Advertisement
ವಾಹನಗಳಿಂದ ವಾಯು ಮಾಲಿನ್ಯ ತಡೆಗಟ್ಟುವುದಕ್ಕಾಗಿ ಕೇಂದ್ರ ಸರಕಾರ ವಿವಿಧ ಹಂತಗಳ “ಭಾರತ್ ಸ್ಟೇಜ್’ ಮಾಲಿನ್ಯ ನಿಯ ಮಾವಳಿ ಜಾರಿಗೆ ತಂದಿದೆ. ಸದ್ಯ ಜಾರಿಯಲ್ಲಿರುವುದು “ಬಿಎಸ್-4′. 2020ರ ಎ.1ರಿಂದ “ಬಿಎಸ್ 5′ ಬದಲು “ಬಿಎಸ್ 6′ ಇಂಧನವನ್ನೇ ಬಳಸಲಾಗುತ್ತದೆ. ಇದಕ್ಕೆ ತಕ್ಕಂತೆ ವಾಹನಗಳ ಉತ್ಪಾದನೆ ನಡೆಯಲಿದೆ. ಬಿಎಸ್6 ಡೀಸೆಲ್ ಉತ್ಪಾದನೆಗೆ ಬೇಕಾದ ತಾಂತ್ರಿಕ ಸೌಲಭ್ಯಗಳು ಈಗಾಗಲೇ ಎಂಆರ್‌ಪಿಎಲ್‌ನಲ್ಲಿವೆ. ಬಿಎಸ್6 ಪೆಟ್ರೋಲ್ ಉತ್ಪಾದನೆಗೆ
ಎಂಆರ್‌ಪಿಎಲ್ ಆರಂಭ ಕಾಲದಲ್ಲಿ ಡೀಸೆಲ್‌ನಲ್ಲಿ ಶೇ.1ರಷ್ಟು ಸಲ#ರ್ ಅಂಶ ಸೇರಿಸಲು ಅವಕಾಶವಿತ್ತು. ಬಳಿಕ ಶೇ.0.50 ಬಳಸಲಾಗುತ್ತಿತ್ತು. ಅನಂತರ ಇದು 2,500 ಪಿಪಿಎಂ, 500, 350 ಪಿಪಿಎಂಗಿಳಿಯಿತು. ಬಿಎಸ್4ನಡಿ ಡೀಸೆಲ್ ಮತ್ತು ಪೆಟ್ರೋಲ್ ಎರಡರಲ್ಲೂ 50 ಪಿಪಿಎಂ ಮಾತ್ರ ಸಲ#ರ್ ಸೇರ್ಪಡೆಗೆ ಅವಕಾಶ. ಇದು ಬಿಎಸ್6ನಲ್ಲಿ ಇನ್ನಷ್ಟು ಕಡಿಮೆ.
Related Articles
ಹಿಂದೆ ಪೆಟ್ರೋಲ್‌ಗೆ ಸತುವಿನಂಶ ಸೇರ್ಪಡೆ ಮಾಡಲಾಗುತ್ತಿತ್ತು. ಸತು ಮಾಲಿನ್ಯಕಾರಿ. 2000ನೇ ಇಸವಿಯಿಂದ ಸತುಮುಕ್ತ ಇಂಧನ ನೀಡಲು ಕೇಂದ್ರ ಸರಕಾರ ಸೂಚಿಸಿತ್ತು. ಅದಕ್ಕಿಂತ ನಾಲ್ಕು ವರ್ಷ ಮೊದಲೇ, 1996ರಲ್ಲಿ ಎಂಆರ್‌ಪಿಎಲ್‌ನಲ್ಲಿ ಸತುಮುಕ್ತ ಪೆಟ್ರೋಲ್ ಉತ್ಪಾದಿಸಲಾಗಿತ್ತು.
Advertisement
ಬಿಎಸ್4 ವಾಹನಗಳಿಗೆ ಸಮಸ್ಯೆ ಇಲ್ಲಸದ್ಯ ದೇಶದಲ್ಲಿ ಬಿಎಸ್4 ಇಂಧನ ಬಳಕೆ ಸಾಮರ್ಥ್ಯದ ವಾಹನಗಳಿವೆ. ಮುಂದಿನ ಎಪ್ರಿಲ್‌ನಿಂದ ಮಾರುಕಟ್ಟೆಗೆ ಬರುವ ವಾಹನಗಳು ಬಿಎಸ್6 ಸಾಮರ್ಥ್ಯದವಾಗಿರುತ್ತವೆ. ಆ ಬಳಿಕವೂ ಬಿಎಸ್4 ವಾಹನಗಳಿಗೆ ಬಿಎಸ್6 ಇಂಧನ ತುಂಬಿಸಲು ಸಮಸ್ಯೆ ಇಲ್ಲ. ಆದರೆ ವಾಹನ ಮತ್ತು ಇಂಧನ ಬೇರೆ ಬೇರೆ ಕ್ರಮಾಂಕದವಾದ್ದರಿಂದ ಮಾಲಿನ್ಯ ನಿಯಂತ್ರಣ ಪೂರ್ಣ ಸಾಧನೆಯಾಗದು. ಏನಿದು ಬಿಎಸ್-6?
ಭಾರತ್ ಸ್ಟೇಜ್ (ಬಿಎಸ್) ಅಂದರೆ ವಾಹನಗಳ ಇಂಗಾಲಾಮ್ಲ ಹೊರ ಸೂಸುವಿಕೆ, ಮಾಲಿನ್ಯ ನಿಯಂತ್ರಣ ಮಾನದಂಡ. ಪೆಟ್ರೋಲ್-ಡೀಸೆಲ್‌ನಲ್ಲಿ ಗಂಧಕದ ಅಂಶ ಅಧಿಕವಿದ್ದಷ್ಟು ಮಾಲಿನ್ಯ ಅಧಿಕ. ಹೀಗಾಗಿ ಸರಕಾರಗಳು ಅದನ್ನು ಕಡಿಮೆ ಮಾಡುವ ನೀತಿಗೆ ಆದ್ಯತೆ ನೀಡುತ್ತಾ ಬಂದಿವೆ. ಪ್ರಸ್ತುತ ದೇಶದಲ್ಲಿ ಜಾರಿಯಲ್ಲಿರುವುದು ಬಿಎಸ್4. ಮುಂದೆ ಬಿಎಸ್6 ಜಾರಿಗೆ ಬರುವಾಗ ಇದರ ಪ್ರಮಾಣ ಇನ್ನಷ್ಟು ಕಡಿಮೆಯಾಗುತ್ತದೆ. ಎಂಆರ್‌ಪಿಎಲ್; ರಾಜ್ಯಾದ್ಯಂತ ಇಂಧನ ಸರಬರಾಜು
ಎಂಆರ್‌ಪಿಎಲ್ ಉತ್ಪಾದಿಸುವ ಒಟ್ಟು ಇಂಧನದ ಪೈಕಿ ಶೇ.75ರಷ್ಟು ರಾಜ್ಯದ ಒಳಗೆ ಸರಬರಾಜು ಆಗುತ್ತಿದೆ. ಉಳಿದಂತೆ ಸ್ವಲ್ಪ ಪ್ರಮಾಣದಲ್ಲಿ ಗೋವಾ, ಕೇರಳ ಭಾಗಕ್ಕೆ ಹೋಗುತ್ತದೆ. ಪ್ರತೀ ವರ್ಷ ಸುಮಾರು 6 ಲಕ್ಷ ಟನ್‌ನಷ್ಟು ಡೀಸೆಲ್, 10 ಲಕ್ಷ ಟನ್ ಪೆಟ್ರೋಲ್, 10 ಲಕ್ಷ ಟನ್ ಎಲ್‌ಪಿಜಿಯನ್ನು ಉತ್ಪಾದಿಸುತ್ತದೆ. ಅದರ ಒಟ್ಟು ವಾರ್ಷಿಕ ವಹಿವಾಟು ಸುಮಾರು 60,000 ಕೋ.ರೂ. ಡಿಸೆಂಬರ್‌ನಲ್ಲಿ ಯುನಿಟ್ ಕಾಮಗಾರಿ ಪೂರ್ಣ
ಎಪ್ರಿಲ್ 1ರಿಂದ “ಬಿಎಸ್-6′ ಪೆಟ್ರೋಲ್ ಮತ್ತು ಡೀಸೆಲ್ ಸರಬರಾಜು ಮಾಡಲು ಕೇಂದ್ರ ಸರಕಾರ ಸೂಚಿಸಿದೆ. ಇದರನ್ವಯ ಅಗತ್ಯವಾದ ಯುನಿಟ್‌ಗಳನ್ನು 1,810 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಡಿಸೆಂಬರ್‌ನಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದ್ದು, ಜ.1ರಿಂದಲೇ ಬಿಎಸ್6 ತೈಲ ಸರಬರಾಜು ಮಾಡಲು ನಾವು ಸಿದ್ಧ.
–ಎಂ. ವೆಂಕಟೇಶ್ ವ್ಯವಸ್ಥಾಪಕ ನಿರ್ದೇಶಕರು, ಎಂಆರ್‌ಪಿಎಲ್. ದಿನೇಶ್ ಇರಾ