Advertisement

BSF; ಗಡಿಯಲ್ಲಿ 2 ಸಾವಿರ ಹೆಚ್ಚುವರಿ ಸೈನಿಕರ ನಿಯೋಜನೆ: ವರದಿ

12:51 AM Jul 28, 2024 | Team Udayavani |

ಜಮ್ಮು: ಜಮ್ಮು-ಕಾಶ್ಮೀರಕ್ಕೆ ಗಡಿ ಭದ್ರತಾ ಪಡೆಯ(ಬಿಎಸ್‌ಎಫ್) 2 ಸಾವಿರ ಹೆಚ್ಚುವರಿ ಸೈನಿಕರನ್ನು ನಿಯೋಜಿಸಲು ಕೇಂದ್ರ ಸರಕಾರ‌ ಆದೇಶಿಸಿದೆ ಎಂದು ಮೂಲಗಳು ತಿಳಿಸಿವೆ. ಒಡಿಶಾದಲ್ಲಿರುವ ಸಿಬಂದಿಯನ್ನು ಕರೆತಂದು ಜಮ್ಮುವಿನ ಭಾರತ-ಪಾಕಿಸ್ಥಾನ ಗಡಿಯಲ್ಲಿ ನಿಯೋಜಿಸಲಾಗುವುದು ಎನ್ನಲಾಗಿದೆ. ಆರಂಭದಲ್ಲಿ ಜಮ್ಮು-ಕಾಶ್ಮೀರದ ಕಥುವಾ, ರಿಯಾಸಿ ಮತ್ತು ಕಿಷ್ತಾ$Ìರ್‌ನಲ್ಲಿ 2 ಬೆಟಾಲಿಯನ್‌ ಬಿಎಸ್‌ಎಫ್ ಸಿಬಂದಿ ನಿಯೋಜಿಸಲಾಗುವುದು. ಬಳಿಕ ಮತ್ತೆರಡು ಬೆಟಾಲಿಯನ್‌ ಸಿಬಂದಿಯನ್ನು ನಿಯೋಜಿಸಲಾಗುವುದು ಎನ್ನಲಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಜಮ್ಮು-ಕಾಶ್ಮೀರದಲ್ಲಿ ಉಗ್ರರ ಉಪಟಳ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next