ಮುಂಬಯಿ : ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ 31,233 ಅಂಕ ತಲುಪುವ ಮೂಲಕ ಹೊಸ ದಾಖಲೆಯ ಎತ್ತರವನ್ನು ಕಂಡಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 9,638 ಅಂಕ ತಲುಪುವ ಮೂಲಕ ಹೊಸ ದಾಖಲೆಯ ಮಟ್ಟವನ್ನು ಕಂಡಿತು.
ನಿರಂತರ ಐದನೇ ದಿನವಾದ ಇಂದು ತನ್ನ ಮುನ್ನಡೆಯನ್ನು ಕಾಯ್ದುಕೊಂಡ ಸೆನ್ಸೆಕ್ಸ್ ತನ್ನ ಆರಂಭಿಕ ವಹಿವಾಟಿನಲ್ಲಿ 74.28 ಅಂಕಗಳ ಏರಿಕೆಯನ್ನು ಕಾಣುವ ಮೂಲಕ ಹೊಸ ದಾಖಲೆಯ ಎತ್ತರವಾಗಿ 31,233.68 ಅಂಕಗಳ ಮಟ್ಟವನ್ನು ತಲುಪಿತು.
ಕಳೆದ ನಾಲ್ಕು ವಹಿವಾಟಿನ ಅವಧಿಯಲ್ಲಿ ಸೆನ್ಸೆಕ್ಸ್ ಒಟ್ಟಾರೆಯಾಗಿ 857.76 ಅಂಕಗಳನ್ನು ಸಂಪಾದಿಸಿರುವುದು ಗಮನಾರ್ಹವಾಗಿದೆ. ವಹಿವಾಟಿನ ನಡುವಿನ ಹೊಸ ದಾಖಲೆಯ ಎತ್ತರವಾಗಿ ಸೆನ್ಸೆಕ್ಸ್ 31,220.38 ಅಂಕಗಳ ಮಟ್ಟವನ್ನು ತಲುಪಿದೆ.
ಇಂದು ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್ 12.31 ಅಂಕಗಳ ಏರಿಕೆಯೊಂದಿಗೆ 31,171.71 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ 3.05 ಅಂಕಗಳ ನಷ್ಟದೊಂದಿಗೆ 9,621.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಅತ್ಯಂತ ಹೆಚ್ಚು ಕ್ರಿಯಾಶೀಲವಾಗಿದ್ದ ಶೇರುಗಳೆಂದರೆ ಮಹೀಂದ್ರ, ಐಸಿಐಸಿಐ ಬ್ಯಾಂಕ್, ಹಿಂಡಾಲ್ಕೊ, ಅರಬಿಂದೋ ಫಾರ್ಮಾ, ಮಾರುತಿ ಸುಜುಕಿ.
ಟಾಪ್ ಲೂಸರ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಂಡ ಶೇರುಗಳೆಂದರೆ ವೇದಾಂತ, ಭಾರತಿ ಇನ್‌ಫ್ರಾಟೆಲ್, ಅರಬಿಂದೋ ಫಾರ್ಮಾ, ಎಸ್ ಬ್ಯಾಂಕ್, ಓಎನ್‌ಜಿಸಿ.