ಮುಂಬಯಿ : ಸದ್ಯದಲ್ಲೇ ಅನಾವರಣಗೊಳ್ಳಲಿರುವ ಕಂಪೆನಿಗಳ ತ್ತೈಮಾಸಿಕ ಫಲಿತಾಂಶಗಳು ಆಶಾದಾಯಕವಾಗಿರುವೆ ಎಂಬ ವಿಶ್ವಾಸದಲ್ಲಿ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ 51 ಅಂಕಗಳ ಮುನ್ನಡೆಯನ್ನು ಪಡೆದುಕೊಂಡಿತು.
ಐಟಿ, ರಿಯಲ್ಟಿ,ಟೆಕ್ ಶೇರುಗಳು ಉತ್ತಮ ಖರೀದಿ ಬೆಂಬಲವನ್ನು ಪಡೆದ ಕಾರಣ ಮುಂಬಯಿ ಶೇರು ಇಂದು ತೇಜಿಯನ್ನು ಕಂಡಿತು.
ಬೆಳಗ್ಗೆ 10.30ರ ಹೊತ್ತಿಗೆ ಸೆನ್ಸೆಕ್ಸ್ 19.34 ಅಂಕಗಳ ನಷ್ಟದೊಂದಿಗೆ 34,413.73 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 11.80 ಅಂಕಗಳ ನಷ್ಟದೊಂದಿಗೆ 10.620.40 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇನ್‌ಫೋಸಿಸ್, ಎಸ್‌ಬಿಐ, ಟಿಸಿಎಸ್, ಮಾರುತಿ ಸುಜುಕಿ ಮತ್ತು ಎಚ್ ಡಿ ಎಫ್ ಸಿ ಶೇರುಗಳು ಇಂದು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಟೆಕ್ ಮಹೀಂದ್ರ, ಐಡಿಯಾ ಸೆಲ್ಯುಲರ್, ಕೋಟಕ್ ಮಹೀಂದ್ರ, ಟಾಟಾ ಮೋಟರ್, ಭಾರ್ತಿ ಏರ್‌ಟೇಲ್.
ಟಾಪ್ ಲೂಸರ್‌ಗಳು : ಸಿಪ್ಲಾ, ಎಚ್‌ಪಿಸಿಎಲ್, ವಿಪ್ರೋ, ಕೋಲ್ ಇಂಡಿಯಾ, ಎಸ್ ಬ್ಯಾಂಕ್.