ಮುಂಬಯಿ : ನಾಳೆ ಗುರುವಾರ ಫೆ.1ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್ ಬಗ್ಗೆ ಕುತೂಹಲ ತಳೆದಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು 68.71 ಅಂಕಗಳ ನಷ್ಟದೊಂದಿಗೆ 35,965.02 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 22 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 11,027.70 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಬಜೆಟ್ ಮಂಡನೆಗೆ ಮುನ್ನವೇ ವಿದೇಶೀ ಹೂಡಿಕೆ ಹಿಂದೆ ಸರಿಯಲು ಮುಂದಾದದ್ದು, ವಹಿವಾಟುದಾರರು ಲಾಭ ನಗದೀಕರಣಕ್ಕೆ ತೊಡಗಿದ್ದು, ಡಾಲರ್ ಎದುರು ರೂಪಾಯಿ ಹಿನ್ನಡೆ ಕಂಡದ್ದು ಮುಂತಾಗಿ ಅನೇಕ ಕಾರಣಗಳು ಇಂದು ಶೇರು ಮಾರುಕಟ್ಟೆಯನ್ನು ಕಾಡಿದವು.
ಇಂದಿನ ಟಾಪ್ ಗೇನರ್‌ಗಳು : ಭಾರ್ತಿ ಇನ್‌ಫ್ರಾಟೆಲ್, ಕೋಟಕ್ ಮಹೀಂದ್ರ, ಟಕ್ ಮಹೀಂದ್ರ, ಬಿಪಿಸಿಎಲ್, ಎಚ್‌ಪಿಸಿಎಲ್; ಟಾಪ್ ಲೂಸರ್‌ಗಳು : ಟಾಟಾ ಸ್ಟೀಲ್, ಡಾ. ರೆಡ್ಡಿ, ಯುಪಿಎಲ್, ಸಿಪ್ಲಾ, ಎಚ್‌ಯುಎಲ್.
ಇಂದು ವಹಿವಾಟಿಗೆ ಒಳಪಟ್ಟ ಶೇರುಗಳು 2,972; ಮುನ್ನಡೆ ಕಂಡ ಶೇರುಗಳು: 1,072; ಹಿನ್ನಡೆಗೆ ಗುರಿಯಾದವು 1,749; ಯಾವುದೇ ಬದಲಾವಣೆ ಕಾಣದ ಶೇರುಗಳು 151.