಗಳ ಪೈಕಿ ಕೇವಲ ಎರಡು ಕೇಂದ್ರಗಳಿಗೆ ಮಾತ್ರ ನೀರಿನ ಸಂಪರ್ಕ ಇದೆ. ಉಳಿದ ಹೊರಠಾಣೆಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಕೆಲವೊಮ್ಮೆ ಟ್ಯಾಂಕರ್‌ ನೀರು ಸಿಗದಿದ್ದಾಗ, 80ರಿಂದ 125 ಕಿ.ಮೀ. ದೂರಕ್ಕೆ ಸಾಗಿ ನೀರನ್ನು ತರಬೇಕಾದ ಅನಿವಾರ್ಯತೆಯಿದೆ ಎಂದು ಯೋಧರೇ ಮಾಹಿತಿ ನೀಡಿದ್ದಾರೆ.

Advertisement

ಬಾರ್ಮರ್‌ ವ್ಯಾಪ್ತಿಯ ಬಿಎಸ್‌ಎಫ್ನ ಪ್ರಭಾರ ಡಿಜಿಪಿ  ಶ್ಯಾಮ್‌ ಕಪೂರ್‌ ಮಾತನಾಡಿ, “ಈ ಸಮಸ್ಯೆ ಹೊಸತೇನಲ್ಲ. ಹೊರಠಾಣೆಗಳು ಮತ್ತು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ. ಈ ಬಗ್ಗೆ ನೀರು ಪೂರೈಕೆ ವಿಭಾಗಕ್ಕೆ ಪ್ರಸ್ತಾವನೆ ಕಳುಹಿಸಿದ್ದೇವೆ. ಶೀಘ್ರದಲ್ಲಿಯೇ ಸಮಸ್ಯೆ ಪರಿಹಾರವಾಗಬಹುದು’ ಎಂದು ಹೇಳಿದ್ದಾರೆ ಎಂದು “ದ ಹಿಂದುಸ್ತಾನ್‌ ಟೈಮ್ಸ್‌’ ವರದಿ ಮಾಡಿದೆ. 

ಸಮಸ್ಯೆಯ ಬಗ್ಗೆ ಅರಿವು ಇದೆ ಎಂದು ರಾಜಸ್ಥಾನ ನೀರಾವರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಹಜಾರಿರಾಮ್‌ ಬಲ್ವಾನ್‌ ಹೇಳಿದ್ದು, ಎಲ್ಲಾ ಔಟ್‌ಪೋಸ್ಟ್‌ಗಳಿಗೆ  ಪೈಪ್‌ಗ್ಳ ಮೂಲಕ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಕಳೆದ ತಿಂಗಳ ಮೊದಲ ವಾರದಲ್ಲಿ ಸಮಸ್ಯೆ ಇರುವ ಎಲ್ಲಾ ವಿಭಾಗಗಳ ಸಮೀಕ್ಷೆ ನಡೆಸಲಾಗಿದೆ.  ಪ್ರತಿ ಔಟ್‌ ಪೋಸ್ಟ್‌ಗೆ ಪ್ರತಿ ತಿಂಗಳು 20 ಟ್ಯಾಂಕರ್‌ ನೀರು ಬೇಕಾಗುತ್ತದೆ  ಎಂದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next