ಮುಂಬಯಿ : ನಿರಂತರ ಮೂರು ದಿನಗಳ ಏರಿಕೆಯಿಂದಾದ ಲಾಭವನ್ನು ನಗದೀಕರಸಲು ಹೂಡಿಕೆದಾರರು, ವಹಿವಾಟುದಾರರು ಮುಂದಾದ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ಆರಂಭಿಕ ವಹವಾಟಿನಲ್ಲಿ 33.86 ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 15.10 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 10,215.80 ಅಂಕಗಳ ಮಟ್ಟದಲ್ಲಿ ಆರಂಭಿಸಿತು.
ಬೆಳಗ್ಗೆ 10.30ರ ಹೊತ್ತಿಗೆ ಸೆನ್ಸೆಕ್ಸ್ 70.24 ಅಂಕಗಳ ನಷ್ಟದೊಂದಿಗೆ 32,563.40 ಅಂಕಗಳ ಮಟ್ಟದಲ್ಲೂ, ನಿಫ್ಟಿ 12.80 ಅಂಕಗಳ ನಷ್ಟದೊಂದಿಗೆ 10,218.10 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಡಾಲರ್ ಎದುರು ರೂಪಾಯಿ ದರ 15 ಪೈಸೆಯಷ್ಟು ಕುಸಿದು 64.89 ರೂ. ಮಟ್ಟಕ್ಕೆ ಇಳಿದಿರುವುದು ಕೂಡ ಶೇರು ಮಾರುಕಟ್ಟೆಯ ಮೇಲೆ ಇಂದು ವ್ಯತಿರಿಕ್ತ ಪರಿಣಾಮವನ್ನು ಬೀರಿತು.
ಬೆಳಗ್ಗಿನ ವಹಿವಾಟಿನ ಟಾಪ್ ಗೇನರ್‌ಗಳು: ಬಿಪಿಸಿಎಲ್, ಎಚ್‌ಪಿಸಿಎಲ್, ಭಾರ್ತಿ ಏರ್ ಟೆಲ್, ಎಸ್ ಬ್ಯಾಂಕ್, ಗೇಲ್.
ಟಾಪ್ ಲೂಸರ್‌ಗಳು : ಟಾಟಾ ಮೋಟರ್, ಈಶರ್ ಮೋಟರ್, ಬಾಶ್, ಮಹೀಂದ್ರ, ಯುಪಿಎಲ್.