ಮುಂಬಯಿ : ಇರಾನ್ ಪರಮಾಣು ವಹಿವಾಟು ಒಪ್ಪಂದದಿಂದ ತಾನು ಹಿಂದೆ ಸರಿಯುವುದಾಗಿ ಅಮೆರಿಕ ಹೇಳಿರುವ ಹಿನ್ನೆಲೆಯಲ್ಲಿ ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ದೌರ್ಬಲ್ಯ ತೋರಿಬಂದಿರುವುದನ್ನು ಅನುಸರಿಸಿ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 82 ಅಂಕಗಳ ಕುಸಿತಕ್ಕೆ ಗುರಿಯಾಯಿತು.
ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಬ್ಯಾರಲ್‌ಗೆ 76 ಡಾಲರ್ ಮಟ್ಟ ದಾಟಿರುವುದು ಕೂಡ ಜಾಗತಿಕ ಶೇರು ಮಾರುಕಟ್ಟೆಗಳ ಮೇಲೆ ಪ್ರಭಾವ ಬೀರಿತು. ಕಚ್ಚಾ ತೈಲ ಬೆಲೆಯ ಜಿಗಿತದ ಪರಿಣಾಮವಾಗಿ ಡಾಲರ್ ಎದುರು ರೂಪಾಯಿ 37 ಪೈಸೆಯಷ್ಟು ಕುಸಿದು 67.45 ರೂ. ಮಟ್ಟಕ್ಕೆ ಇಳಿಯಿತು.
ಹಾಗಿದ್ದರೂ ಬೆಳಗ್ಗೆ 11.15ರ ಹೊತ್ತಿಗೆ ಸೆನ್ಸೆಕ್ಸ್ 59.89 ಅಂಕಗಳ ಜಿಗಿತವನ್ನು ಸಾಧಿಸಿ35,276.21 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರುಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 13.90 ಅಂಕಗಳ ಮುನ್ನಡೆಯೊಂದಿಗೆ 10,731.70 ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಹಿಂಡಾಲ್ಕೊ, ಐಸಿಐಸಿಐ ಬ್ಯಾಂಕ್, ಟಾಟಾ ಸ್ಟೀಲ್, ಎಚ್ ಪಿ ಸಿಎಲ್ ಮತ್ತು ಬಿಪಿಸಿಎಲ್ ಶೇರುಗಳು ಇಂದಿನ ಆರಂಭಿಕ ವಹಿವಾಟಿನಲ್ಲಿ ಅತ್ಯಂತ ಸಕ್ರಿಯವಾಗಿದ್ದವು.
ಟಾಪ್ ಗೇನರ್‌ಗಳು : ಟಾಟಾ ಮೋಟರ್, ಟೈಟಾನ್ ಕಂಪೆನಿ, ಭಾರ್ತಿ ಇನ್‌ಫ್ರಾಟೆಲ್, ಹಿಂಡಾಲ್ಕೋ, ಟಾಟಾ ಸ್ಟೀಲ್; ಟಾಪ್ ಲೂಸರ್‌ಗಳು : ಬಿಪಿಸಿಎಲ್, ಎಚ್‌ಪಿಸಿಎಲ್, ಅಲ್ಟ್ರಾ ಟೆಕ್ ಸಿಮೆಂಟ್, ಎಸ್‌ಬಿಐ, ಗೇಲ್.