Advertisement
ಸದ್ಯದ ಮಾಹಿತಿ ಪ್ರಕಾರ ಜು. 26ರ ಸಂಜೆ ಬಿಎಸ್‌ವೈ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ. ಹೀಗಾಗಿ ರವಿವಾರ ನಿರ್ಣಾಯಕ ದಿನದಂತಿದೆ.
ಮುಖ್ಯಮಂತ್ರಿ ಬದಲಾವಣೆಯ ವಿಚಾರಗಳಿಗೆ ತಲೆಕೆಡಿಸಿಕೊಳ್ಳದ ಯಡಿಯೂರಪ್ಪ ತಮ್ಮ ಆಡಳಿತಾತ್ಮಕ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ರವಿವಾರ ಪ್ರವಾಹಪೀಡಿತ ಬೆಳಗಾವಿ ಜಿಲ್ಲೆಗೆ ಪರಿಶೀಲನೆಗೆ ತೆರಳಲಿದ್ದಾರೆ. ಇಂಥ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಬಿಜೆಪಿ ವರಿಷ್ಠರ ಸಂದೇಶ ಏನಿರಲಿದೆ ಎಂಬ ಕುತೂಹಲ ರಾಜ್ಯ ಬಿಜೆಪಿ ವಲಯದಲ್ಲಿದೆ. ಮುಖ್ಯಮಂತ್ರಿಗಳು ಪ್ರವಾಹಪೀಡಿತ ಪ್ರದೇಶಗಳ ಜನರ ನೆರವಿಗೆ ಧಾವಿಸುತ್ತಿರುವ ಸಂದರ್ಭದಲ್ಲಿ ಪದತ್ಯಾಗಕ್ಕೆ ಸೂಚಿಸುವುದು ಒಳ್ಳೆಯ ಬೆಳವಣಿಗೆಯಾಗದು. ಹೀಗಾಗಿ ಈ ವಿಚಾರದಲ್ಲಿ ವರಿಷ್ಠರು ಯೋಚಿಸಿ ನಿರ್ಧಾರ ತೆಗೆದುಕೊಳ್ಳಲಿದ್ದು, ಯಡಿಯೂರಪ್ಪ ಅವರಿಗೆ ಇನ್ನಷ್ಟು ದಿನ ಮುಂದುವರಿಯಲು ಅವಕಾಶ ದೊರೆಯಬಹುದು ಎಂಬ ಆಶಾಭಾವನೆ ಅವರ ಆಪ್ತ ವಲಯದ್ದು.
Related Articles
ಯಡಿಯೂರಪ್ಪ ರಾಜೀನಾಮೆ ನೀಡಿದರೂ ಹೊಸ ನಾಯಕನ ಆಯ್ಕೆ ಆಗುವ ವರೆಗೆ ಅಂದರೆ, ಆ. 15ರ ವರೆಗೆ ಹಂಗಾಮಿಯಾಗಿ ಮುಂದುವರಿಯುವ ಸಾಧ್ಯತೆ ಇದೆ. ಒಂದು ಮೂಲದ ಪ್ರಕಾರ ಆ. 8ರ ವರೆಗೆ ಆಷಾಢ ಮಾಸ ಇದ್ದು, ಅಲ್ಲಿಯವರೆಗೆ ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಅನುಮಾನ.
Advertisement
ಇನ್ನೊಂದು ಮೂಲದ ಪ್ರಕಾರ, ಆ. 13ರ ವರೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳಲಿ ದ್ದಾರೆ. ಬಳಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.