Advertisement

ಸಿಎನ್‌ಜಿ ಕಿಟ್‌ ಹಾಕಿಸಿ; ಜೇಬು ಹಗುರಾಗಿಸಿ!

07:28 PM Jan 29, 2022 | Team Udayavani |

ನವದೆಹಲಿ: ಪೆಟ್ರೋಲ್‌ ದರ ಹೆಚ್ಚಾಯಿತು. ಅಯ್ಯೋ ಈ ಹೊಡೆತವನ್ನು ಹೇಗೆ ತಡೆದುಕೊಳ್ಳುವುದು ಎಂಬ ಚಿಂತೆ ಬಿಡಿ. ಕೇಂದ್ರ ಸರ್ಕಾರ ಜನರ ಜೇಬಿನ ಮೇಲಿನ ಹೊರೆ ಇಳಿಸಲು ಮುಂದಾಗಿದೆ.

Advertisement

1,500 ಸಿಸಿ ವರೆಗಿನ ವಾಹನಗಳಿಗೆ ಸಿಎನ್‌ಜಿ ಕಿಟ್‌ ಹಾಕುವ ಸೌಲಭ್ಯ ನೀಡಲು ಮುಂದಾ ಗಿದೆ. ಕೇಂದ್ರ ಸರ್ಕಾರ ಹೊರಡಿಸಿದ ಕರಡು ನಿಯಮಗಳ ಪ್ರಕಾರ ಮುಂದಿನ ದಿನಗಳಲ್ಲಿ ಬಿಎಸ್‌-6 ಪರಿಸರ ಮಾಲಿನ್ಯ ನಿಯಂತ್ರಣ ವ್ಯವಸ್ಥೆ ಹೊಂದಿರುವ ಪೆಟ್ರೋಲ್‌ ಕಾರುಗಳಲ್ಲಿ ಸಿಎನ್‌ಜಿ ಕಿಟ್‌ ಅಳವಡಿಸಬಹುದು. ಇದರಿಂದಾಗಿ ಪೆಟ್ರೋಲ್‌ ಮೇಲಿನ ವೆಚ್ಚವನ್ನು ಶೇ.40ರಿಂದ ಶೇ.50ರಷ್ಟು ತಗ್ಗಿಸಲು ಅವಕಾಶ ಇದೆ. ಸದ್ಯದ ನಿಯಮಗಳ ಪ್ರಕಾರ ಬಿಎಸ್‌-4 ಮಾದರಿಯ ಪರಿಸರ ಮಾಲಿನ್ಯ ನಿಯಂತ್ರಣ ವ್ಯವಸ್ಥೆ ಹೊಂದಿರುವ ಕಾರುಗಳಿಗೆ ಸಿಎನ್‌ಜಿ ಕಿಟ್‌ ಅಳವಡಿಸಲು ಕಾನೂನಿನ ಅನ್ವಯ ಅವಕಾಶ ಉಂಟು.

ಕರಡು ನಿಯಮಗಳನ್ನು ಸಮರ್ಥಿಸಿಕೊಂಡ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು “ಈ ಕ್ರಮದಿಂದ ಪೆಟ್ರೋಲ್‌ಗೆ ಹಾಕುವ ವೆಚ್ಚದ ಪ್ರಮಾಣ ಕಡಿಮೆಯಾಗಲಿದೆ. ಸಿಎನ್‌ಜಿ ಹೆಚ್ಚು ಪರಿಸರ ಸ್ನೇಹಿ ಇಂಧನ. 1,500 ಸಿ.ಸಿ. ವರೆಗಿನ ಸಾಮರ್ಥ್ಯದ ಕಾರುಗಳು ಮತ್ತು ಈ ವ್ಯಾಪ್ತಿಯಲ್ಲಿ ಬರುವ ಕೆಲವು ಎಸ್‌ಯುವಿಗಳಿಗೂ ಇದರಿಂದ ಅನುಕೂಲವಾಗಲಿದೆ’ ಎಂದು ಹೇಳಿದ್ದಾರೆ.

ಲಾಭ ಲೆಕ್ಕಾಚಾರ
50 ಸಾವಿರ ರೂ. – ಸಿಎನ್‌ಜಿ ಕಿಟ್‌ ಅಳವಡಿಕೆ ವೆಚ್ಚ
3 ವರ್ಷ- ಒಮ್ಮೆ ಸಿಎನ್‌ಜಿ ಕಿಟ್‌ ಅಳವಡಿಸಿದ ಬಳಿಕ ನವೀಕರಣ

ಅನುಕೂಲ ಹೇಗೆ?
– ಸದ್ಯ ಪ್ರತಿ ಕೆಜಿ ಸಿಎನ್‌ಜಿ ಗೆ ಬೆಂಗಳೂರಿನಲ್ಲಿ 55 ರೂ.
– ಪೆಟ್ರೋಲ್‌ಗೆ ಹೋಲಿಕೆ ಮಾಡಿದರೆ ಅರ್ಧದಷ್ಟು ಕಡಿಮೆ
– ಪೆಟ್ರೋಲ್‌ ವೆಚ್ಚಕ್ಕೆ ಬೇಕಾಗುವಷ್ಟು ಮೊತ್ತ ಸಿಎನ್‌ಜಿಗೆ ಬೇಡ
– ಕಿಟ್‌ ಅಳವಡಿಸಿದ ವೆಚ್ಚ ವಾಹನ ಮಾಲೀಕರಿಗೆ ಶೀಘ್ರವೇ ವಾಪಸ್‌
– ಪರಿಸರ ಮಾಲಿನ್ಯವೂ ಕಡಿಮೆಯಾಗುವ ಸಾಧ್ಯತೆ
– ಪ್ರತಿ ಕೆಜಿ ಸಿಎನ್‌ಜಿಗೆ ಸರಾಸರಿ 30 ಕಿ.ಮೀ. ಮೈಲೇಜ್‌

Advertisement

ಅನಾನುಕೂಲಗಳೇನು?
– ಎಲ್ಲಾ ಕಡೆಗಳಲ್ಲಿ ಸಿಎನ್‌ಜಿ ಬಂಕ್‌ಗಳು ಇಲ್ಲ
– ಸಿಎನ್‌ಜಿ ಕಿಟ್‌ ಹಾಕಿದ ಮೇಲೆ ಕಾರಿನ ಲಗೇಜ್‌ ಇಡುವ ಸ್ಥಳದ ಕಡಿತ
– ಸಿಎನ್‌ಜಿ ಟ್ಯಾಂಕ್‌ನ ಸಾಮ ರ್ಥ್ಯವೂ ಕಡಿಮೆ
– ಕಾಲ ಕಾಲಕ್ಕೆ ಸಿಎನ್‌ಜಿ ಕಿಟ್‌ ಅನ್ನು ಪರೀಕ್ಷಿಸಬಹುದಾದ ಅನಿವಾರ್ಯತೆ

Advertisement

Udayavani is now on Telegram. Click here to join our channel and stay updated with the latest news.

Next