Advertisement

ಜಾತ್ಯತೀತ ಪರಿಕಲ್ಪನೆಯೇ ಸರ್ಕಾರದ ಆಶಯ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ

07:37 PM Dec 03, 2020 | sudhir |

ಬೆಂಗಳೂರು: ದಾಸ ಸಾಹಿತ್ಯದ ಯುಗ ಪ್ರವರ್ತಕ ಕನಕದಾಸರ ಜಾತ್ಯತೀತ ಪರಿಕಲ್ಪನೆಯೇ ನಮ್ಮ ಸರ್ಕಾರದ ಆಶಯವಾಗಿದೆ. ಆ ಹಿನ್ನೆಲೆಯಲ್ಲಿಯೇ ಸರ್ಕಾರ ಸರ್ವಜನಾಂಗದ ಅಭಿವೃದ್ಧಿಗೆ ಸಮಾನ ಅವಕಾಶ ಮತ್ತು ಅನುದಾನ ನೀಡುತ್ತಾ ಬಂದಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

Advertisement

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗುರುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸಾಧಕರಿಗೆ 2019 ಮತ್ತು 20ನೇ ಸಾಲಿನ “ಕನಕ ಗೌರವ, “ಕನಕ ಯುವ ಪುರಸ್ಕಾರ’ ಮತ್ತು “ಕನಕಶ್ರೀ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಈ ಹಿಂದೆ ಎಂದೂ ನೀಡದಂತಹ ಆದ್ಯತೆಯನ್ನು ಸರ್ಕಾರ ನೀಡಿದೆ. ಕನಕದಾಸರ ಬದುಕು ಬರಹಗಳಳನ್ನು ಹೊಸ ತಲೆಮಾರಿಗೆ ತಲುಪಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಕಾರ್ಯ ಪ್ರವೃತ್ತವಾಗಿದೆ. ಅಲ್ಲದೆ ಕನಕದಾಸರ ಕುರಿತ ಪುಸ್ತಕ ಪ್ರಕಟಣೆ ಜತೆಗೆ ಕಮ್ಮಟ ಸೇರಿದಂತೆ ಹಲವು ಸಾರ್ಥಕ ಕಾರ್ಯದಲ್ಲಿ ಈ ಕೇಂದ್ರ ತೊಡಗಿದೆ ಎಂದರು.

ನಾಡಿನ ಸಾಹಿತ್ಯ ಕ್ಷೇತ್ರಕ್ಕೆ ಕನಕದಾಸರ ಕೊಡುಗೆ ಅನನ್ಯ. ಮೌಡ್ಯ ಮತ್ತು ಕಂದಾಚಾರಗಳ ವಿರುದ್ಧ ಕನಕದಾಸರು ಸಮರ ಸಾರಿದ್ದರು. ಇಂತಹ ಸಾಹಿತ್ಯ ಸಾಧಕನ ಜೀವನ ನಮಗೆ ಆದರ್ಶ. ಆ ಹಿನ್ನೆಲೆಯಲ್ಲಿ ಯುವ ಜನಾಂಗಕ್ಕೆ ಕನಕದಾಸರ ಜೀವನ ಸಾಧನೆ ತಿಳಿಸುವ ಕೆಲಸ ಆಗಬೇಕಾಗಿದೆ ಎಂದು ಹೇಳಿದರು.

ಕನಕದಾಸರ ಕುರಿತು ಉಪನ್ಯಾಸ ನೀಡಿದ ಡಾ.ಎಲ್‌.ಜಿ.ಮೀರಾ, ಜಾತಿ ಮೂಲಕ ಮಾಡಲಾದ ಅವಮಾನವನ್ನು ಕನಕದಾಸರು ಜ್ಞಾನದಲ್ಲಿ ಗೆದ್ದರು. ಹಲವು ಅಪಮಾನಗಳ ನಡುವೆಯೂ ತಾಳ್ಮೆಯಿಂದ ಜ್ಞಾನದ ಮಾರ್ಗದಲ್ಲಿ ಸಾಗಿದರು ಎಂದರು. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕನಕದಾಸರ ಕೊಡುಗೆ ಅಪಾರ, ಭರತನಾಟ್ಯ, ಚಿತ್ರ ಸಾಹಿತ್ಯ, ಭಕ್ತಿ ಮತ್ತು ತತ್ವ ಸಾಹಿತ್ಯದಲ್ಲೂ ಕನಕದಾಸರ ಪದಗಳ ಬಳಕೆ ಆಗಿರುವುದು ಅವರ ಸಾಹಿತ್ಯಕ್ಕೆ ಹಿರಿಮೆಗೆ ಹಿಡಿದ ಕೈಗನ್ನಡಿ ಎಂದು ತಿಳಿಸಿದರು.

Advertisement

ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ, ಸಚಿವ ಭೈರತಿ ಬಸವರಾಜ್‌, ಮಾಜಿ ಸಚಿವ ಎಚ್‌.ಎಂ.ರೇವಣ್ಣ, ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಮರಿಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ವಿ.ರಶ್ಮಿ ಮಹೇಶ್‌, ನಿರ್ದೇಶಕ ಎಸ್‌.ರಂಗಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಜಾತಿ ಬೆಸೆಯುವ ಜಯಂತಿಗಳು ನಡೆಯಬೇಕು
ಇತ್ತೀಚಿನ ದಿನಗಳಲ್ಲಿ ಆತಂಕಕಾರಿ ಬೆಳವಣಿಗೆಗಳು ನಡೆಯುತ್ತಿದ್ದು ಜಾತಿ ಬೆಸೆಯುವ ಜಯಂತಿಗಳು ನಿಲ್ಲದೆ ನಡೆಯಬೇಕು. ಜತೆಗೆ ಜಾತಿ ಬಲ, ತೋಳ್ಬಲವಿಲ್ಲದ ಸಮುದಾಯಗಳಿಗೆ ವೇದಿಕೆಗೆಗಳು ಸಿಗುವಂತಾಗಬೇಕು. ಕನಕದಾಸರ ಆಶಯ ಕೂಡ ಇದೇ ಆಗಿತ್ತು ಎಂದು ಕಲಬುರಗಿಯ ಕಾಗಿನೆಲೆ ಮಹಾಸಂಸ್ಥಾನ ಕನಕಗುರು ಪೀಠದ ಸಿದ್ದರಾಮಾನಂದ ಸ್ವಾಮೀಜಿ ಹೇಳಿದರು.

ಯಾರ್ಯಾರು ಪ್ರಶಸ್ತಿ ಪುರಸ್ಕೃತರು
2019ರ “ಕನಕ ಗೌರವ ಪ್ರಶಸ್ತಿ’ಗೆ ಮಂಗಳೂರಿನ ಪ್ರೊ.ಬಿ.ಶಿವರಾಮ ಶೆಟ್ಟಿ, 2019ರ “ಕನಕ ಯುವ ಪುರಸ್ಕಾರ’ಕ್ಕೆ ಉಡುಪಿಯ ಡಾ.ಕಾತ್ಯಾಯಿನಿ ಕುಂಜಿಬೆಟ್ಟು .ಹಾಗೆಯೇ 2020ರ “ಕನಕಶ್ರೀ ಪ್ರಶಸ್ತಿ’ಗೆ ದಾವಣೆಗೆರೆಯ ಯುಗಧರ್ಮ ರಾಮಣ್ಣ, “ಕನಕ ಗೌರವ ಪ್ರಶಸಿ’¤ಗೆ ಹಾವೇರಿಯ ಡಾ.ಶಶಿಧರ್‌ ಜಿ.ವೈದ್ಯ ಮತ್ತು “ಕನಕ ಯುವ ಪುರಸ್ಕಾರ’ ಕ್ಕೆ ಬೆಂಗಳೂರಿನ ಹೂವಿನಹಳ್ಳಿ ಡಾ.ನರಸಿಂಹಮೂರ್ತಿ ಅವರು ಭಾಜನರಾದರು.

Advertisement

Udayavani is now on Telegram. Click here to join our channel and stay updated with the latest news.

Next