ಮುಂಬಯಿ : ಕಳೆದ ನಾಲ್ಕು ದಿನಗಳ ನಿರಂತರ ಏರು ಹಾದಿಯಲ್ಲಿ ಸಾಗಿ ಬಂದ ಮುಂಬಯಿ ಶೇರು ಪೇಟೆಯಲ್ಲಿ ಇಂದು ಬುಧವಾರ ಹೂಡಿಕೆದಾರರು ಹಾಗೂ ವಹಿವಾಟುದಾರರು ಲಾಭ ನಗದೀಕರಣಕ್ಕೆ ಮುಂದಾದ ಕಾರಣ, ಸೆನ್ಸೆಕ್ಸ್ ಸೂಚ್ಯಂಕ ದಾಖಲೆಯ ಎತ್ತರದ ಮಟ್ಟದಿಂದ ಕೆಳಗಿಳಿದು 13 ಅಂಕಗಳ ನಷ್ಟಕ್ಕೆ ಗುರಿಯಾಯಿತು.
ದಿನದ ವಹಿವಾಟಿನ ಅಂತ್ಯದಲ್ಲಿ ಸೆನ್ಸೆಕ್ಸ್ 13.60 ಅಂಕಗಳ ನಷ್ಟದೊಂದಿಗೆ 31,145.80 ಅಂಕಗಳ ಮಟ್ಟದಲ್ಲಿ ಹಾಗೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 3.30 ಅಂಕಗಳ ನಷ್ಟದೊಂದಿಗೆ 9,621.25 ಅಂಕಗಳ ಮಟ್ಟದಲ್ಲಿ ಸ್ಥಿತವಾದವು.
ಐಸಿಐಸಿಐ ಬ್ಯಾಂಕ್, ಎಚ್ ಡಿ ಎಫ್ ಸಿ, ಸನ್ ಫಾರ್ಮಾ, ಭಾರ್ತಿ ಏರ್‌ಟೆಲ್, ಮಹೀಂದ್ರ ಶೇರುಗಳು ಇಂದು ಅತೀ ಹೆಚ್ಚು ಕ್ರಿಯಾಶೀಲವಾಗಿದ್ದವು.
ಇಂದಿನ ಟಾಪ್ ಗೇನರ್‌ಗಳು : ಮಹೀಂದ್ರ, ಅಲ್ಟ್ರಾ ಟೆಕ್ ಸಿಮೆಂಟ್, ಲೂಪಿನ್, ಗೇಲ್, ಪವರ್ ಗ್ರಿಡ್.
ಟಾಪ್ ಲೂಸರ್‌ಗಳು : ವೇದಾಂತ, ಇನ್ಫೋಸಿಸ್, ಕೋಲ್ ಇಂಡಿಯಾ, ಟಾಟಾ ಪವರ್, ಭಾರ್ತಿ ಇನ್‌ಫ್ರಾಟೆಲ್.