Advertisement

ಲಾಭ ನಗದೀಕರಣದ ಒತ್ತಡ: ಮುಂಬಯಿ ಶೇರು 14 ಅಂಕ ನಷ್ಟ

05:00 PM Jun 20, 2017 | |

ಮುಂಬಯಿ : ಮುಂಬಯಿ ಶೇರು ಮಾರುಕಟ್ಟೆ  ಇಂದು ಮಂಗಳವಾರ, ನಿನ್ನೆಯ ಗಳಿಕೆಯ ಬುನಾದಿಯನ್ನು ಗಟ್ಟಿ ಗೊಳಿಸುವ ಯತ್ನ ನಡೆಸಿತಾದರೂ 14.04 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 31,297.53 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

Advertisement

ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 4.05 ಅಂಕಗಳ ನಷ್ಟವನ್ನು ಅನುಭವಿಸಿ ದಿನದ ವಹಿವಾಟನ್ನು 9,653.50 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. 

ಇಂದು ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 1,431 ಶೇರುಗಳು ಕುಸಿತಕ್ಕೆ ಗುರಿಯಾದವು; 1,227 ಶೇರುಗಳು ಮುನ್ನಡೆಗೆ ಪಾತ್ರವಾದವು. 

ನಿನ್ನೆ ಅದ್ಭುತ ಏರಿಕೆಯನ್ನು ದಾಖಲಿಸಿದ್ದ ಬ್ಯಾಂಕ್‌ ಶೇರುಗಳು ಇಂದು ಮತ್ತೆ ಮುನ್ನಡೆಯುವಲ್ಲಿ ಸೋತವು. ಬ್ಯಾಂಕ್‌ ನಿಫ್ಟಿ ಸೂಚ್ಯಂಕ ಶೇ.0.02ರ ನಷ್ಟಕ್ಕೆ ಗುರಿಯಾಯಿತು.

ಟಾಟಾ ಮೋಟರ್‌ ಇಂದು ಶೇ.3ರ ಸೊಗಸಾದ ಏರಿಕೆಯನ್ನು ದಾಖಲಿಸಿತು. 2008ರಲ್ಲಿ ಟಾಟಾ ಮೋಟರ್‌ ಖರೀದಿಸಿದ್ದ ಜಾಗ್ವಾರ್‌ ಲ್ಯಾಂಡ್‌ ರೋವರ್‌ ಇದೀಗ 24 ಶತಕೋಟಿ ಡಾಲರ್‌ಗಳ ಐಪಿಓ ನಡೆಸಲು ಮುಂದಾಗಿರುವ ಸುದ್ದಿಯಿಂದಾಗಿ ಟಾಟಾ ಮೋಟರ್‌ ಬೇಡಿಕೆ ಹೆಚ್ಚಿತು.

Advertisement

ಟಾಟಾ ಪವರ್‌ ಕೂಡ ಇಂದು ಶೇ.5ರಷ್ಟು ಏರಿತು.

Advertisement

Udayavani is now on Telegram. Click here to join our channel and stay updated with the latest news.

Next