Advertisement

Stadia : ಬ್ರೌಸರ್‌ ಆಧಾರಿತ ಗೂಗಲ್‌ ವಿಡಿಯೋ ಗೇಮ್‌ ಸ್ಟ್ರೀಮಿಂಗ್‌

06:21 AM Mar 20, 2019 | udayavani editorial |

ಸ್ಯಾನ್‌ ಫ್ರಾನ್ಸಿಸ್ಕೋ : Alphabet Inc ನ ಗೂಗಲ್‌ ಸಂಸ್ಥೆ “ಸ್ಟೇಡಿಯ” ಹೆಸರಿನ ಬ್ರೌಸರ್‌ ಆಧಾರಿತ ವಿಡಿಯೋ ಗೇಮ್‌ ಸ್ಟ್ರೀಮಿಂಗ್‌ ಸೇವೆಯನ್ನು  ಆರಂಭಿಸಿದೆ. 

Advertisement

ಗೂಗಲ್‌ ಕಂಪೆನಿಯು ತನ್ನ cloud ತಾಂತ್ರಿಕತೆ ಮತ್ತು ಡೇಟಾ ಸೆಂಟರ್‌ಗಳ ಜಾಗತಿಕ ಜಾಲವನ್ನು ಬಂಡವಾಳವಾಗಿರಿಸಿಕೊಂಡು ಈ ಸೇವೆಯನ್ನು ಆರಂಭಿಸಿದ್ದು ವಿಶ್ಯಾದ್ಯಂತದ ತರುಣ ಸಮುದಾಯವನ್ನು ತನ್ನ ಈ ಸೇವೆಯತ್ತ ಸೆಳೆದುಕೊಳ್ಳುವ ವಿಶಿಷ್ಟ  ಯತ್ನ ಮಾಡಿದೆ.

ಗೂಗಲ್‌ನ ಈ ತಾಂತ್ರಿಕತೆಯಿಂದಾಗಿ ಬಳಕೆದಾರರು ತಮ್ಮ ಇಂಟರ್‌ನೆಟ್‌ ಬ್ರೌಸರ್‌ ಮೂಲಕ ಗೇಮ್‌ಗಳನ್ನು ಆಡಬಹುದಾಗಿದೆ ಮತ್ತು ಯಾವುದೇ ರೀತಿಯ ಕಂಟೆಂಟ್‌ ತಮ್ಮ ಉಪಕರಣಕ್ಕೆ ಡೌನ್‌ಲೋಡ್‌ ಆಗುವುದನ್ನು ಕಾಯ ಬೇಕಾಗಿರುವುದಿಲ್ಲ. ಹಾಗಾಗಿ ಅವರು ಯೂಟ್ಯೂಬ್‌ ನಲ್ಲಿ ವಿಡಿಯೋಗಳನ್ನು ನೋಡುವ ರೀತಿಯಲ್ಲೇ ಈ ಗೇಮ್‌ಗಳಿಗೆ ಪ್ರವೇಶ ಪಡೆಯಬಹುದಾಗಿರುತ್ತದೆ. 

ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿ ನಿನ್ನೆ ಮಂಗಳವಾರ ನಡೆದಿದ್ದ ಗೇಮ್‌ ಡೆವಲಪರ್ಸ್‌ ಕಾನ್ಫರೆನ್ಸ್‌ನಲ್ಲಿ ಪ್ರಧಾನ ಆಶಯ ಭಾಷಣ ಮಾಡಿದ ಗೂಗಲ್‌ ನ ಸುದ್ದಿ ಸೇವಾ ವಿಭಾಗದ ಉಪಾಧ್ಯಕ್ಷ ಫಿಲ್‌ ಹ್ಯಾರಿಸನ್‌ ಅವರು “ಸ್ಟೇಡಿಯ ಬಳಕೆದಾರರಿಗೆ ತತ್‌ಕ್ಷಣ ಗೇಮ್‌ ಪ್ಲೇ ಮಾಡುವುದಕ್ಕೆ ಅವಕಾಶ ಕಲ್ಪಿಸುತ್ತದೆ’ ಎಂದು ಹೇಳಿದರು. 

ಗೂಗಲ್‌ ಈ ಸೇವೆಯ ಮೂಲಕ ಈ ವಾರ ವಿಡಿಯೋ ಗೇಮ್‌ ಉದ್ದಿಮೆಯ ಸುಮಾರು 25,000 ಜನರನ್ನು ಜತೆಯಾಗಿ ತಂದಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next