ಮುಂಬಯಿ : ಜೂನ್ ತಿಂಗಳ ವಾಯಿದೆ ವಹಿವಾಟು ಚುಕ್ತಾ ಮುನ್ನಾ ದಿನ ಮುಂಬಯಿ ಶೇರು ಮಾರುಕಟ್ಟೆ, ಏಶ್ಯನ್ ಮಾರುಕಟ್ಟೆಯಲ್ಲಿನ ದೌರ್ಬಲ್ಯ ಮತ್ತು ಜಿಎಸ್‌ಟಿ ಆತಂಕವನ್ನು ಅನುಲಕ್ಷಿಸಿ ಇಂದು ಬುಧವಾರದ ವಹಿವಾಟನ್ನು ನಿರಂತರ ಮೂರನೇ ದಿನದಲ್ಲಿ 123.93 ಅಂಕಗಳ ನಷ್ಟದೊಂದಿಗೆ 30,834.32 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 20.15 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 9,491.25 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದಿನ ವಹಿವಾಟಿನಲ್ಲಿ ನಡುವಿನಲ್ಲಿ ಸೆನ್ಸೆಕ್ಸ್ 31,000.48 ಅಂಕಗಳ ಎತ್ತರವನ್ನೂ 30,798.70 ಅಂಕಗಳ ಕೆಳಮಟ್ಟವನ್ನೂ ಕಂಡಿತ್ತು.
ಇಂದಿನ ಟಾಪ್ ಗೇನರ್‌ಗಳು ಟಾಟಾ ಸ್ಟೀಲ್, ಭಾರ್ತಿ ಏರ್‌ಟೆಲ್, ವಿಪ್ರೋ, ಪವರ್ ಗ್ರಿಡ್, ಐಸಿಐಸಿಐ ಬ್ಯಾಂಕ್. ಟಾಪ್ ಲೂಸರ್‌ಗಳು : ರಿಲಯನ್ಸ್ ಇಂಡಸ್ಟ್ರೀಸ್ , ಏಶ್ಯನ್ ಪೇಂಟ್, ಎಚ್ ಡಿ ಎಫ್ ಸಿ, ಒಎನ್‌ಜಿಸಿ ಮತ್ತು ಐಟಿಸಿ.
ಇಂದು ವ್ಯವಹಾರಕ್ಕೆ ಒಳಪಟ್ಟ ಶೇರುಗಳು 2,959. ಮುನ್ನಡೆ ಕಂಡವು 1,360; ಹಿನ್ನಡೆಗೆ ಗುರಿಯಾದವುಗಳು 1,403; ಯಾವುದೇ ಬದಲಾವಣೆ ಕಾಣದವು 196.