ಮುಂಬಯಿ : ಕಳೆದ ನಿರಂತರ 9 ದಿನಗಳ ಕುಸಿತಕ್ಕೆ ಕೊನೆಗೂ ಬ್ರೇಕ್ ಹಾಕುವಲ್ಲಿ ಸಫಲವಾದ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು 403.65 ಅಂಕಗಳ ಭಾರೀ ಜಿಗಿತದೊಂದಿಗೆ 35,756.26 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 131.10 ಅಂಕಗಳ ಜಿಗಿತವನ್ನು ದಾಖಲಿಸಿ ದಿನದ ವಹಿವಾಟನ್ನು 10,735.45 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಕಳೆದ 9 ದಿನಗಳ ಕುಸಿತದಲ್ಲಿ ಸೆನ್ಸೆಕ್ಸ್ 1,622.62 ಅಂಕಗಳ ನಷ್ಟವನ್ನು ಅನುಭವಿಸಿದೆ. ಇದೇ ರೀತಿ 465.05 ಅಂಕಗಳ ನಷ್ಟಕ್ಕೆ ಗುರಿಯಾಗಿದೆ.
ಇಂದಿನ ಟಾಪ್ ಗೇನರ್‌ಗಳಾದ ಟಾಟಾ ಸ್ಟೀಲ್, ಒಎನ್‌ಜಿಸಿ, ಎನ್‌ಟಿಪಿಸಿ, ಎಸ್ ಬ್ಯಾಂಕ್, ಇನ್‌ಫೋಸಿಸ್, ಸನ್ ಫಾರ್ಮಾ, ಭಾರ್ತಿ ಏರ್‌ಟೆಲ್, ಬಜಾಜ್ ಫಿನಾನ್ಸ್, ಲಾರ್ಸನ್, ಆರ್‌ಐಎಲ್ ಶೇರುಗಳು ಶೇ.4.13ರಷ್ಟು ಏರಿದವು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,766 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,496 ಶೇರುಗಳು ಮುನ್ನಡೆ ಸಾಧಿಸಿದವು; 1,110 ಶೇರುಗಳು ಹಿನ್ನಡೆಗೆ ಗುರಿಯಾದವು; 160 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.