Advertisement

ಸಾವಲ್ಲೂ ಒಂದಾದ ಅಣ್ಣ ತಮ್ಮ!

06:33 PM Jun 14, 2021 | Team Udayavani

ಕಾರ್ಕಳ : ಒಂದೆ ದಿನದಲ್ಲಿ ಸಹೋದರರಿಬ್ಬರು ಮೃತ ಪಟ್ಟ ಘಟನೆ ಇಂದು(ಸೋಮವಾರ, ಜೂ.14) ಕಾರ್ಕಳದಲ್ಲಿ ನಡೆದಿದೆ.

Advertisement

ಸಾಣೂರು ನಿವಾಸಿ  ಮಿಯಾರು ಗುಂಡಾಜೆ ಬಳಿಯ  ರಾಜಾರಾಮ. ರಾವ್ (55) ಇಂದು ಬೆಳಗ್ಗೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಬೆಳಗ್ಗೆ ಮೃತ ಪಟ್ಟರೆ, ಸಹೋದರ ಸಾಣೂರು ಚಿಕ್ಕಬೆಟ್ಟು ನಿವಾಸಿ ಗಣೇಶ್ ರಾವ್ (60)  ಸಂಜೆ ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ  ಅನಾರೋಗ್ಯದಿಂದ ಮೃತ ಪಟ್ಟಿದ್ದಾರೆ.

ಇದನ್ನೂ ಓದಿ : ಈ ಬಾರಿ ಗೋವಾ ಗೇರು ಬೀಜಕ್ಕೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ : ಸಿದ್ಧಾರ್ಥ ಜಾಂಟಯೆ

ರಾಜರಾಮ್ ರಾವ್ ಅವರು ಇತ್ತೀಚೆಗೆ ಅಪಘಾತಕ್ಕೆ ಒಳಗಾಗಿದ್ದು, ಚಿಕಿತ್ಸೆಗಾಗಿ ಮಣಿಪಾಲ ಇನ್ನಿತರ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಅಂತಿಮವಾಗಿ ಕಾರ್ಕಳ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ  ಮೃತ ಪಟ್ಟಿದ್ದಾರೆ.

ಹಿರಿಯ ಸಹೋದರ ಗಣೇಶ್ ರಾವ್, ಚಾಂಡಿಸ್  ಕಾಯಿಲೆಯಿಂದ  ಬಳಲುತಿದ್ದವರು ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು, ಇಂದು ಸಂಜೆ 5 ಗಂಟೆಯ ಆಸುಪಾಸಿನ ಸಮಯದಲ್ಲಿ ಮೃತ ಪಟ್ಟಿದ್ದಾರೆ.

Advertisement

ಇಬ್ಬರು ಪ್ರತ್ಯೇಕವಾಗಿ ಕುಟುಂಬ ಸದಸ್ಯರ ಜೊತೆ ವಾಸವಿದ್ದರು. ಮೃತರು ಕುಟಂಬವನ್ನು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಇದನ್ನೂ ಓದಿ : ಜುಲೈ 1 ರಿಂದ ಸಿಂಡಿಕೇಟ್ ಬ್ಯಾಂಕ್ ನ ಈಗಿರುವ ಐ ಎಫ್​ ಎಸ್ ​ಸಿ ಕೋಡ್ ನಿಷ್ಕ್ರಿಯ..!

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next