ಮುಂಬಯಿ : ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ 142 ಅಂಕಗಳ ಜಿಗಿತವನ್ನು ಕಂಡಿತಾದರೂ ಅನಂತರದಲ್ಲಿ ತೀವ್ರ ಏರಿಳಿತಕ್ಕೆ ಗುರಿಯಾಯಿತು.
ಹಾಗಿದ್ದರೂ ಬೆಳಗ್ಗೆ 11.15ರ ಸುಮಾರಿಗೆ ಚೇತರಿಕೆ ಕಂಡ ಸೆನ್ಸೆಕ್ಸ್ 84.03 ಅಂಕಗಳ ಮುನ್ನಡೆಯನ್ನು ಪಡೆದುಕೊಂಡು 36,457.47 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 9.70 ಅಂಕಗಳ ಮುನ್ನಡೆಯೊಂದಿಗೆ 10,990.20 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಟಾಟಾ ಸ್ಟೀಲ್, ರಿಲಯನ್ಸ್, ಎಸ್ ಬ್ಯಾಂಕ್, ಟೈಟಾನ್ ಕಂಪೆನಿ, ಬಜಾಜ್ ಫಿನಾನ್ಸ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು. ಆರಂಭದಲ್ಲಿ ಹಿನ್ನಡೆ ಕಂಡ ಬ್ಯಾಂಕಿಂಗ್, ಫಾರ್ಮಾ, ಮೆಟಲ್, ರಿಯಲ್ಟಿ ಮತ್ತು ಐಟಿ ಶೇರುಗಳು ಕ್ರಮೇಣ ಚೇತರಿಕೆ ಕಂಡವು.
ನಿನ್ನೆ ಬುಧವಾರದ ವಹಿವಾಟನ್ನು ಸೆನ್ಸೆಕ್ಸ್ 146.52 ಅಂಕಗಳ ನಷ್ಟದೊಂದಿಗೆ ಮುಗಿಸಿತ್ತು.
ಡಾಲರ್ ಎದುರು ರೂಪಾಯಿ ಇಂದು 12 ಪೈಸೆಯಷ್ಟು ಕುಸಿದು 68.74 ರೂ ಮಟ್ಟಕ್ಕೆ ಇಳಿಯಿತು. ನಿನ್ನೆ ಬುಧವಾರ ರೂಪಾಯಿ 17 ಪೈಸೆಯಷ್ಟು ಕುಸಿದು 68.62 ರೂ. ಗೆ ಇಳಿದಿತ್ತು.