ಮುಂಬಯಿ : ನಿರಂತರ ಮೂರು ದಿನಗಳ ಕುಸಿತಕ್ಕೆ ಬ್ರೇಕ್ ಹಾಕಿರುವ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 208 ಅಂಕಗಳ ಜಿಗಿತವನ್ನು ಸಾಧಿಸಿದೆ.
ಏಶ್ಯನ್ ಶೇರು ಪೇಟೆಗಳಲ್ಲಿ ಸ್ಥಿರತೆ ತೋರಿಬಂದಿರುವುದು ಮತ್ತು ದೇಶೀಯ ಸಾಂಸ್ಥಿಕ ಹೂಡಿಕೆದಾರರು ಶೇರು ಖರೀದಿಯಲ್ಲಿ ತೊಡಗಿರುವುದು ಮುಂಬಯಿ ಶೇರು ಜಿಗಿತಕ್ಕೆ ಕಾರಣವಾಗಿದೆ.
ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್ 53.17 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 33,756.76 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 6.30 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 10,366.70 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಎಚ್ ಡಿ ಎಫ್ ಸಿ, ಕೋಟಕ್ ಮಹೀಂದ್ರ, ಇನ್‌ಫೋಸಿಸ್, ಟಾಟಾ ಸ್ಟೀಲ್, ಸನ್ ಫಾರ್ಮಾ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟೆಕ್ ಮಹೀಂದ್ರ, ಎಚ್‌ಸಿಎಲ್ ಟೆಕ್, ಟಿಸಿಎಸ್, ಈಶರ್ ಮೋಟರ್, ಡಾ. ರೆಡ್ಡಿ ಲ್ಯಾಬ್ ಶೇರುಗಳು ಟಾಪ್ ಗೇನರ್ ಎನಿಸಿಕೊಂಡಿದ್ದವು.
ಸನ್ ಫಾರ್ಮಾ, ಹಿಂಡಾಲ್ಕೊ, ಬಜಾಜ್ ಫಿನಾನ್ಸ್, ಬಿಪಿಸಿಎಲ್ ಮತ್ತು ವೇದಾಂತ ಶೇರುಗಳು ಟಾಪ್ ಲೂಸರ್ ಎನಿಸಿಕೊಂಡು ಹಿನ್ನಡೆಗೆ ಗುರಿಯಾದವು.