ಮುಂಬಯಿ : ಏಶ್ಯನ್ ಶೇರುಪೇಟೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡು ಬಂದಿರುವ ಹೊರತಾಗಿಯೂ ಉತ್ತಮ ಕೈಗಾರಿಕಾ ಉತ್ಪಾದನಾ ಅಂಕಿ ಅಂಶಗಳು ಹೊರಬಂದಿರುವುದನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು 185 ಅಂಕಗಳ ಭರ್ಜರಿ ಜಿಗಿತದೊಂದಿಗೆ ಆರಂಭಿಸಿತು.
ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್ 248.85 ಅಂಕಗಳ ಮುನ್ನಡೆಯನ್ನು ದಾಖಲಿಸಿದ್ದು ಇಂದಿನ ನಿರಂತರ ಮೂರನೇ ದಿನದ ಮುನ್ನಡೆಯಲ್ಲಿ ಅದು ಮುಂಚೂಣಿ ಶೇರುಗಳ ಖರೀದಿಯನ್ನು ಕಂಡಿದೆ.
ಹಾಗಾಗಿ ಸನ್ ಫಾರ್ಮಾ, ಡಾ. ರೆಡ್ಡಿ, ಟಿಸಿಎಸ್, ಎಕ್ಸಿಸ್ ಬ್ಯಾಂಕ್, ಇನ್‌ಫೋಸಿಸ್, ಎಸ್ ಬ್ಯಾಂಕ್, ವಿಪ್ರೋ, ಎಸ್‌ಬಿಐ, ಬಜಾಜ್ ಆಟೋ, ಅದಾನಿ ಪೋರ್ಟ್, ಟಾಟಾ ಮೋಟರ್ ಮತ್ತು ಟಾಟಾ ಸ್ಟೀಲ್ ಶೇರುಗಳು ಶೇ.3.19ರ ಏರಿಕೆಯನ್ನು ದಾಖಲಿಸಿದವು.
ಬೆಳಗ್ಗೆ 11 ಗಂಟೆ ಹೊತ್ತಿಗೆ ಸೆನ್ಸೆಕ್ಸ್ 110.09 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 35,802.61 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 27 ಅಂಕಗಳ ಮುನ್ನಡೆಯೊಂದಿಗೆ 10,869.90 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಟಾಪ್ ಗೇನರ್‌ಗಳು: ಸಿಪ್ಲಾ, ಟಾ. ರೆಡ್ಡಿ, ಲೂಪಿನ್, ಸನ್ ಫಾರ್ಮಾ, ಎಕ್ಸಿಸ್ ಬ್ಯಾಂಕ್; ಟಾಪ್ ಲೂಸರ್‌ಗಳು : ಐಡಿಯಾ ಸೆಲ್ಯುಲರ್, ಟಾಟಾ ಸ್ಟೀಲ್, ಝೀ ಎಂಟರ್‌ಟೇನ್‌ಮೆಂಟ್, ಒಎನ್‌ಜಿಸಿ, ವೇದಾಂತ.