ಮುಂಬಯಿ : ಕಳೆದ ಆರು ದಿನಗಳಿಂದ ನಿರಂತರ ಕುಸಿತವನ್ನು ಕಾಣುತ್ತಲೇ ಬಂದಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 1,274.35 ಅಂಕಗಳ (ಶೇ.3.66) ಭಾರೀ ಕುಸಿತಕ್ಕೆ ಗುರಿಯಾಯಿತು.
ಕಳೆದ ಐದು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್ 1,526 ಅಂಕಗಳ ನಷ್ಟವನ್ನು ಅನುಭವಿಸಿದೆ. ಜನವರಿ ತಿಂಗಳೊಂದರಲ್ಲೇ ಸೆನ್ಸೆಕ್ಸ್ 2,200 ಅಂಕಗಳನ್ನು ಸಂಪಾದಿಸಿತ್ತು.
ಅಮೆರಿಕದ ವಾಲ್ ಸ್ಟ್ರೀಟ್ ಪೇಟೆಯಲ್ಲಿ ಶೇರುಗಳ ದಾಖಲೆ ಕುಸಿತವನ್ನು ಅನುಸರಿಸಿ ಏಶ್ಯನ್ ಶೇರು ಪೇಟೆಗಳು ಕುಸಿದಿದ್ದು ಅಂತೆಯೇ ಮುಂಬಯಿ ಶೇರು ಪೇಟೆ ಕುಸಿತದ ಹಾದಿಯಲ್ಲಿ ಸಾಗುತ್ತಿದೆ ಎಂದು ಬ್ರೋಕರ್‌ಗಳು ಹೇಳಿದ್ದಾರೆ.
ಇಂದಿನ ಆರಂಭಿಕ ವಹಿವಾಟಿನಲ್ಲಿ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 390.25 ಅಂಕಗಳ ಭಾರೀ ನಷ್ಟಕ್ಕೆ ಗುರಿಯಾಗಿ 10,300ಕ್ಕಿಂತಲೂ ಕೆಳ ಮಟ್ಟಕ್ಕೆ ಜಾರಿತು.
ಬೆಳಗ್ಗೆ 10.30ರ ಹೊತ್ತಿಗೆ ಸೆನ್ಸೆಕ್ಸ್ 1186.52 ಅಂಕಗಳ ನಷ್ಟದೊಂದಿಗೆ 3,570.64 ಅಂಕಗಳ ಮಟ್ಟದಲ್ಲೂ ನಿಫ್ಟಿ 359.00 ಅಂಕಗಳ ನಷ್ಟದೊಂದಿಗೆ 10,307.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಟಾಟಾ ಮೋಟರ್, ರಿಲಯನ್ಸ್, ಮಾರುತಿ ಸುಜುಕಿ, ಎಸ್‌ಬಿಐ, ಎಕ್ಸಿಸ್ ಬ್ಯಾಂಕ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಮುಂಬಯ ಶೇರು ಪೇಟೆಯಲ್ಲಿ ಇಂದು ಬೆಳಗ್ಗಿನ ವಹಿವಾಟಿನಲ್ಲಿ 2,437 ಶೇರುಗಳು ವಹಿವಾಟಿಗೆ ಒಳಪಟ್ಟಿದ್ದವು; ಕೇವಲ 168 ಶೇರುಗಳು ಮುನ್ನಡೆ ಸಾಧಿಸಿದವು; 2,189 ಶೇರುಗಳು ಹಿನ್ನಡೆಗೆ ಗುರಿಯಾದವು; 80 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.