ಮುಂಬಯಿ : ಕಳೆದ ಎರಡು ದಿನಗಳಲ್ಲಿ ಒಂದರ ಬಳಿಕ ಒಂದರಂತೆ ಸಾರ್ವಕಾಲಿಕ ಎತ್ತರದ ದಾಖಲೆಯನ್ನು ಸ್ಥಾಪಿಸಿದ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಇಂದು ಬಸವಳಿದಂತೆ ತೋರಿಬಂದು ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ ಹಿನ್ನಡೆಗೆ ಗುರಿಯಾಯಿತು.
ಬೆಳಗ್ಗೆ 11.15ರ ಹೊತ್ತಿಗೆ ಸೆನ್ಸೆಕ್ಸ್ ಸ್ವಲ್ಪ ಮಟ್ಟಿನ ಚೇತರಿಕೆಯನ್ನು ಕಡು 18.82 ಅಂಕಗಳ ಏರಿಕೆಯನ್ನು ದಾಖಲಿಸಿ 30,061.42 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ 5.75 ಅಂಕಗಳ ನಷ್ಟಕ್ಕೆ ಗುರಿಯಾಗಿ 9,506.50 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಸೆನ್ಸೆಕ್ಸ್ ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಒಟ್ಟು 394.45 ಅಂಕಗಳ ಏರಿಕೆಯನ್ನು ಸಾಧಿಸಿತ್ತು.
ಇಂದಿನ ವಹಿವಾಟಿನಲ್ಲಿ ಎಫ್ಎಂಸಿಜಿ, ಕ್ಯಾಪಿಟಲ್ ಗೂಡ್ಸ್, ಹೆಲ್ತ್‌ಕೇರ್, ಬ್ಯಾಂಕಿಂಗ್ ಹಾಗೂ ಪಿಎಸ್‌ಯು ಶೇರುಗಳು ಹಿನ್ನಡೆಗೆ ಗುರಿಯಾದವು.