Advertisement

ಬಿಎಸ್‌ವೈ ನಿವಾಸಕ್ಕೆ ನಾಗಾಸಾಧುಗಳ ಭೇಟಿ

07:35 AM Apr 01, 2018 | |

ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರ ಡಾಲರ್ ಕಾಲೋನಿ ನಿವಾಸಕ್ಕೆ ಶನಿವಾರ ನಾಗಾ ಸಾಧುಗಳ ತಂಡ ಭೇಟಿ ನೀಡಿತ್ತು. 

Advertisement

ಸುಮಾರು 18 ಜನರಿದ್ದ ನಾಗಾ ಸಾಧುಗಳ ತಂಡ ಭೇಟಿ ನೀಡಿದ್ದ ಸಂದರ್ಭದಲ್ಲಿ ಯಡಿಯೂರಪ್ಪ ಮನೆಯಲ್ಲಿರಲಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರೊಂದಿಗೆ ಚುನಾವಣಾ ಪ್ರಚಾರ ಪ್ರವಾಸದಲ್ಲಿದ್ದ ಯಡಿಯೂರಪ್ಪ ಅವರ ಸೂಚನೆಯಂತೆ ಮನೆಯಲ್ಲಿದ್ದವರು ನಾಗಾಸಾಧುಗಳನ್ನು ಉಪಚರಿಸಿ ಬೀಳ್ಕೊಟ್ಟರು. ಕಳೆದ ವರ್ಷ ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ್ದೆವು. ಸದ್ಯ ಕರ್ನಾಟಕ ಪ್ರವಾಸದಲ್ಲಿದ್ದು,ಮತ್ತೂಮ್ಮೆ ಅವರನ್ನು ಭೇಟಿಯಾಗಲು ಬಂದಿದ್ದೆವು ಎಂದು ತಂಡದಲ್ಲಿದ್ದ ರಮೇಶ್‌ ಮೆಹವತ್‌ ತಿಳಿಸಿದರು. ಬಳಿಕ ತಂಡವು ಎರಡು ವಾಹನಗಳಲ್ಲಿ ಚಿತ್ರದುರ್ಗದ ಮುರುಘಾ ಮಠದತ್ತ ಪ್ರಯಾಣ ಬೆಳೆಸಿತು.

Advertisement

Udayavani is now on Telegram. Click here to join our channel and stay updated with the latest news.

Next