Advertisement

ಬಿಎಸ್‌ವೈ ಇಲ್ಲದೆ ಗೆದ್ದ ಬಿಜೆಪಿ

03:20 PM Sep 07, 2021 | Team Udayavani |

ಬೆಂಗಳೂರು: ಮೂರು ಮಹಾನಗರ ಪಾಲಿಕೆಗಳು ಮತ್ತು ಇತರ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದೆ. ಈ
ಚುನಾವಣೆಯ ಪ್ರಧಾನ ಅಂಶವೆಂದರೆ ಮಾಜಿ ಸಿಎಂ, ಬಿಜೆಪಿಯ ಹಿರಿಯ ಮುಖಂಡ ಬಿ.ಎಸ್‌.ಯಡಿಯೂರಪ್ಪ ಪ್ರಭಾವ ಇಲ್ಲದೆಯೇ ಹೆಚ್ಚಿನ ಸ್ಥಾನಗಳನ್ನು ಗಳಿಸಿದ್ದು!

Advertisement

ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಹಾಗೂ ಕಲಬುರಗಿ ಪಾಲಿಕೆಗಳ ಪೈಕಿ ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ಮಾತ್ರ ಅಧಿಕಾರದಲ್ಲಿದ್ದ ಬಿಜೆಪಿ ಈ ಬಾರಿ ಮೂರು ಪಾಲಿಕೆಯಲ್ಲಿ ಅಧಿಕಾರಕ್ಕೆ ಸಿದ್ಧವಾಗಿದೆ.

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಸಂದರ್ಭದಲ್ಲಿಯೇ ರಾಜ್ಯ ಪ್ರವಾಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುವುದಾಗಿ ಬಿಎಸ್‌ವೈ
ಹೇಳಿಕೊಂಡಿದ್ದರು. ರಾಜೀನಾಮೆಕೊಟ್ಟ ನಂತರ, ಅವರ ನೆರಳಿನಿಂದ ಹೊರತರಲು ರಾಷ್ಟ್ರೀಯ ನಾಯಕರು ಪರೋಕ್ಷವಾಗಿ ಪ್ರಯತ್ನ ಮಾಡುತ್ತಿ ದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಹೆಣ್ಣುಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಡಿಜಿಟಲೈಸ್ಡ್ ವ್ಯವಸ್ಥೆ ಜಾರಿ: ಸಚಿವ ಮಾಧುಸ್ವಾಮಿ

ಬೆಳಗಾವಿ ಪ್ರಯೋಗ: ಇದುವರೆಗೂ ಪಕ್ಷದ ಚಿಹ್ನೆಯಿಲ್ಲದೇ ಕನ್ನಡ ಮರಾಠಿ ಲೆಕ್ಕಾಚಾರದಲ್ಲಿ ನಡೆಯುತ್ತಿದ್ದ ಬೆಳಗಾವಿ ಪಾಲಿಕೆ ಚುನಾವಣೆ ಯಲ್ಲಿ ಪಕ್ಷದ ಚಿಹ್ನೆಯ ಮೂಲಕ ಚುನಾವಣೆ ಎದುರಿಸಲು ಬಿಜೆಪಿ ನಾಯಕರು ನಿರ್ಧರಿಸಿದ್ದರು. ಜತೆಗೆ ಮಹಾನಗರ ವ್ಯಾಪ್ತಿಯಲ್ಲಿರುವ ಕನ್ನಡ ಪರ ಇರುವ ಮರಾಠ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಿದ್ದಾರೆ. ಪ್ರಥಮ ಬಾರಿಗೆ ಲಿಂಗಾಯತರಿಗಿಂತ ಹೆಚ್ಚಿನ ಟಿಕೆಟ್‌ಗಳನ್ನು ಮರಾಠ ಸಮುದಾಯ ದವರಿಗೆ ನೀಡಿ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಬಿಜೆಪಿ ನಾಯಕರು ಯಶಸ್ವಿಯಾಗಿದ್ದಾರೆ.

Advertisement

ಕಲಬುರಗಿ ಪಾಲಿಕೆಯಲ್ಲಿ ಬಿಎಸ್‌ವೈ ಪ್ರಭಾವ ಇಲ್ಲದೇ ಇದೇ ಮೊದಲ ಬಾರಿಗೆ ಅಧಿಕಾರದ ಗದ್ದುಗೆಹಿಡಿಯುತ್ತಿದ್ದಾರೆ. ಸ್ವತಃ ಯಡಿಯೂರಪ್ಪ
ಜೆಡಿಎಸ್‌ ಜೊತೆ ಮೈತ್ರಿ ಅಗತ್ಯವಿಲ್ಲ ಎಂದಿದ್ದರೂ, ಆ ಪಕ್ಷದ ಜೊತೆಗೆ ಮೈತ್ರಿಗೆ ಮುಂದಾಗಿರುವುದು ಪರೋಕ್ಷವಾಗಿ ಅವರ ಸೂಚನೆಯನ್ನು
ಕಡೆಗಣಿಸುತ್ತಿರುವುದರ ಸಂಕೇತವಾಗಿದೆ ಎಂಬ ಮಾತುಗಳುಕೇಳಿ ಬರುತ್ತಿವೆ

ಅಮಿತ್‌ ಶಾ ಸಂದೇಶ
ಚುನಾವಣೆಯ ಸಂದರ್ಭದಲ್ಲಿ ಬೇರೆಕಾರ್ಯ ಕ್ರಮಗಳಿಗೆ ಆಗಮಿಸಿದ್ದಕೇಂದ್ರ ಗೃಹ ಸಚಿವ ಅಮಿತ್‌ ಶಾಮುಂದಿನ ವಿಧಾನಸಭೆ ಚುನಾವಣೆ ಯನ್ನುಹಾಲಿ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ನೇತೃತ್ವದಲ್ಲಿಯೇ ಎದುರಿಸಲಾಗುವುದು ಎಂದು ಹೇಳಿರುವುದು ಪಾಲಿಕೆ ಚುನಾವಣೆಗಳ ಮೇಲೆ ಪರಿಣಾಮ ಬೀರಿದೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿವೆ. ಮೂರು ಮಹಾನಗರ ಪಾಲಿಕೆಗಳು ಉತ್ತರಕರ್ನಾಟಕ
ವ್ಯಾಪ್ತಿಯಲ್ಲಿವೆ. ಬೊಮ್ಮಾಯಿ ಅವರೂಈ ಕಡೆಯವರೇ ಆಗಿದ್ದಾರೆ.ಹೀಗಾಗಿಯೇ ಮತದಾರರ ಮೇಲೆ ಪ್ರಭಾವ ಬೀರಲೆಂದೇ ಅಮಿತ್‌ ಶಾ ಈ ಮಾತುಗಳನ್ನಾಡಿದ್ದಾರೆ ಎಂದು ಹೇಳಲಾಗುತ್ತಿದೆ.ಪಾಲಿಕೆ ಫ‌ಲಿತಾಂಶ ಬಂದ ನಂತರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸೇರಿದಂತೆ ಪಕ್ಷದ ಬಹುತೇಕ ನಾಯಕರುಬಸವರಾಜ ಬೊಮ್ಮಾಯಿ ನಾಯಕತ್ವದಲ್ಲಿಯೇ ಚುನಾವಣೆ ಎದುರಿಸುತ್ತೇವೆ ಎಂದಿದ್ದಾರೆ.ಜೊತೆಗೆ ಬಿ.ಎಸ್‌.ಯಡಿಯೂರಪ್ಪ ಅವರ ಮಾರ್ಗದರ್ಶನ ಇರುತ್ತದೆ ಎನ್ನುವ ಮೂಲಕ ಪಕ್ಷವನ್ನು ಅವರ ನೆರಳಿನಿಂದ ಹೊರ ತರುವ ಪ್ರಯತ್ನಇದಾಗಿದೆ ಎನ್ನಲಾಗಿದೆ.

-ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next