Advertisement

ಧನಾತ್ಮಕ ವಿದ್ಯಮಾನಗಳ ಬಲ: ಮುಂಬಯಿ ಶೇರು 355 ಅಂಕಗಳ ಭರ್ಜರಿ ಏರಿಕೆ

05:19 PM Jul 10, 2017 | udayavani editorial |

ಮುಂಬಯಿ : ಏಶ್ಯನ್‌ ಶೇರು ಮಾರುಕಟ್ಟೆಗಳಲ್ಲಿ ಕಂಡು ಬಂದಿರುವ ಉತ್ಸಾಹ, ದೇಶಾದ್ಯಂತ ಉತ್ತಮ ಮುಂಗಾರು ಮಳೆಯಾಗುವ ಭರವಸೆ, ಮೂರನೇ ತ್ತೈಮಾಸಿಕದ ಸಾಂಸ್ಥಿಕ ಫ‌ಲಿತಾಂಶ ಉತ್ತಮವಿರುವ ನಿರೀಕ್ಷೆ – ಮುಂತಾಗಿ ಹಲವಾರು ಧನಾತ್ಮಕ ಕಾರಣಗಳ ಬಲದಲ್ಲಿ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಸೋಮವಾರದ ವಹಿವಾಟನ್ನು 355.01 ಅಂಕಗಳ ಭರ್ಜರಿ ಏರಿಕೆಯೊಂದಿಗೆ 31,715.64 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 105.25 ಅಂಕಗಳ ಮುನ್ನಡೆಯೊಂದಿಗೆ ದಿನದ ವಹಿವಾಟನ್ನು 9,771.05 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

ಇಂದಿನ ವಹಿವಾಟಿನಲ್ಲಿ ಎಫ್ಎಂಸಿಜಿ, ಟೆಕ್‌ ಮತ್ತು ಐಟಿ ರಂಗದ ಶೇರುಗಳು ಉತ್ತಮ ಖರೀದಿ ಬೆಂಬಲವನ್ನು ಪಡೆದವು. ಟಿಸಿಎಸ್‌ ಶೇರು, ಜು.13ರ ಫ‌ಲಿತಾಂಶಕ್ಕೆ ಮುನ್ನ ಶೇ.4.6ರಷ್ಟು ಏರಿ ಗಮನ ಸೆಳೆಯಿತು. 

ಇಂದು ಒಟ್ಟು 3,015 ಶೇರುಗಳು ವಹಿವಾಟಿಗೆ ಒಳಪಟ್ಟವು; 1,654 ಶೇರುಗಳು ಮುನ್ನಡೆ ಸಾಧಿಸಿದವು; 1,200 ಶೇರುಗಳು ಹಿನ್ನಡೆಗೆ ಗುರಯಾದವು; 161 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next