Advertisement

ಸಾರ್ವಕಾಲಿಕ ಎತ್ತರದಿಂದ ಜಾರಿದ ಸೆನ್ಸೆಕ್ಸ್‌ 249 ಅಂಕ ಕುಸಿತ

04:14 PM Jan 30, 2018 | udayavani editorial |

ಮುಂಬಯಿ : ಸಾರ್ವಕಾಲಿಕ ದಾಖಲೆಯ ಎತ್ತರದಿಂದ ಕೆಳಗುರುಳಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಮಂಗಳವಾರದ ವಹಿವಾಟನ್ನು 249.52 ಅಂಕಗಳ ನಷ್ಟದೊಂದಿಗೆ 36,033.73 ಅಂಕಗಳ ಮಟ್ಟಕ್ಕೆ ಜಾರಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.

Advertisement

ಇದೇ ರೀತಿಯ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 80.70 ಅಂಕಗಳ ನಷ್ಟದೊಂದಿಗೆ 11,049.70 ಅಂಕಗಳ ಮಟ್ಟಕ್ಕೆ ಜಾರಿ ದಿನದ ವಹಿವಾಟನ್ನು ಕೊನೆಗೊಳಿಸಿತು. 

ಇಂದಿನ ವಹಿವಾಟಿನ ಟಾಪ್‌ ಗೇನರ್‌ಗಳು : ಎಸ್‌ಬಐ, ಎಚ್‌ ಡಿ ಎಫ್ ಸಿ, ಮಾರುತಿ ಸುಜುಕಿ, ಇನ್‌ಫೋಸಿಸ್‌, ಐಸಿಐಸಿಐ ಬ್ಯಾಂಕ್‌. ಟಾಪ್‌ ಲೂಸರ್‌ಗಳು : ಎಚ್‌ಪಿಸಿಎಲ್‌, ಕೋಲ್‌ ಇಂಡಿಯಾ, ಬಿಪಿಸಿಎಲ್‌, ಹೀರೋ ಮೋಟೋ ಕಾರ್ಪ್‌, ಸನ್‌ ಫಾರ್ಮಾ. 

ಇಂದು ವಹಿವಾಟಿಗೆ ಒಳಪಟ್ಟ ಶೇರುಗಳು 2,992. ಮುನ್ನಡೆ ಕಂಡವು : 800 ಶೇರು; ಹಿನ್ನಡೆಗೆ ಗುರಿಯಾದವು : 2,046, ಬದಲಾವಣೆ ಕಾಣದವು : 146 ಶೇರುಗಳು.

Advertisement

Udayavani is now on Telegram. Click here to join our channel and stay updated with the latest news.

Next