ಮುಂಬಯಿ : ಮುಂಬಯಿ ಶೇರು ಪೇಟೆಯ ಕಳೆದ ಎಂಟು ದಿನಗಳ ನಿರಂತರ ಗೆಲುವಿನ ಓಟಕ್ಕೆ ಇಂದು ಮಂಗಳವಾರ ಕೊನೆಗೂ ಬ್ರೇಕ್ ಹಾಕಲಾಗಿದೆ.
ಹೂಡಿಕೆದಾರರು ಮತ್ತು ವಹಿವಾಟುದಾರರು ಕಳೆದ ಎಂಟು ದಿನಗಳಲ್ಲಿ ಒದಗಿದ ಲಾಭದ ನಗದೀಕರಣಕ್ಕೆ ಒತ್ತು ನೀಡಿದ ಪರಿಣಾಮವಾಗಿ ಮುಂಬಯಿ ಶೇರು ಇಂದು 105 ಅಂಕ ಕುಸಿತವನ್ನು ಕಂಡಿತು.
ಇಂದು ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 1,367 ಶೇರುಗಳು ಮುನ್ನಡೆ ಸಾಧಿಸಿದವು; 1,344 ಶೇರುಗಳು ಹಿನ್ನಡೆಗೆ ಗುರಿಯಾದವು; 158 ಶೇರುಗಳ ಧಾರಣೆಯಲ್ಲಿ ಯಾವುದೇ ಬದಲಾವಣೆ ಕಂಡು ಬರಲಿಲ್ಲ.
ಸೆನ್ಸೆಕ್ಸ್ ದಿನದ ವಹಿವಾಟನ್ನು 105.85 ಅಂಕಗಳ ನಷ್ಟದೊಂದಿಗೆ 3,618.59 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. ನಿಫ್ಟಿ 29.20 ಅಂಕಗಳ ನಷ್ಟದೊಂದಿಗೆ 10,370.30 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿತು.
ಇಂದು ಅತೀ ಹೆಚ್ಚು ಲಾಭ ಗಳಿಸಿದ ಶೇರುಗಳೆಂದರೆ ಬಿಎಚ್‌ಇಎಲ್, ಮಾರುತಿ ಸುಜುಕಿ, ಇಂಡಿಯಾ ಬುಲ್ಸ್ ಹೌಸಿಂಗ್ ಮತ್ತು ಝೀ ಎಂಟರ್‌ಟೇನ್‌ಮೆಂಟ್.
ಅತೀ ಹೆಚ್ಚು ನಷ್ಟಕ್ಕೆ ಗುರಿಯಾದ ಶೇರುಗಳೆಂದರೆ ಎನ್‌ಟಿಪಿಸಿ, ಭಾರ್ತಿ ಏರ್‌ಟೆಲ್, ಭಾರ್ತಿ ಇನ್‌ಫ್ರಾಟೆಲ್ ಮತ್ತು ಅರಬಿಂದೋ ಫಾರ್ಮಾ.