ಮುಂಬಯಿ : ಆರಂಭಿಕ ಏಳು ಬೀಳುಗಳ ಹೊರತಾಗಿಯೂ ಮುಂಬಯಿ ಶೇರು ಪೇಟೆ ಇಂದು ಬುಧವಾರದ ವಹಿವಾಟನ್ನು ದಾಖಲೆ ಅಂತ್ಯದ ಎತ್ತರದಲ್ಲೇ ಮುಗಿಸಿರುವುದು ಸಮಾಧಾನಕರ ವಿಷಯವೆನಿಸಿತು.
ದಿನದ ವಹಿವಾಟಿನ ಅಂತ್ಯಕ್ಕೆ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ 76.17 ಅಂಕಗಳ ಏರಿಕೆಯೊಂದಿಗೆ 30,658.77 ಅಂಕಗಳ “ದಾಖಲೆಯ ಅಂತ್ಯದ ಮಟ್ಟದಲ್ಲಿ’ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 13.50 ಅಂಕಗಳ ಏರಿಕೆಯೊಂದಿಗೆ ದಿನದ ವಹಿವಾಟಿನ ದಾಖಲೆಯ ಅಂತ್ಯದ ಎತ್ತರವಾಗಿ 9,525.75 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದಿನ ಟಾಪ್ ಗೇನರ್‌ಗಳು : ಟಾಟಾ ಸ್ಟೀಲ್, ಭಾರ್ತಿ ಇನ್‌ಫ್ರಾಟೆಲ್, ಟಾಟಾ ಮೋಟರ್, ಐಸಿಐಸಿಐ ಬ್ಯಾಂಕ್, ಟಾಟಾ ಪವರ್.
ಟಾಪ್ ಲೂಸರ್‌ಗಳು : ಟೆಕ್ ಮಹೀಂದ್ರ, ಎಸಿಸಿ, ಬಾಶ್, ಎಸ್ ಬ್ಯಾಂಕ್, ಅದಾನಿ ಪೋರ್ಟ್.
ಇಂದು ವಹಿವಾಟಿಗೆ ಒಳಪಟ್ಟ ಶೇರುಗಳಲ್ಲಿ 1,257 ಶೇರುಗಳು ಮುನ್ನಡೆ ಕಂಡವು; 1,538 ಶೇರುಗಳು ಹಿನ್ನಡೆಗೆ ಗುರಿಯಾದವು; 179 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.