Advertisement

ಸೆನ್ಸೆಕ್ಸ್‌ 31,000,ನಿಫ್ಟಿ 9,600 ಮಟ್ಟ ಅಬಾಧಿತ:ಮುಂಬಯಿ ಶೇರು ಭದ್ರ

04:36 PM May 30, 2017 | |

ಮುಂಬಯಿ : ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ 31,000 ಅಂಕಗಳ ಮಟ್ಟವನ್ನೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ 9,600 ಅಂಕಗಳ ಮಟ್ಟವನ್ನೂ ಭದ್ರವಾಗಿ ಉಳಿಸಿಕೊಂಡಿರುವುದು ಇಂದು ಮಂಗಳವಾರದ ವಹಿವಾಟಿನಲ್ಲಿ ಕಂಡುಬಂದಿರುವ ಧನಾತ್ಮಕ ಅಂಶವಾಗಿದೆ.

Advertisement

ಸೆನ್ಸೆಕ್ಸ್‌ ಇಂದು ಮಂಗಳವಾರದ ವಹಿವಾಟನ್ನು 50.12 ಅಂಕಗಳ ಮುನ್ನಡೆಯೊಂದಿಗೆ 31,159.40 ಅಂಕಗಳ ಮಟ್ಟದಲ್ಲೂ, ನಿಫ್ಟಿ 19.65 ಅಂಕಗಳ ಮುನ್ನಡೆಯೊಂದಿಗೆ 9,624.55 ಅಂಕಗಳ ಮಟ್ಟದಲ್ಲೂ  ಕೊನೆಗೊಳಿಸಿದವು. 

1,232 ಶೇರುಗಳು ಇಂದು ಮುನ್ನಡೆ ಸಾಧಿಸಿದರೆ 1,452 ಶೇರುಗಳು ಹಿನ್ನಡೆಗೆ ಗುರಿಯಾದವು; 155 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.

ಅದಾನಿ ಪೋರ್ಟ್‌, ಅರಬಿಂದೋ ಫಾರ್ಮಾ, ಎನ್‌ಟಿಪಿಸಿ ಟಾಪ್‌ ಗೇನರ್‌ ಎನಿಸಿಕೊಂಡವು; ಬಿಎಚ್‌ಇಎಲ್‌, ಐಟಿಸಿ, ಪವರ್‌ ಗ್ರಿಡ್‌, ಬಿಪಿಸಿಎಲ್‌ ಟಾಪ್‌ ಲೂಸರ್‌ ಎನಿಸಿಕೊಂಡವು. 

Advertisement

Udayavani is now on Telegram. Click here to join our channel and stay updated with the latest news.

Next