ಮುಂಬಯಿ : ಕಳೆದ ಮೂರು ದಿನಗಳಿಂದ ನಿರಂತರ ಏರು ಗತಿಯನ್ನು ಪಡೆದುಕೊಂಡಿದ್ದ ಮುಂಬಯಿ ಶೇರು ಪೇಟೆ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ನೂರಕ್ಕೂ ಅಧಿಕ ಅಂಕಗಳ ನಷ್ಟಕ್ಕೆ ಗುರಿಯಾಗಿ ನಿರಾಶೆ ಉಂಟು ಮಾಡಿತು.
ಬೆಳಗ್ಗೆ 10.45ರ ಸುಮಾರಿಗೆ ಸೆನ್ಸೆಕ್ಸ್ 119.69 ಅಂಕಗಳ ನಷ್ಟದೊಂದಿಗೆ 35,65.19 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 48 ಅಂಕಗಳ ನಷ್ಟದೊಂದಿಗೆ 10,715.40 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ನಿನ್ನೆ ಅಮೆರಿಕದ ವಾಲ್ ಸ್ಟ್ರೀಟ್‌ನಲ್ಲಿ ತೀವ್ರ ನಷ್ಟ ಉಂಟಾದುದನ್ನು ಅನುಸರಿಸಿ ಇಂದು ಏಶ್ಯನ್ ಶೇರು ಪೇಟೆಗಳೆಲ್ಲ ಮಂಕಾಗಿ ನಷ್ಟಕ್ಕೆ ಗುರಿಯಾದವು. ನಿನ್ನೆಯ ಆರ್‌ಬಿಐ ನಿರ್ದೇಶಕರ ಮಂಡಳಿಯ ನಿರ್ಣಾಯಕ ಸಭೆಯಲ್ಲಿ ಆರ್‌ಬಿಐ ಯಾವ ಪ್ರಮಾಣದ ಮೀಸಲನ್ನು ತನ್ನ ಕೈಯಲ್ಲಿ ಹೊಂದಿರಬೇಕು ಎಂದು ತೀರ್ಮಾನಿಸಲು ಪರಿಣತರ ಸಮಿತಿಯೊಂದನ್ನು ರೂಪಿಸುವ ಬಗ್ಗೆ ಸರಕಾರ ಮತ್ತು ಆರ್‌ಬಿಐ ಒಪ್ಪಿಕೊಂಡವು.
ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ಎಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ರಿಲಯನ್ಸ, ಇಂಡಸ್ ಇಂಡ್ ಬ್ಯಾಂಕ್, ಮಾರುತಿ ಸುಜುಕಿ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಗೇಲ್, ಇಂಡಸ್ ಇಂಡ್ ಬ್ಯಾಂಕ್, ಅದಾನಿ ಪೋರ್ಟ್, ಎಚ್‌ಪಿಸಿಎಲ್, ಈಶರ್ ಮೋಟರ್; ಟಾಪ್ ಲೂಸರ್‌ಗಳು: ಎಸ್ ಬ್ಯಾಂಕ್, ಹಿಂಡಾಲ್ಕೊ, ಟೆಕ್ ಮಹೀಂದ್ರ, ಎಚ್‌ಸಿಎಲ್ ಟೆಕ್, ಯುಪಿಎಲ್.