Advertisement
ಈ ಭಾಗದಲ್ಲಿ ಭದ್ರತಾ ಪಡೆ ಭಾರೀ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಇನ್ನೂ ಇಂತಹ ಸುರಂಗ ಮಾರ್ಗಗಳಿವೆ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಈ ಸುರಂಗ ಮಾರ್ಗದ ಮೂಲಕ ಉಗ್ರರು ಒಳನುಸುಳಲು ಹಾಗೂ ಮಾದಕ ದ್ರವ್ಯ, ಶಸ್ತ್ರಾಸ್ತ್ರ ಸಾಗಾಟಕ್ಕೆ ಉಪಯೋಗಿಸುತ್ತಿರುವುದಾಗಿ ವರದಿ ವಿವರಿಸಿದೆ.
Related Articles
Advertisement
ಇತ್ತೀಚೆಗೆ ಭಾರೀ ಮಳೆ ಸುರಿದಿದ್ದು, ಕೆಲವು ಭೂ ಭಾಗ ಕುಸಿಯುತ್ತಿರುವುದನ್ನು ಬಿಎಸ್ ಎಫ್ ತಂಡ ಗಮನಿಸಿರುವುದಾಗಿ ಹಿರಿಯ ಅಧಿಕಾರಿಗಳು ವಿವರಿಸಿದ್ದಾರೆ. ಭೂ ಶೋಧಕ ಯಂತ್ರದ ಮೂಲಕ ಪರಿಶೀಲಿಸಿದಾಗ ಸುರಂಗ ಮಾರ್ಗ ಪತ್ತೆಯಾಗಿತ್ತು. ನಂತರ ಒಳಗಿಳಿದು ಪರಿಶೀಲಿಸಿದಾಗ ಸುಮಾರು 20 ಮೀಟರ್ ಉದ್ದದ ಸುರಂಗ ಪತ್ತೆಯಾಗಿತ್ತು ಎಂದು ವರದಿ ಹೇಳಿದೆ.
ಮೂಲಗಳ ಪ್ರಕಾರ, ಈ ಸುರಂಗ 25 ಅಡಿ ಆಳವಿದ್ದು, ಇದರೊಳಗೆ 8-10 ಮರಳು ಚೀಲ ಸಿಕ್ಕಿದ್ದು, ಇದರಲ್ಲಿ “ಕರಾಚಿ ಮತ್ತು ಶಾಕಾರ್ ಗಢ್” ಎಂದು ಬರೆಯಲಾಗಿದೆ. ಸುರಂಗದಿಂದ 400 ಮೀಟರ್ ದೂರದಲ್ಲಿ ಪಾಕಿಸ್ತಾನಿ ಗಡಿ ಪೋಸ್ಟ್ ಇದ್ದಿರುವುದಾಗಿ ವರದಿ ತಿಳಿಸಿದೆ.
ಇತ್ತೀಚೆಗಷ್ಟೇ ಐವರು ನುಸುಳುಕೋರರನ್ನು ಗಡಿ ಭದ್ರತಾ ಪಡೆ ಹೊಡೆದುರುಳಿಸಿತ್ತು. ಜಮ್ಮುವಿನ 3,300 ಕಿಲೋ ಮೀಟರ್ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಬಿಎಸ್ ಎಫ್ ಯೋಧರನ್ನು ನಿಯೋಜಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.