ಮುಂಬಯಿ : ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿ ಸ್ಥಿರತೆಯ ಪ್ರವೃತ್ತಿ ತೋರಿಬಂದಿರುವುದನ್ನು ಅನುಸರಿಸಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ ಹೂಡಿಕೆದಾರರ ಮತ್ತು ವಹಿವಾಟುದಾರರರು ಆಯ್ದ ಬ್ಲೂಚಿಪ್ ಶೇರುಗಳ ಖರೀದಿಯಲ್ಲಿ ತೊಡಗಿಕೊಂಡ ಕಾರಣ, 164 ಅಂಕಗಳ ಮುನ್ನಡೆಯನ್ನು ಸಂಪಾದಿಸಿ ಹೊಸ ಹುರುಪನ್ನು ಪ್ರದರ್ಶಿಸಿತು.
ಸೆನ್ಸೆಕ್ಸ್ 163.80 ಅಂಕಗಳ ಏರಿಕೆಯೊಂದಿಗೆ 32,924.24 ಅಂಕಗಳ ಮಟ್ಟವನ್ನು ತಲುಪಿತಾದರೆ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂ 50.85 ಅಂಕಗಳ ಏರಿಕೆಯೊಂದಿಗೆ 10,168.90 ಅಂಕಗಳ ಮಟ್ಟವನ್ನು ತಲುಪಿತು.
ಕಳೆದ ಮೂರು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್ 554.12 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು. ಬೆಳಗ್ಗೆ 10.30ರ ಹೊತ್ತಿಗೆ ಸೆನ್ಸೆಕ್ಸ್ 155.52 ಅಂಕಗಳ ಏರಿಕೆಯೊಂದಿಗೆ 32,915.96 ಅಂಕಗಳ ಮಟ್ಟದಲ್ಲಿ ಹಾಗೂ ನಿಫ್ಟಿ 39.70 ಅಂಕಗಳ ಏರಿಕೆಯೊಂದಿಗೆ 10,157.70 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿದ್ದವು.
ರಿಲಯನ್ಸ್, ಭಾರ್ತಿ ಏರ್‌ಟೆಲ್, ಎಸ್‌ಬಿಐ, ಭಾರ್ತಿ ಇನ್‌ಫ್ರಾಟೆಲ್, ಎಚ್ ಡಿ ಎಫ್ ಸಿ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಟಾಟಾ ಪವರ್, ಭಾರ್ತಿ ಇನ್‌ಫ್ರಾಟೆಲ್, ರಿಲಯನ್ಸ್, ಅರಬಿಂದೋ ಫಾರ್ಮಾ, ಅಂಬುಜಾ ಸಿಮೆಂಟ್ಸ್.
ಟಾಪ್ ಲೂಸರ್‌ಗಳು : ಅದಾನಿ ಪೋರ್ಟ್, ಬಿಪಿಸಿಎಲ್, ಕೋಲ್ ಇಂಡಿಯಾ, ಟೆಕ್ ಮಹೀಂದ್ರ, ಎಸ್ ಬ್ಯಾಂಕ್.