Advertisement

ಹೊಸ ದಾಖಲೆಯ ಮಟ್ಟಕ್ಕೇರಿದ ಸೆನ್ಸೆಕ್ಸ್‌, 11,000 ದಾಟಿದ ನಿಫ್ಟಿ

05:16 PM Jul 12, 2018 | |

ಮುಂಬಯಿ : ಡಾಲರ್‌ ಎದುರು ರೂಪಾಯಿ ದರ ಏರಿಕೆ, ಹೆಚ್ಚಿದ ವಿದೇಶಿ ಬಂಡವಾಳ ಹರಿವು ಇವೇ ಮೊದಲಾದ ಕಾರಣಕ್ಕೆ  ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಗುರುವಾರ 282.48 ಅಂಕಗಳ ಉತ್ತಮ ಮುನ್ನಡೆಯನ್ನು ದಾಖಲಿಸಿ ದಿನದ ಅಂತ್ಯಕ್ಕೆ ಹೊಸ ದಾಖಲೆಯ ಎತ್ತರವಾಗಿ 36,548.41 ಅಂಕಗಳ ಮಟ್ಟವನ್ನು ತಲುಪಿದೆ. 

Advertisement

ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 68.50 ಅಂಕಗಳ ಜಿಗಿತವನ್ನು ಸಾಧಿಸಿ 11,016.80 ಅಂಕಗಳ ಮಟ್ಟಕ್ಕೇರುವ ಮೂಲಕ ದೃಢತೆಯನ್ನು ತೋರಿದೆ.

ಹಾಗಿದ್ದರೂ ಮಾರುಕಟ್ಟೆ ಹರಹು ನೇತ್ಯಾತ್ಮಕವಾಗಿತ್ತು. ಎಂದರೆ 1,151 ಶೇರುಗಳು ಮುನ್ನಡೆ ಸಾಧಿಸಿದರೆ 1,475 ಶೇರುಗಳು ಹಿನ್ನಡೆಗೆ ಗುರಿಯಾದವು; 177 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ. 

ರಿಲಯನ್ಸ್‌ ಇಂಡಸ್ಟ್ರೀಸ್‌, ವಿಪ್ರೋ ಮತ್ತು ಬಿಪಿಸಿಎಲ್‌ ಶೇರುಗಳು ಟಾಪ್‌ ಗೇನರ್‌ಗಳಾದವು; ವೇದಾಂತ, ಇನ್‌ಫೋಸಿಸ್‌, ಯುಪಿಎಲ್‌ ಶೇರುಗಳು ಟಾಪ್‌ ಲೂಸರ್‌ಗಳೆನಿಸಿದವು.

Advertisement

Udayavani is now on Telegram. Click here to join our channel and stay updated with the latest news.

Next