ಮುಂಬಯಿ : ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರ, ನಿರಂತರ ಏಳನೇ ದಿನ, 67.27 ಅಂಕಗಳ ನಷ್ಟಕ್ಕೆ ಗುರಿಯಾಗಿ 35,808.95 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿತು.
ಇದೆ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 21.65 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 10,724.40 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಕಳೆದ ಏಳು ದಿನಗಳಲ್ಲಿ ಸೆನ್ಸೆಕ್ಸ್ 1,615ಕ್ಕೂ ಹೆಚ್ಚು ಅಂಕಗಳನ್ನು ಕಳೆದುಕೊಂಡಿದೆ. ವಾರದ ನೆಲೆಯಲ್ಲಿ ಹೇಳುವುದಾದರೆ ಸೆನ್ಸೆಕ್ಸ್ ನಷ್ಟ 737.53 ಅಂಕ; ನಿಫ್ಟಿ ನಷ್ಟ 219.20 ಅಂಕ.
ಇಂದು ಶುಕ್ರವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ ಒಂದು ಹಂತದಲ್ಲಿ 365 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು. ಕೊನೇ ಗಳಿಗೆಯ ವಹಿವಾಟಿನಲ್ಲಿ ಚೇತರಿಕೆ ಕಂಡು ಬಂದು ನಷ್ಟದ ಪ್ರಮಾಣ 67 ಅಂಕಗಳ ಮಟ್ಟಕ್ಕೆ ತಗ್ಗಿತು.
ಇಂದಿನ ಬಿಗ್ ಲೂಸರ್ ಗಳಾದ ವೇದಾಂತ, ಹೀರೋ ಕಾರ್ಪ್, ಬಜಾಜ್ ಫಿನಾನ್ಸ್, ಎಸ್‌ಬಿಐ, ಎಕ್ಸಿಸ್ ಬ್ಯಾಂಕ್, ಎಚ್ ಡಿ ಎಫ್ ಸಿ, ಮಾರುತಿ ಸುಜುಕಿ, ಎಸ್ ಬ್ಯಾಂಕ್, ಮಹೀಂದ್ರ, ಇಂಡಸ್ ಇಂಡ್ ಬ್ಯಾಂಕ್, ಟಿಸಿಎಸ್, ಎಚ್ ಯು ಎಲ್ ಶೇರುಗಳು ಶೇ.2.87ರಷ್ಟು ಕುಸಿದವು.